APJ Abdul Kalam: ಮಹಾಭಾರತದಲ್ಲಿ ಅಬ್ದುಲ್ ಕಲಾಂ ಇಷ್ಟಪಡುವಂತಹ ಏಕೈಕ ಪಾತ್ರ ಯಾವುದು ಗೊತ್ತಾ?
ಇಂದು ನಮ್ಮ ಭಾರತ ದೇಶ ವಿಶ್ವದಲ್ಲಿ ವಿಶ್ವಗುರು ಆಗುವಂತಹ ಸ್ಥಾನವನ್ನು ತಲುಪಿದೆ ಎಂದರೆ ನಿಜಗು ಕೂಡ ಅದಕ್ಕೆ ಸಾವಿರಾರು ಸಾಧಕರ ಕೊಡುಗೆ ಇದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಂದ ಹಿಡಿದು ನಮ್ಮ ಭಾರತ ದೇಶದ ಭಿನ್ನ ವಿಭಿನ್ನವಾದ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಸಿಗುವ ಹಾಗೆ ಸಾಧನೆ ಮಾಡಿದವರು ಕೂಡ ಸೇರಿಕೊಳ್ಳುತ್ತಾರೆ. ಅಂತ ಹೋದೆ ಸಾಧಕರಲ್ಲಿ ನಾವು ಇವತ್ತಿನ ಆರ್ಟಿಕಲ್ ನಲ್ಲಿ ಮಾತನಾಡಲು ಹೊರಟಿರುವುದು ಎಪಿಜೆ ಅಬ್ದುಲ್ ಕಲಾಂ(APJ Abdul Kalam) ಅವರ ಬಗ್ಗೆ. ಪ್ರತಿಯೊಬ್ಬರೂ ಕೂಡ ಮೆಚ್ಚುವಂತಹ ಈ ವ್ಯಕ್ತಿತ್ವದ ಬಗ್ಗೆ ಕೆಲವೊಂದು ಗೊತ್ತಿಲ್ಲದೆ ಇರುವ ಮಾಹಿತಿಗಳನ್ನು ಇವತ್ತಿನ ಆರ್ಟಿಕಲ್ ನಲ್ಲಿ ತಿಳಿಯೋಣ ಬನ್ನಿ.
ತಮಿಳುನಾಡಿನ ಒಂದು ಚಿಕ್ಕ ಹಳ್ಳಿಯಿಂದ ಪ್ರಾರಂಭಿಸಿದಂತಹ ಈ ವ್ಯಕ್ತಿತ್ವ ಇಡೀ ವಿಶ್ವವೇ ಮೆಚ್ಚುವಂತಹ ವಿಜ್ಞಾನಿಯಾಗಿ ರೂಪುಗೊಳ್ಳುತ್ತಾರೆ ಎಂಬುದನ್ನು ಯಾರು ಕೂಡ ಊಹಿಸಿರಲು ಕೂಡ ಸಾಧ್ಯವಿಲ್ಲ. ಹಿರಿಯರು ಒಂದು ಮಾತನ್ನು ಹೇಳುತ್ತಾರೆ ಸಾಮಾನ್ಯವಾಗಿ ಹಿಂದೂ ಮುಸ್ಲಿಂ ನಡುವಿನ ಜಗಳ ಖಂಡಿತವಾಗಿ ನೀವು ಸಾಕಷ್ಟು ಬಾರಿ ನೋಡಿರಬಹುದು. ಆದರೆ ಹಿಂದುಗಳು ದ್ವೇಷಿಸದ ಒಬ್ಬ ಮುಸಲ್ಮಾನ್ ಇದ್ದಾರೆ ಎಂದರೆ ಅದು ಖಂಡಿತವಾಗಿ ಎಪಿಜೆ ಅಬ್ದುಲ್ ಕಲಾಂ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳುತ್ತಾರೆ. ಭಾರತದ ಮಿಸೈಲ್ ಮ್ಯಾನ್ ಆಗಿ ಸಾಕಷ್ಟು ರಾಕೆಟ್ ಉಡಾವಣೆಗಳ ಹಿಂದಿನ ರೂವಾರಿಯಾಗಿ ಅಬ್ದುಲ್ ಕಲಾಂ(Abdul Kalaam) ಕಾಣಿಸಿಕೊಳ್ಳುತ್ತಾರೆ.
ಭಾರತ ಇಂದು ಬಾಹ್ಯಾಕಾಶ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಅದ್ವಿತೀಯ ಸಾಧನೆ ಮಾಡುತ್ತಿದೆ ಎಂದರೆ ನಿಜಕ್ಕೂ ಕೂಡ ಅದರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಕೊಡುಗೆ ಕೂಡ ಇದೆ ಎಂಬುದನ್ನು ಪ್ರತಿಯೊಬ್ಬರೂ ಕೂಡ ನೆನಪಿಸಿಕೊಳ್ಳಬೇಕಾಗುತ್ತದೆ. ಕೇವಲ ವಿಜ್ಞಾನಿಯಾಗಿ ಮಾತ್ರವಲ್ಲದೆ ಅಬ್ದುಲ್ ಕಲಾಂ ಅವರು ಭಾರತ ದೇಶದ ಅತ್ಯಂತ ನೆಚ್ಚಿನ ರಾಷ್ಟ್ರಪತಿಯಾಗಿ ಕೂಡ ಕಾರ್ಯನಿರ್ವಹಿಸಿರುವುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಹುಟ್ಟಿರುವುದಕ್ಕಾಗಿ ಅಬ್ದುಲ್ ಕಲಾಂ ಅಲ್ಲ ಅಬ್ದುಲ್ ಕಲಾಂ ಭಾರತದಲ್ಲಿ ಹುಟ್ಟಿದ್ದಾರೆ ಎಂಬುದಾಗಿ ನಾವು ಹೆಮ್ಮೆ ಪಡಬೇಕಾಗುತ್ತದೆ. ತಮ್ಮ ಜೀವನದ ಪ್ರತಿಯೊಂದು ಅಧ್ಯಾಯವನ್ನು ಕೂಡ ದೇಶದ ಸೇವೆಗಾಗಿ ಮುಡಿಪಿಟ್ಟ ಅಬ್ದುಲ್ ಕಲಾಂ ನಿಜಕ್ಕೂ ಕೂಡ ಪ್ರಾತಸ್ಮರಣೀಯರು. ಇನ್ನು ಮಹಾಭಾರತದ ಬಗ್ಗೆ ಕೂಡ ಸಾಕಷ್ಟು ಆಸಕ್ತಿಯನ್ನು ಹೊಂದಿದ ಅಬ್ದುಲ್ ಕಲಾಂ ಅವರ ನೆಚ್ಚಿನ ಪಾತ್ರ ಯಾವುದಾಗಿತ್ತು ಗೊತ್ತ ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಹಿಂದೂ ಸಂಸ್ಕೃತಿಯ ಪವಿತ್ರ ಗ್ರಂಥವಾಗಿರುವಂತಹ ಮಹಾಭಾರತದಲ್ಲಿ(Mahabharatha) ಕೂಡ ಅಬ್ದುಲ್ ಕಲಾಂ ಅವರಿಗೆ ಆಸಕ್ತಿ ಇತ್ತು ಹಾಗೂ ಪ್ರತಿಯೊಂದು ಶ್ಲೋಕ ಮತ್ತು ಅಧ್ಯಾಯಗಳನ್ನು ಕೂಡ ಅವರು ಕರಗತ ಮಾಡಿಕೊಂಡಿದ್ದರು ಎಂಬುದನ್ನು ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಹೇಳಿಕೊಂಡಿದ್ದಾರೆ. ಇನ್ನು ಈ ಮಹಾಭಾರತದಲ್ಲಿ ಅವರು ತಮಗೆ ಇಷ್ಟ ಆಗಿರುವಂತಹ ಪಾತ್ರ ವಿದುರ ಎಂಬುದಾಗಿ ಒಂದು ವೇದಿಕೆಯಲ್ಲಿ ನಡೆದಿರುವಂತಹ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ವಿದುರ ಯಾರು ಎಂದು ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು. ವ್ಯಾಸ ಮಹರ್ಷಿಗಳ ಪುತ್ರ ಹಾಗೂ ಧೃತರಾಷ್ಟ್ರ ಮತ್ತು ಪಾಂಡುವಿನ ಸಹೋದರ ಆಗಿದ್ದಾರೆ. ಕೌರವ ಸಾಮ್ರಾಜ್ಯದಲ್ಲಿ ಮಹಾರಾಜ ಧೃತರಾಷ್ಟ್ರನಿಗೆ ಪ್ರತಿಯೊಂದು ವಿಚಾರದಲ್ಲಿ ಕೂಡ ಸಲಹೆಗಾರ ಆಗಿದ್ದರು.