Past Life And Karma: ಸಾವಿನ ನಂತರದ ಅವಧಿ ಹೇಗೆ ಇರುತ್ತೆ ಎನ್ನುವ ಭಯಾನಕ ಸತ್ಯ ಬಿಚ್ಚಿಟ್ಟ ವ್ಯಕ್ತಿ; ಸ್ವತಃ ಸಾವನ್ನು ಆತ ನೋಡಿದ್ದು ಹೇಗೆ?
ನಾವು ಬದುಕನ್ನು ಹೇಗೋ ನಡೆಸುತ್ತೇವೆ ಆದರೆ ಸತ್ತ ನಂತರ ಹೇಗಿರುತ್ತೇವೆ, ಏನು ಮಾಡುತ್ತೇವೆ ಎಂದು ವಿಷಯಗಳ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ ಇಂತಹ ಕುತೂಹಲದ ಗಡಿಯನ್ನು ದಾಟಿ ಒಬ್ಬ ವ್ಯಕ್ತಿ ಸಾವನ್ನು ಹತ್ತಿರದಿಂದ ನೋಡಿ ಬಂದಿದ್ದಾನೆ. ಆತನ ಅನುಭವವನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ವ್ಯಕ್ತಿ ಮರಣ ನಂತರದ ಜೀವನ ಹೇಗಿರುತ್ತೆ ಎನ್ನುವುದನ್ನು ನೋಡಿಕೊಂಡು ಬಂದಿರುವುದಾಗಿ ಹೇಳಿದ್ದಾರೆ. ಉತ್ತರ ಕರೋಲಿನದ, ಡೇವಿಡ್ ಹ್ಯಾಂಜೆಲ್ ತಾವು ಸಾವಿನ ಸಮೀಪ ಹೋಗಿ ಬಂದಿದ್ದು ಅದರ ಅನುಭವಗಳನ್ನು ಹಂಚಿಕೊಂಡಿದ್ದಾರೆ.
2018ರಲ್ಲಿ ಡೇವಿಡ್ ಅವರಿಗೆ ಸೆಪೀಸ್ ಮತ್ತು ಶ್ವಾಸಕೋಶದ ಸೋಂಕು ಉಂಟಾಗಿತ್ತು ಇದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸುಮಾರು ಎರಡು ತಿಂಗಳವರೆಗೂ ಕೋಮಾದಲ್ಲಿ ಇರಬೇಕಾಯಿತು. ಈ ಸಂದರ್ಭದಲ್ಲಿ ಅವರಿಗೆ ಆಧ್ಯಾತ್ಮಿಕ ಅನುಭವವಾಗಿತ್ತು. ಸುಂದರವಾದ ಅದ್ಭುತವಾದ ರೇಷ್ಮೆ ಅಂತಹ ಆಕಾಶವನ್ನು ರಾತ್ರಿಯ ಸಮಯದಲ್ಲಿ ನೋಡಿರುವದಾಗಿ ಡೇವಿಡ್ ಹೇಳಿದ್ದಾರೆ. ಅಲ್ಲಿ ಯಾವುದೇ ಆರಂಭವೋ ಅಥವಾ ಅಂತ್ಯ ಇರಲಿಲ್ಲ.
ಚಿನ್ನದ ಬಿಳಿ ಬೆಳಕನ್ನು ತೋರಿಸಬಲ್ಲ ಎರಡು ಜೀವಿಯನ್ನು ಅವರು ನೋಡಿದ್ದಾರಂತೆ. ಅನಾರೋಗ್ಯದಲ್ಲಿದ್ದಾಗ ಕೋಮಾದಲ್ಲಿ ಕಣ್ಣು ಮುಚ್ಚಿ ಮಲಗಿದ್ದೆ ಕಣ್ಣು ತೆರೆದಾಗ ನಾನು ಆಕಾಶದಲ್ಲಿದ್ದೆ ಆಕಾಶ ರಾತ್ರಿಯ ಸಮಯದಲ್ಲಿಯೂ ರೇಷ್ಮೆಯಂತೆ ಹೊಳೆಯುತ್ತಿತ್ತು. ಮೋಡ, ನಕ್ಷತ್ರಗಳು ಇಲ್ಲದ ಸ್ವಚ್ಛಂದ ಆಕಾಶ ಅದಾಗಿತ್ತು. ಅಲ್ಲಿ ತಾನು ದೇವದೂತರನ್ನು ನೋಡಿದ್ದೇನೆ ಎಂದು ಡೇವಿಡ್ ಹೇಳಿದ್ದಾರೆ.
ಇನ್ನು ಆಶ್ಚರ್ಯಕರವಾದ ವಿಷಯ ಅಂದ್ರೆ ಅಲ್ಲಿ ಪಬ್ ಕೂಡ ಇತ್ತು ಎಂದು ಡೇವಿಡ್ ಹೇಳಿದ್ದಾರೆ ಸುಂದರವಾದ ಬಣ್ಣದ ಬಾಟಲಿಗಳು ಇದ್ದವು ಆದರೆ ಮಧ್ಯಪಾನ ಇರಲಿಲ್ಲ. ಪಬ್ ಗೆ ಹೋದ ನಂತರ ಗಗನಚುಂಬಿ ಕಟ್ಟಡದ ಬದಿಯಲ್ಲಿ ತೇಲುತ್ತಾ ನಡೆದಾಡಿದಂತೆ ಕಾಣಿಸಿತು. ಡೇವಿಡ್ ಅವರು ಕೋಮದಿಂದ ಎಚ್ಚರಗೊಂಡ ಕೂಡಲೇ ಸಂಪೂರ್ಣ ಗುಣಮುಖರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.