Bank Holidays: ಬ್ಯಾಂಕ್ ಗ್ರಾಹಕರಿಗಾಗಿ ಏಪ್ರಿಲ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ ಹೀಗಿದೆ

Advertisement
ಪ್ರತಿ ವರ್ಷ ಮಾರ್ಚ್ ಅಂತ್ಯ ವೇಳೆಗೆ ಆ ವರ್ಷದ ಹಣಕಾಸು ವರ್ಷ (Financial year) ಮುಕ್ತಾಯವಾಗುತ್ತದೆ. ಮತ್ತು ಹೊಸ ಹಣಕಾಸು ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದೆ. ಇದರಿಂದ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರಸ್ತುತ ಜನರೆಲ್ಲರೂ ಒಂದಲ್ಲಒಂದು ಕಾರಣದಿಂದ ಬ್ಯಾಂಕ್ ಮೇಲೆ ಅವಲಂಬಿತವಾಗಿರುತ್ತೇವೆ ಅವರು ಈ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ನೇರವಾಗಿ ಬ್ಯಾಂಕುಗಳಿಗೆ ಸಂಬಂಧಿಸಿರುವ ಸಿಬ್ಬಂದಿಗಳಿಗಾಗಿ ಹಾಗೂ ಎಲ್ಲಾ ಬ್ಯಾಂಕ್ ಗ್ರಾಹಕರಿಗಾಗಿ (For Bank Customers) ಏಪ್ರಿಲ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಎಲ್ಲಾ ಭಾರತೀಯ ಬ್ಯಾಂಕುಗಳ ಕಾರ್ಯಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ನಿಯಂತ್ರಿಸುತ್ತದೆ, ಬ್ಯಾಂಕಿಂಗ್ ವೇಳಾಪಟ್ಟಿ ಮತ್ತು ರಜಾದಿನಗಳು ಕೂಡಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣದಲ್ಲಿಯೇ ಬರುತ್ತದೆ. ಈ ಬಾರಿ ಏಪ್ರಿಲ್ ನಲ್ಲಿ ಬಹಳಷ್ಟು ಹಬ್ಬಗಳು (Festivals) ಇರುವುದರಿಂದ ಭಾರತದಲ್ಲಿ April 2023 ರಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 15 ದಿನಗಳು ರಜೆ ಇರಲಿವೆ. ಗ್ರಾಹಕರೇನಾರು ಬ್ಯಾಂಕ್ ವ್ಯವಹಾರ ಮಾಡುವುದ್ದಿದ್ದರೆ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
2023 ರ April ತಿಂಗಳಿನ Bank holidays:
ಎರಡನೇ, ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 14 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ
April 1 – ಶನಿವಾರ, ಬ್ಯಾಂಕ್ ಖಾತೆ ವಾರ್ಷಿಕ ಮುಕ್ತಾಯ
April 2 – ಭಾನುವಾರದ, ರಜೆ
April 4 – ಮಂಗಳವಾರ, ಮಹಾವೀರ ಜಯಂತಿ ಪ್ರಯುಕ್ತ ದೇಶದ ಹಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ
April 5 – ಬುಧವಾರ, ಬಾಬು ಜಗಜೀವನ್ ರಾಮ್ ಜನ್ಮದಿನ ಹೈದರಾಬಾದ್ /ತೆಲಂಗಾಣದಲ್ಲಿ ರಜೆ
April 7- ಶುಕ್ರವಾರ, ಗುಡ್ ಫ್ರೈಡೆ ರಜೆ
April 8 – ಎರಡನೇ ಶನಿವಾರ (Second Saturday)
April 9- ಭಾನುವಾರದ, ರಜೆ
April 14- ಶುಕ್ರವಾರ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ
April 15- ಶನಿವಾರ, ವಿಷು ಬೋಹಾಗ್ ಬಿಹು
April 16- ಭಾನುವಾರದ, ರಜೆ
April 18- ಮಂಗಳವಾರ, ಶಬ್-ಉಲ್-ಖಾದರ್ ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ
April 21- ಶುಕ್ರವಾರ, ಈದ್-ಉಲ್-ಫಿತರ್
April 22- ನಾಲ್ಕನೇ ಶನಿವಾರ ಮತ್ತು ರಂಜಾನ್ ಈದ್
April 23- ಭಾನುವಾರದ, ರಜೆ
April 30 – ಭಾನುವಾರದ, ರಜೆ