Karnataka Times
Trending Stories, Viral News, Gossips & Everything in Kannada

Gas Cylinder: ದುಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ?

ಭಾರತದಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬ ಉದ್ಯೋಗಿಗಳ ದುಬೈನಲ್ಲಿ ಹೋಗಿ ಕೆಲಸ ಮಾಡೋದು. ಖಂಡಿತವಾಗಿ ದುಬೈನಲ್ಲಿ ಕೆಲಸ (Dubai Work) ಮಾಡಿ ಸಂಪಾದನೆ ಮಾಡುವುದು ಅತ್ಯಂತ ಅವಶ್ಯಕ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಯಾವಾಗ ನೀವು ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಕನಸನ್ನು ಕಾಣುತ್ತೀರಿ. ದುಬೈನಲ್ಲಿ ಸಂಪಾದನೆಯ ವಿಚಾರಕ್ಕೆ ಬಂದರೆ ಖಂಡಿತವಾಗಿ ನಿಮಗೆ ಉತ್ತಮ ಕೆಲಸದ ಅವಕಾಶಗಳನ್ನು ನೀಡಲಾಗುತ್ತದೆ. ಅಲ್ಲಿ ಕೆಲವೊಮ್ಮೆ ಗಂಟೆಗಳ ಲೆಕ್ಕದಲ್ಲಿ ಕೂಡ ನಿಮಗೆ ಕೆಲಸ ಮಾಡುವುದಕ್ಕಾಗಿ ಸಂಪಾದನೆಯನ್ನು ನೀಡಲಾಗುತ್ತದೆ.

Advertisement

ಇನ್ನು ಕೆಲಸದ ವಿಚಾರಕ್ಕೆ ಬಂದ್ರೆ ದುಬೈ ನಿಮಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ ನಿಜ ಆದರೆ ಅಲ್ಲಿನ ಜನಜೀವನ ಯಾವ ರೀತಿ ಇರಬಹುದು ಎನ್ನುವಂತಹ ವಿಚಾರದ ಬಗ್ಗೆ ಕೂಡ ನಿಮಗೆ ಸಾಕಷ್ಟು ಮಾಹಿತಿಗಳು ಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರುವುದು ದುಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಎಷ್ಟು ಎನ್ನುವುದರ ಬಗ್ಗೆ. ಖಂಡಿತವಾಗಿ ದುಬೈನಲ್ಲಿ ಉತ್ಪಾದನೆ ಆಗುವ ಕಾರಣದಿಂದಾಗಿ ಭಾರತಕ್ಕೆ ಹೋಲಿಸಿದರೆ ಗ್ಯಾಸ್ ಸಿಲಿಂಡರ್ ಬೆಲೆ ಅಲ್ಲಿ ಕಡಿಮೆ ಇರಬಹುದು ಎಂಬುದಾಗಿ ಭಾವಿಸಬಹುದಾಗಿದೆ. ಕೇವಲ ಐಷರಾಮಿ ದೇಶ ಎನ್ನುವ ಕಾರಣಕ್ಕಾಗಿ ನೀವು ಈ ಎಲ್ಲ ವಿಚಾರಗಳನ್ನು ಕಡೆಗಣಿಸಿ ಅಲ್ಲಿ ಹೋಗಿ ಜೀವಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿಗೆ ಹೋಗುವುದಕ್ಕಿಂತ ಮುಂಚೆ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price in Dubai) ಎಷ್ಟು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ದುಬೈನಲ್ಲಿ ಸಿಲಿಂಡರ್ ಗಾತ್ರದ ಆಧಾರದ ಮೇಲೆ ಕೂಡ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಬೇರೆ ಬೇರೆ ವರ್ಗದ ಗ್ಯಾಸ್ ಅನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದ್ದು ಕೆಲವೊಂದು ಮನೆಯ ಬಳಕೆಗೆ ಬಳಸಿದರೆ ಇನ್ನು ಕೆಲವೊಮ್ಮೆ ದೊಡ್ಡ ಪ್ರಮಾಣದ ಕಮರ್ಷಿಯಲ್ ಬಳಕೆಗಾಗಿ ಕೂಡ ಉಪಯೋಗಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಗ್ಯಾಸ್ ಸಿಲಿಂಡರ್ ಅನ್ನು ದುಬೈನಲ್ಲಿ ಪ್ರತಿಯೊಂದು ಮನೆಯಲ್ಲಿ ಕೂಡ ದೈನಂದಿನ ಗ್ರಹ ಬಳಕೆಯ ಅಡುಗೆಗಾಗಿ ಪ್ರಮುಖವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ದುಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ (Gas Cylinder Price) ಗಾತ್ರಕ್ಕೆ ಅನುಗುಣವಾಗಿ AED 70 ನಿಂದ AED 100 ರೂಪಾಯಿವರೆಗೂ ಕೂಡ ಬೆಲೆಯನ್ನು ನಿಗದಿಪಡಿಸಲಾಗಿದೆ. ಅಂದರೆ ಭಾರತದ ರೂಪಾಯಿಯಲ್ಲಿ ನೋಡುವುದಾದರೆ 1571 ರಿಂದ ಪ್ರಾರಂಭವಾಗಿ 2245 ವರೆಗೂ ಕೂಡ ಬೆಲೆಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಭಾರತ ಹಾಗೂ ದುಬೈ ನಡುವಿನ ಗ್ಯಾಸ್ ಬೆಲೆಯ ಅಂತರದಲ್ಲಿ ಹೆಚ್ಚೇನು ವ್ಯತ್ಯಾಸವನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ.

Advertisement

ದುಬೈನಲ್ಲಿ Propane Gas ವಸ್ತುಗಳನ್ನು ಬಿಸಿ ಮಾಡಲು ಹಾಗೂ ಗ್ರಿಲ್ ಗಾಗಿ ಬಳಸಲಾಗುತ್ತದೆ ಹಾಗೂ ಇದರ ಆವರೇಜ್ ಬೆಲೆ AED 80 ರಿಂದ 150 ಇರುತ್ತದೆ. ಇದು ಕೂಡ ಸಪ್ಲೈಯರ್ ಮೇಲೆ ನಿರ್ಧರಿತವಾಗಿರುತ್ತದೆ. Butane Gas ಅನ್ನು ದುಬೈನಲ್ಲಿ ಕ್ಯಾಂಪಿಂಗ್ ಅಥವಾ ಪೋರ್ಟೆಬಲ್ ಸ್ಟೌ ನಲ್ಲಿ ಬಳಸಲು ಉಪಯೋಗಿಸಲಾಗುತ್ತದೆ.

Advertisement

ಚಿಕ್ಕ ಸೈಜ್ ಸಿಲಿಂಡರ್ (Gas Cylinder) ಗಳಿಗೆ AED 25 ರಿಂದ 50 ಬೆಲೆ ಇರುತ್ತದೆ ಹಾಗೂ ದೊಡ್ಡ ಪ್ರಮಾಣದ ಸಿಲಿಂಡರ್ ಗಳಿಗೆ AED 50 ರಿಂದ ನೂರು ಇರುತ್ತದೆ. ಹಾಗಿದ್ರೆ ದುಬೈನಲ್ಲಿರುವಂತಹ ಗ್ಯಾಸ್ ಪೂರೈಕೆ ಮಾಡುವಂತಹ ಅತ್ಯಂತ ದೊಡ್ಡ ಕಂಪನಿಗಳು ಯಾವುವು ಎಂದರೆ Emirates Gas LLC, Emarat, Adnoc distribution ಹಾಗೂ Brother’s Gas ಆಗಿದೆ. ಒಂದು ವೇಳೆ ನೀವು ಕೂಡ ದುಬೈನಲ್ಲಿ ವಾಸಿಸುತ್ತಿದ್ದು ನಿಮ್ಮ ಮನೆಗೆ ಕೂಡ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಬೇಕಾಗಿದ್ದರೆ ನೀವು ಈ ಕಂಪನಿಗಳ ಸಂಪರ್ಕವನ್ನು ಮಾಡಬಹುದಾಗಿದೆ.

Leave A Reply

Your email address will not be published.