Karnataka Times
Trending Stories, Viral News, Gossips & Everything in Kannada

Gold Price: 1950 ರಿಂದ ಪ್ರತಿ 10 ವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಹೇಗೆ ಡಬಲ್ ಆಗಿದೆ ಗೊತ್ತಾ?

ಚಿನ್ನ ಎನ್ನುವುದು ಭೂಮಿಯ ಮೇಲೆ ಸಿಗುವಂತಹ ಅತ್ಯಂತ ಬೆಲೆ ಬಾಳುವಂತಹ ಲೋಹ ಆಗಿದೆ ಎನ್ನುವುದನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳುತ್ತಾರೆ. ಇನ್ನು ಇದರ ಬೆಲೆ ಕೂಡ ಆಗಾಗ ಏರಿಕೆ ಹಾಗೂ ಇಳಿಕೆ ಕಾಣುತ್ತಲೇ ಇರುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ 1950 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ಚಿನ್ನದ ಬೆಲೆಯಲ್ಲಿ (Gold Price) ಆಗಿರುವಂತಹ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ಯಾವ ವರ್ಷ ಎಷ್ಟೆಲ್ಲಾ ಏರಿಕೆ ಹಾಗೂ ಇಳಿಕೆ ಆಗಿದೆ ಎನ್ನುವಂತಹ ಮಾಹಿತಿಗಳನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ.

Advertisement

ಮೊದಲಿಗೆ 1950 ರಿಂದ ಪ್ರಾರಂಭವಾಗಿ ಚಿನ್ನದ ಬೆಲೆ (Gold Price) ಯನ್ನು 10 ಗ್ರಾಂ ಗೆ ನೋಡೋದಾದರೆ 99 ರೂಪಾಯಿ ಆಗಿತ್ತು. ಆದರೆ ಇದೇ ಚಿನ್ನ 1960ರಲ್ಲಿ 10 ಗ್ರಾಂ ಗೆ 112 ರೂಪಾಯಿ ಆಗಿತ್ತು. ಅಂದರೆ ಈ ಸಂದರ್ಭದಲ್ಲಿ ಹೂಡಿಕೆದಾರರಿಗೆ 13 ಪ್ರತಿಶತ ಲಾಭವನ್ನು ನೀಡಿದೆ ಎಂದು ಹೇಳಬಹುದಾಗಿದೆ. 1960 ರಲ್ಲಿ 112 ರೂಪಾಯಿ ಪ್ರತಿ 10 ಗ್ರಾಂ ಗೆ ಇದ್ದ ಚಿನ್ನದ ಬೆಲೆ (Gold Price) 1970ರಲ್ಲಿ ಒಂದೇ ಸಮನೆ 184.50 ರೂಪಾಯಿಗೆ ಏರುತ್ತದೆ. ಅಂದರೆ ಈ ಸಂದರ್ಭದಲ್ಲಿ ಹೂಡಿಕೆಯಲ್ಲಿ ಆದ ಲಾಭ 65 ಪ್ರತಿಶತ ಎಂದು ಹೇಳಬಹುದಾಗಿದೆ. ಇನ್ನು 1970 ರಿಂದ 1980ರ ನಡುವೆ ಹತ್ತು ಗ್ರಾಂ ಚಿನ್ನದ ಬೆಲೆ 1,330 ರೂಪಾಯಿಗೆ ಏರಿಕೆ ಕಾಣುತ್ತದೆ.

Advertisement

ಈ ಸಂದರ್ಭದಲ್ಲಿ ಹೂಡಿಕೆ ಮಾಡಿರುವಂತಹ ಗ್ರಾಹಕರಿಗೆ ಭರ್ಜರಿ ದಾಖಲೆ ಮಟ್ಟದ 620 ಪ್ರತಿಶತ ಲಾಭವನ್ನು ನೀಡುತ್ತದೆ. ಇದಾದ ನಂತರ 90ರ ದಶಕ ಅಂದರೆ 1990ರಲ್ಲಿ 1,330 ರಿಂದ 10 ಗ್ರಾಂ ಚಿನ್ನದ ಬೆಲೆ 3200,ಕ್ಕೆ ಏರಿಕೆಯಾಗುತ್ತಿದೆ. 140 ಪ್ರತಿಶತ ಲಾಭವನ್ನು ಈ ಹತ್ತು ವರ್ಷಗಳ ಸಂದರ್ಭದಲ್ಲಿ ಹೂಡಿಕೆದಾರರು ಕಾಣುತ್ತಾರೆ. 1990ರಲ್ಲಿ 3200 ರೂಪಾಯಿ ಪ್ರತಿ 10 ಗ್ರಾಂ ಇದ್ದ ಚಿನ್ನದ ಬೆಲೆ 2000 ಇಸವಿ ಆಸುಪಾಸಿನಲ್ಲಿ 4400 ರೂಪಾಯಿಗೆ ಏರಿಕೆ ಕಾಣುತ್ತದೆ. ಈ ಸಂದರ್ಭದಲ್ಲಿ ಈ ನಡುವೆ ಕೆಲವೊಂದು ಏರುಪೇರು ಕಂಡುಬಂದಿದ್ದಾದರೂ ಕೂಡ ದಶಕದ ಕೊನೆಯ ಭಾಗದಲ್ಲಿ ಈ ಬೆಲೆಯನ್ನು ಚಿನ್ನ ಕಾಣುತ್ತದೆ.

Advertisement

ನೀನು ನಂತರ ಮತ್ತೆ ಚೇತರಿಕೆ ಕಾಣುವಂತಹ ಚಿನ್ನದ ಬೆಲೆ 2000 ಇಸವಿಯಿಂದ 2010ನೇ ಇಸವಿಗೆ ಬರುವಾಗ 10 ಗ್ರಾಂ ಚಿನ್ನದ ಬೆಲೆ 18500 ಗೆ ಏರಿಕೆ ಕಾಣುತ್ತದೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡಿರುವಂತಹ ಜನರಿಗೆ 320 ಪ್ರತಿಶತ ಲಾಭವನ್ನು ಚಿನ್ನ ಮಾಡಿಕೊಡುತ್ತದೆ ಎಂಬುದಾಗಿ ತಿಳಿದು ಬರುತ್ತದೆ. 2010ನೇ ಇಸವಿಯಿಂದ 2020 ನೇ ಇಸ್ವಿಗೆ ಬರುವಾಗ 10 ಗ್ರಾಂ ಚಿನ್ನದ ಬೆಲೆ 48651 ರೂಪಾಯಿ ಆಗಿದೆ. ಸಂದರ್ಭದಲ್ಲಿ ಅಂದರೆ ಈ ದಶಕದಲ್ಲಿ 162 ಪ್ರತಿಶತ ಲಾಭವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿರುವವರಿಗೆ ಮಾಡಿಕೊಡಲಾಗುತ್ತದೆ. ಈ ಮೂಲಕ ನಾವು ತಿಳಿದುಕೊಳ್ಳಬೇಕಾಗಿರುವ ವಿಚಾರವೇನೆಂದರೆ, ಪ್ರತಿ 10 ವರ್ಷಗಳಿಗೊಮ್ಮೆ ಚಿನ್ನದ ಬೆಲೆಯ ಬಗ್ಗೆ ಅವಲೋಕನ ಮಾಡಿದಾಗ ಅದರ ಮೇಲೆ ಹೂಡಿಕೆ ಮಾಡಿರುವವರಿಗೆ ಚಿನ್ನ ಲಾಭವನ್ನು ತಂದುಕೊಟ್ಟಿದೆ ಎಂಬುದಾಗಿ ತಿಳಿಯಬಹುದಾಗಿದೆ.

Advertisement

1970 ರಿಂದ 1980ನೇ ದಶಕದಲ್ಲಿ ಚಿನ್ನದ ಹೂಡಿಕೆಯಲ್ಲಿ ದಾಖಲೆ ಮಟ್ಟದ ಲಾಭವನ್ನು ಪಡೆದುಕೊಳ್ಳುತ್ತಾರೆ. ಅದು ಕೂಡ ಬರೋಬ್ಬರಿ 620 ಪ್ರತಿಶತ. 2000 ಇಸವಿಯಿಂದ 2010ರ ದಶಕದವರೆಗೆ 320 ಪ್ರತಿಶತದಷ್ಟು ಲಾಭವನ್ನು ಪಡೆದುಕೊಂಡಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. ಹೀಗಾಗಿ ಸಮಯದ ಜೊತೆಗೆ ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುವುದು ಅತ್ಯಂತ ಲಾಭದಾಯಕವಾಗಿದೆ ಎಂಬುದನ್ನು ಈ ಮೇಲಿನ ಅಂಕಿ ಅಂಶ ಸಾಬೀತುಪಡಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ

Leave A Reply

Your email address will not be published.