ನಾವು ಭಾರತೀಯರು ಕೆಲವು ವರ್ಷಗಳ ಹಿಂದೆ ಹೋದರೆ ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ (Unemployment Problem) ಹೆಚ್ಚಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಉದ್ಯೋಗಗಳು ನಿರ್ಮಾಣವಾಗುತ್ತಿದ್ದು ಕೆಲವು ಉದ್ಯೋಗಗಳನ್ನು ನಾವೇ ಸೋಶಿಯಲ್ ಮೀಡಿಯಾದ ಮೂಲಕ ಕೂಡ ಸೃಷ್ಟಿಸಿಕೊಂಡಿದ್ದೇವೆ.
ಆದರೆ ಇನ್ನು ಕೆಲವರು ಕುಟುಂಬದ ಜವಾಬ್ದಾರಿಯಿಂದಾಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುವಂತಹ ಆಸಕ್ತಿಯನ್ನು ಹಾಗೂ ಅನಿವಾರ್ಯತೆಯನ್ನು ಹೊಂದಿರುತ್ತಾರೆ ಹೀಗಾಗಿ ದುಬೈನಂತಹ ದೇಶಗಳಲ್ಲಿ ಕೆಲಸ ಮಾಡುವುದಕ್ಕೆ ಹೋಗಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಆದರೆ ಅಲ್ಲಿನ ಖರ್ಚು ವೆಚ್ಚಗಳನ್ನು ಕೂಡ ನೀವು ಸರಿಯಾಗಿ ಗಮನಿಸಿಕೊಳ್ಳಬೇಕಾಗುತ್ತದೆ.
ದುಬೈನಲ್ಲಿ ಹೋಗಿ ಕೆಲಸ (Dubai Work) ಮಾಡಿ ಕೈ ತುಂಬಾ ಸಂಪಾದನೆ ಮಾಡಬೇಕು ಎನ್ನುವಂತಹ ಆಸೆಯನ್ನು ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ ಆದರೆ ಅದಕ್ಕೆ ಸರಿಯಾದ ಮಾರ್ಗದರ್ಶನ ಕೆಲವರಿಗೆ ಸಿಗೋದಿಲ್ಲ. ಅದರಲ್ಲೂ ವಿಶೇಷವಾಗಿ ಭಾರತದಿಂದ ದುಬೈಗೆ ಕೆಲಸಕ್ಕೆ ಹೋಗುವವರಿಗೆ ಕೆಲವರಿಗೆ ಮಾತ್ರ ಕಂಪನಿಯಿಂದಲೇ ಇರುವುದಕ್ಕೆ ಜಾಗದ ಅವಕಾಶವನ್ನು ನೀಡಲಾಗುತ್ತದೆ ಹಾಗೂ ಅದರ ಜೊತೆಗೆ ಊಟದ ಅವಕಾಶವನ್ನು ಕೂಡ ನೀಡಲಾಗುತ್ತದೆ. ಇದನ್ನು ಕೆಲಸಕ್ಕೆ ಸೇರುವ ಮುಂಚೆ ನಿಬಂಧನೆಗಳಲ್ಲಿ ಉಲ್ಲೇಖಿಸಲಾಗಿರುತ್ತದೆ.
ಸಾಮಾನ್ಯವಾಗಿ ಈ ರೀತಿಯ ಕೆಲಸಗಳಲ್ಲಿ ನಿಮಗೆ ಊಟ ಹಾಗೂ ರೂಮಿನ ಖರ್ಚುಗಳು ಉಳಿದುಕೊಳ್ಳುತ್ತದೆ. ಆದರೆ ನೀವು ಸ್ವಂತವಾಗಿ ದುಬೈಗೆ ಹೋಗಿ ಏನಾದರೂ ಕೆಲಸ ಮಾಡಬೇಕು ಎಂಬುದಾಗಿ ಯೋಚಿಸಿದ್ದರೆ ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳು ಇರುತ್ತದೆ ಅದಕ್ಕಿಂತ ಹೆಚ್ಚಾಗಿ ಅಲ್ಲಿಗೆ ಹೋದಾಗ ತಿಂಗಳಿಗೆ ರೂಮಿನ ಬಾಡಿಗೆ ಎಷ್ಟಾಗಿರುತ್ತದೆ ಎನ್ನುವಂತಹ ಯೋಚನೆಗಳು ಕೂಡ ಬರುತ್ತವೆ. ಹಾಗಿದ್ದರೆ ಬನ್ನಿ ದುಬೈಗೆ ಹೋದಾಗ ರೂಮಿನ ಬಾಡಿಗೆ (Dubai Room Rent) ಎಷ್ಟಾಗಿರುತ್ತದೆ ಎನ್ನುವುದನ್ನು ನೀವು ಮೊದಲೇ ತಿಳಿದುಕೊಳ್ಳುವ ಮೂಲಕ ಒಂದು ವೇಳೆ ನೀವು ಅಲ್ಲಿಗೆ ಹೋಗಿ ಜೀವನ ನಡೆಸುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಖಂಡಿತವಾಗಿ ಇದು ನಿಮಗೆ ಸಹಾಯಕಾರಿಯಾಗುವಂತಹ ಮಾಹಿತಿಗಳನ್ನು ನೀಡುತ್ತದೆ.
ನೀವು ಒಬ್ಬರೇ ಇರೋದಕ್ಕೆ ದುಬೈನ ಕರೆನ್ಸಿಯಲ್ಲಿ AED 2500 ನಿಂದ 4170 AED ವರೆಗೂ ಕೂಡ ಖರ್ಚು ಮಾಡಬೇಕಾಗುತ್ತದೆ. ಇದನ್ನು ಭಾರತದ ರೂಪಾಯಿಗೆ ಕನ್ವರ್ಟ್ ಮಾಡಿದರೆ 56183 ರೂಪಾಯಿಯಿಂದ 93,000 ವರೆಗೂ ಕೂಡ ಆಗಿರುತ್ತದೆ. ಹಾಗಿದ್ರೆ ಬನ್ನಿ ಫ್ಯಾಮಿಲಿ ಜೊತೆಗೆ ಇದ್ದರೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನ ಕೂಡ ತಿಳಿಯೋಣ.
ನಾಲ್ಕು ಜನರು ಇರುವಂತಹ ಕುಟುಂಬದ ರೂಮಿನ ಬಾಡಿಗೆ AED 5900 ರಿಂದ ಹನ್ನೆರಡು ಸಾವಿರ ಆಗಿರುತ್ತದೆ. ಇದನ್ನು ಕೂಡ ಭಾರತೀಯ ಕರೆನ್ಸಿಗೆ ರೂಪಾಂತರ ಮಾಡಿದರೆ 1.32 ಲಕ್ಷ ರೂಪಾಯಿಯಿಂದ 2.69 ಲಕ್ಷ ರೂಪಾಯಿಗಳವರೆಗೂ ಕೂಡ ಆಗಬಹುದಾಗಿದೆ. ಇದೇ ರೀತಿಯಲ್ಲಿ ನಿಮಗೆ ಸಂಬಳ ಕೂಡ ಇರುತ್ತದೆ ಆದರೆ ನೀವು ನಿಮ್ಮ ಮನೆಯ ಬಾಡಿಗೆಗೆ ಅನುಸಾರವಾಗಿ ಅದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ಸಂಬಳವನ್ನು ದುಡಿಯಬೇಕಾಗುತ್ತದೆ. ನಾವು ಈ ಮನೆಯ ಬಾಡಿಗೆಯನ್ನು ಹೇಳುತ್ತಿರುವುದು ಸ್ವತಂತ್ರವಾಗಿ ದುಬೈನಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಬಗ್ಗೆ. ಆದರೆ ಭಾರತದಿಂದ ದುಬೈಗೆ ಹೋಗುವಂತಹ ಸಾಕಷ್ಟು ಉದ್ಯೋಗಿಗಳಿಗೆ ಅವರು ಕೆಲಸ ಮಾಡುತ್ತಿರುವಂತಹ ಕಂಪನಿಯೇ ಉಚಿತವಾಗಿ ಮನೆಯ ಸೌಲಭ್ಯವನ್ನು ಒದಗಿಸುತ್ತದೆ ಹೀಗಾಗಿ ಈ ಕುರಿತ ಹೆಚ್ಚಿನ ಟೆನ್ಶನ್ ತೆಗೆದುಕೊಳ್ಳುವ ಅಗತ್ಯವಿಲ್ಲ.