ಸಾಂಬಾರು ಪದಾರ್ಥಗಳ ಸಾಲಿನಲ್ಲಿ ಭಾರತೀಯರ ಬಹುಮೆಚ್ಚಿನ ಹಾಗೂ ವಿದೇಶದಲ್ಲೂ ಬೇಡಿಕೆ ಇರುವ ಉತ್ಪನ್ನ ಯಾವುದೆಂದಾಗ ನೆನಪಾಗೋದು ಕಾಳು ಮೆಣಸು ಎಂದು.ಇಂದು ಅಂತಾರಾಷ್ಟ್ರೀಯ ಮಟ್ಟದ ವರೆಗೂ ವಿವಿಧ ಕಾರಣಕ್ಕೆ ಬಳಕೆಯಾಗುವ ಕಾಳುಮೆಣಸಿನ (Black pepper) ಅಪೂರ್ವ ಸಂಗತಿಗಳ ಬಗ್ಗೆ ನಾವಿಂದು ಬೆಳಕು ಚೆಲ್ಲಲಿದ್ದು ಹೊಸದಾಗಿ ಕೃಷಿ ಮಾಡುವೆ ಅನ್ನೊರಿಗೆ ಈ ಲೇಖನ ಉತ್ತಮ ಮಾರ್ಗದರ್ಶನ ನೀಡಬಲ್ಲದು.
ಸಾಂಬಾರು ಪದಾರ್ಥಗಳ ರಾಣಿ, ಕರಿಚಿನ್ನ ಖ್ಯಾತಿಯ (black gold) ಕಾಳು ಮೆಣಸಿನ ಬೆಳೆ ರಾಷ್ಟ್ರೀಯ ವ್ಯಾಪಿಯಾಗಿದ್ದು ಇದು ಉಪಬೆಳೆ ಪಟ್ಟಿಗೆ ಬರಲಿದೆ. ಅಂದರೆ ಅಡಿಕೆ ಅಥವಾ ತಗು ಬೆಳೆದಾರ ಅದಕ್ಕೆ ಬಳ್ಳಿ ಹಬ್ಬಲು ಬಿಟ್ಟರೆ ಕಾಳು ಮೆಣಸು ನಿಮಗೆ ಸಿಗಲಿದೆ. ಆದರೆ ಈ ಕಾಳು ಮೆಣಸು ನೀವು ಬೆಳೆಯುವ ಅಡಿಕೆ ಮತ್ತು ತೆಂಗಿಗಿಂತ ದುಪ್ಪಟ್ಟು ಲಾಭ ತಂದು ಕೊಡುತ್ತದೆ ಎಂಬ ವಿಚಾರದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.
ಹಬ್ಬುವ ಬಳ್ಳಿಯಲ್ಲೇ ಆದಾಯ
ಅಡಿಕೆಯಿಂದ ವಾರ್ಷಿಕನಾಲ್ಕು ಲಕ್ಷ ಆದಾಯ ಬಂದರೆ ಅಡಿಕೆಗೆ ಹಬ್ಬುವ ಕಾಳು ಮೆಣಸಿನ ಬಳ್ಳಿಯಿಂದ ನಿಮಗೆ ಆರರಿಂದ 8ಲಕ್ಷದವರೆಗೆ ಲಾಭ ಸಿಗಲಿದೆ. ಈ ಒಂದು ಇಳುವರಿಗೆ ಉತ್ತಮ ಬೇಡಿಕೆ ಬರಲು ಪ್ರಮುಖ ಕಾರಣ ಏನೆಂದು ನೋಡುವುದಾದರೆ
*ಇಂದು ಕೃಷಿಕರು ಕಡಿಮೆ ಇದ್ದು ಕಾಳು ಮೆಣಸಿನ ಬೇಡಿಕೆ ಉತ್ತಮ ಇದೆ.
*ಅಂತಾರಾಷ್ಟ್ರೀಯ ಮಟ್ಟದ (International level) ವರೆಗೂ ಕಾಳು ಮೆಣಸಿನ ಮೇಡಿಕೆ ಇದೆ.
*ರೋಗ ರುಜಿನದ ಸಂಖ್ಯೆ ಹೆಚ್ಚಾಗಿದ್ದು ಕೆಲ ರೋಗಕ್ಕೆ ಇದು ಆಯುರ್ವೇದಿಕ್ ಮೆಡಿಸಿನ್ ಆದ ಕಾರಣ ಉಪಯುಕ್ತವಾಗಿದೆ.
*ನೀರು , ಗೊಬ್ಬರ ಸ್ಪ್ರೆ (spre) ಮಾತ್ರ ಖರ್ಚು ಬರಲಿದ್ದು ನಿರ್ವಹಣೆ ಸುಲಭವಾಗಿದೆ.
ಅಧ್ಯಯನ ಮಾಡಬೇಕು?
ಕಾಳು ಮೆಣಸಿಂದ ಲಾಭ ಪಡೆಯಬೇಕಾದರೆ ತನ್ನಿಂದ ತಾನೇ ಲಾಭ ಗಿಟ್ಟಿಸಲಾಗದು ಅದಕ್ಕೆ ಕೆಲ ಸ್ಟಡಿ (study) ಕೂಡ ಮಾಡಬೇಕು.ವಿಜ್ಞಾನಿ ಕಾಲೇಜಿನ ನೆರವು ಪಡೆದು ಯಾವುದು ಸೂಕ್ತ ಮಣ್ಣಿನ ಫಲವತ್ತತೆ ಇತ್ಯಾದಿಗಳ ಅರಿವು ನಮಗೆ ಇರಬೇಕು. ಆ ನಿಟ್ಟಿನಲ್ಲಿ ಮಲೆನಾಡಿಗೆ ಪಣಿಯೂರು 2ವೆರೈಟಿ ತುಂಬಾ ಸೂಕ್ತವಾಗಿದೆ. ಇದು ಸಸಿ ಹಾಕಿದ್ದ ಮೂರು ವರ್ಷಕ್ಕೆ ಗಿಡ ಒಂದರಲ್ಲಿ 7kg ಕಾಳು ಮೆಣಸು ಸಿಗಲಿದೆ. ಅಡಿಕೆ ಗಿಡಕ್ಕೆ ಹಬ್ಬಿಸುವಾಗ ಗಿಡಕ್ಕೆ ಹಾನಿಯಾಗಬಾರದು ಮತ್ತು ಗಾಳಿ ಬೆಳಕು ಸಿಗಬೇಕು ಅನ್ನುವ ಉದ್ದೇಶಕ್ಕೆ ಒಂದು ಗಿಡ ಬಿಟ್ಟು ಇನ್ನೊಂದು ಮಾಡಬಹುದು.
ಈ ವಿಚಾರ ನೆನಪಿಡಿ
ಕಾಳು ಮೆಣಸು ಬೆಳೆ ಬೆಳೆಯುವವರು ಮಣ್ಣಿನ ನಿರ್ವಹಣೆ, ನೀರಿನ ನಿರ್ವಹಣೆ ಹಾಗೂ ಸ್ಪ್ರೆ ಹೇಗೆ ಎಂಬ ಬಗ್ಗೆ ಮೊದಲೇ ತಿಳಿದಿರಬೇಕು. ಮಳೆಗಾಲಕ್ಕೆ ನೀರು ಕಮ್ಮಿ ಬೇಸಿಗೆಗೆ ಅಧಿಕ ನೀರು ಬೇಕಾಗುವುದು. ಇದು ಸೂಕ್ಷ್ಮ ಬೆಳೆಯಾದ ಕಾರಣ ಇದಕ್ಕೆ ಕಡಿಮೆ ರಾಸಾಯನಿಕ ಹಾಗೂ ಅಧಿಕ ಕೊಟ್ಟಿಗೆ ಗೊಬ್ಬರದ ಅಗತ್ಯವಿದೆ. ಇದರಿಂದ ಶೀಘ್ರ ಸೊರಗು ರೋಗ ಹಾಗೂ ಬೇರಿನ ಗುಣ ನಾಶ ಕೂಡ ಆಗಲಾರದು. ನೀವು ಸ್ಪ್ರೆ ಮಾಡುವುದು ಸರಿಯಾದರೆ ಎಲೆರೋಗ ಕೀಟಬಾಧೆ ಸಹ ತಡೆಗಟ್ಟಬಹುದು.
ಒಟ್ಟಾರೆಯಾಗಿ ಕಾಳು ಮೆಣಸಿಗೆ ಕೆಜಿಗೆ 450ರಿಂದ 500ರೂ. ಇದ್ದು ಒಂದು ಗಿಡದಲ್ಲೇ ಮೂರು ವರ್ಷದ ಬಳಿಕ 6-7kg ಬರುತ್ತದೆ ಎಂದಾದರೆ ಎಷ್ಟು ಲಾಭ ಇರಬಹುದೆಂದು ನೀವೆ ಅಂದಾಜಿಸಬಹುದು. ಹಾಗಾಗಿ ಅಡಿಕೆಗಿಂತ ಇದು ತುಂಬಾ ಲಾಭದಾಯಕ ಬೆಳೆಯಾಗಿದೆ.