Karnataka Times
Trending Stories, Viral News, Gossips & Everything in Kannada

Arecanut Plantation: ಅಡಕೆ ತೋಟಕ್ಕೆ ಕೋಳಿ ಗೊಬ್ಬರ ಹಾಕುವುದು ಸೂಕ್ತವೇ? ಅಸಲಿ ಸತ್ಯ ಇಲ್ಲಿದೆ.

Advertisement

ಈ ಬಾರಿ ಮಳೆ ಕೆಲವು ಕಡೆ ಅತಿಯಾಗಿ ಬಿದ್ದಿರುವುದರಿಂದ ಮುಖ್ಯವಾಗಿ ಅಡಿಕೆ ತೋಟದಲ್ಲಿ ಭೂಮಿ ಬಹಳ ತಂಪಾಗಿರುತ್ತದೆ. ಭೂಮಿಯ ಸಾರ ಉಳಿದುಕೊಳ್ಳಲು ಹಾಗೂ ಗಿಡಕ್ಕೆ ಯಾವುದೇ ರೋಗ ಬರದೇ ಇರಲು ಗೊಬ್ಬರವನ್ನು ಹಾಕಬೇಕು. ಸಾಮಾನ್ಯವಾಗಿ ಅಡಿಕೆ ತೋಟ (Arecanut Plantation) ಕ್ಕೆ ಹಸುವಿನ ಗೊಬ್ಬರವನ್ನು ಹಾಕಲಾಗುತ್ತದೆ ಆದರೆ ಈ ಬಾರಿ ಹಸುವಿನ ಗೊಬ್ಬರ ತುಸು ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ರೈತರು ಕೋಳಿ ಗೊಬ್ಬರ ಹಾಕುವುದಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ತೋಟಕ್ಕೆ ಕೋಳಿ ಗೊಬ್ಬರ ಹಾಕುವುದು ಎಷ್ಟು ಉತ್ತಮ ಇದರಿಂದ ಫಸ್ಸಲ್ಲಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೋಳಿ ಗೊಬ್ಬರ ಹಾಕುವುದು ಎಷ್ಟು ಒಳ್ಳೆಯದು:

ಅಡಿಕೆ ತೋಟ (Arecanut Plantation) ದಲ್ಲಿ ನೆಲ ಬಹಳ ತೇವಾಂಶದಿಂದ ಕೂಡಿದ್ದರೆ ಉಷ್ಣಾಂಶವನ್ನು ಕೊಡುವಂತಹ ಕೋಳಿ ಗೊಬ್ಬರ ಹಾಕುವುದು ಒಳ್ಳೆಯದು. ಕೋಳಿ ಗೊಬ್ಬರದಲ್ಲಿ ತೌಡು ಗೊಬ್ಬರ ಹಾಗೂ ಮೊಟ್ಟೆ ಗೊಬ್ಬರ ಎಂದು ಎರಡು ರೀತಿಯ ಗೊಬ್ಬರಗಳು ಲಭ್ಯ ಇರುತ್ತವೆ. ತೌಡು ಗೊಬ್ಬರ ಒಂದು ಲೋಡ್ ಗೆ 25 ರಿಂದ 30 ಸಾವಿರ ರೂಪಾಯಿಗಳು ಇದ್ದರೆ ಮೊಟ್ಟೆ ಗೊಬ್ಬರ ಲೋಡ್ ಗೆ 60,000 ರೂ. ವರೆಗೂ ಆಗಬಹುದು. ಆದರೆ ಮೊಟ್ಟೆ ಗೊಬ್ಬರ ಹೆಚ್ಚು ಫಸಲನ್ನು ಕೊಡುತ್ತದೆ.

ಅಡಿಕೆ ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ಸಾವಯವ ಗೊಬ್ಬರ ಬಳಸುವುದು ಒಳ್ಳೆಯದು. ಹಸಿರು ಸೊಪ್ಪುಗಳ ಗೊಬ್ಬರ, ಕುರಿ ಕೋಳಿ ಗೊಬ್ಬರ, ಹಸುವಿನ ಗೊಬ್ಬರ ಗಳನ್ನು ಹಾಕಿ ಜೊತೆಗೆ ಜೀವಾಮೃತ ಸಿಂಪಡಣೆ ಮಾಡಿದರೆ ಅಡಿಕೆ ಕೃಷಿ ಬಹಳ ಉತ್ತಮವಾಗಿ ಬರುತ್ತದೆ.

ಇನ್ನು ಅಡಿಕೆ ಕೃಷಿ (Arecanut Plantation) ಗೆ ಗೊಬ್ಬರವನ್ನು ಹಾಕುವಾಗ ಅಡಿಕೆ ಮರದ ಬುಡಕ್ಕೆ ಗೊಬ್ಬರವನ್ನು ಹಾಕಬಾರದು. ಎರಡು ಇಂಚುಗಳಷ್ಟು ಅಂತರದಲ್ಲಿ ಗೊಬ್ಬರವನ್ನು ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಹಸುವಿನ ಗೊಬ್ಬರಕ್ಕಿಂತಲೂ ಕೋಳಿ ಗೊಬ್ಬರ ನೀಡಿದರೆ ಅಡಿಕೆ ಮರದ ಬುಡಕ್ಕೆ ಯಾವುದೇ ಕೊಳೆಯುವಂತಹ ರೋಗ ಬರುವುದಿಲ್ಲ. ಆದಾಗ್ಯೂ ಅತಿಯಾದ ಮಳೆ ಮುಗಿದ ನಂತರ ಕೋಳಿ ಗೊಬ್ಬರವನ್ನು ನೀಡಿದರು ನಂತರದ ದಿನಗಳಲ್ಲಿ ಹಸುವಿನ ಗೊಬ್ಬರವನ್ನೇ ನೀಡಿದರೆ ಅಡಿಕೆ ಮರದ ಫಸಲು ಇನ್ನಷ್ಟು ಜಾಸ್ತಿ ಆಗುತ್ತದೆ.

ಗೊಬ್ಬರವನ್ನು ಸರಿಯಾದ ಪ್ರಮಾಣದಲ್ಲಿ ಗಿಡಕ್ಕೆ ಹಾಕಬೇಕು ಅತಿಯಾಗಿ ಗೊಬ್ಬರ ಹಾಕುವುದು ಹಾಗೂ ನೀರು ಉಣಿಸುವುದು ಮಾಡಿದರು ಕೂಡ ಫಸಲು ಚೆನ್ನಾಗಿ ಬರುವುದಿಲ್ಲ ಅದರ ಬದಲು ಯಾವ ಸಮಯದಲ್ಲಿ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿದ ಅಡಿಕೆ ತೋಟ (Arecanut Plantation) ಕ್ಕಿಂತಲೂ ಸಾವಯವ ಗೊಬ್ಬರ ಬಳಸಿರುವ ಅಡಿಕೆ ತೋಟದಲ್ಲಿ ಸಿಗುತ್ತಿರುವ ಫಸಲು ದುಪ್ಪಟ್ಟು ಎನ್ನಬಹುದು. ಯಾಕೆಂದರೆ ಸಾವಯವ ಗೊಬ್ಬರಗಳು ಭೂಮಿಯ ಫಲವತ್ತತೆಯನ್ನು ಜಾಸ್ತಿ ಮಾಡುತ್ತವೆ ಹಾಗಾಗಿ ಇದು ಸಾಕಷ್ಟು ವರ್ಷಗಳವರೆಗೂ ಕೂಡ ಅಡಿಕೆ ಮರಗಳಲ್ಲಿ ಉತ್ತಮ ಫಸಲು ಸಿಗುವಂತೆ ಮಾಡುತ್ತದೆ. ಆದ್ದರಿಂದ ಆಯಾ ಭಾಗದ ಮಣ್ಣಿನ ಗುಣಕ್ಕೆ ಹೊಂದಾಣಿಕೆಯಾಗುವಂತೆ ಸಾವಯವ ಗೊಬ್ಬರವನ್ನು ಉಣಿಸುವುದು ಒಳ್ಳೆಯದು.

Leave A Reply

Your email address will not be published.