Karnataka Times
Trending Stories, Viral News, Gossips & Everything in Kannada

Online Banking: RTGS, NEFT ಮತ್ತು IMPS ನಡುವಿನ ವ್ಯತ್ಯಾಸವೇನು? ಹಣದ ವ್ಯವಹಾರಕ್ಕೆ ಯಾವುದು ಉತ್ತಮ ಗೊತ್ತಾ?

Advertisement

ಭಾರತ ಡಿಜಿಟಲೀಕರಣದತ್ತ ಹೆಜ್ಜೆ ಹಾಕಿದೆ. ಇಂದು ಕುಳಿತಲ್ಲಿಂದಲೇ ಯಾವುದೇ ಬ್ಯಾಂಕ್(Bank) ಅಥವಾ ಸರ್ಕಾರಿ ಕಚೇರಿಗೆ ಅಲೆಯದೇ ಎಲ್ಲಾ ಹಣಕಾಸಿನ ವ್ಯವಹಾರಗಳನ್ನೂ ಮಾಡಬಹುದು. ಹಣ ಕಳುಹಿಸುವುದು, ಪಡೆಯುವುದು ಎಲ್ಲವೂ ಕೈಯಲ್ಲಿರುವ ಮೊಬೈಲ್ ನಲ್ಲಿ ಒಂದು ಬಟನ್ ಒತ್ತುವುದರ ಮೂಲಕ ಮಾಡಿ ಬಿಡಬಹುದು. ಆನ್ ಲೈನ್ ಮೂಲಕ ಹಣ ಕಳುಹಿಸಲು UPI ಅತ್ಯುತ್ತಮ ಮಾರ್ಗವಾಗಿದೆ.

ಇದು ವೇಗವಾದ ಹಣಕಾಸಿನ ವ್ಯವಹಾರಕ್ಕೆ ಸಹಾಯಕವಾಗಿದೆ. ಇದನ್ನು ಹೊರತುಪಡಿಸಿ, ಹಣದ ವ್ಯವಹಾರಕ್ಕೆ ಇನ್ನೂ ಮೂರು ಮಾರ್ಗಗಳಿವೆ. ಅವೇ RTGS, NFFT, IMPS. ಈ ಮೂರು ಹಣ ವರ್ಗಾವಣೆ ಮಾಡುವ ವಿಧಾನಗಳ ನಡುವೆ ಇರುವ ವ್ಯತ್ಯಾಸವೇನು? ಹಣ ವರ್ಗಾವಣೆಗೆ ಈ ಮೂರರಲ್ಲಿ ಯಾವುದು ಬೆಸ್ಟ್? ನೋಡೋಣ.

RTGS- ಅಂದ್ರೆ ರಿಯಲ್ ಟೈಮ್ ಸೆಟಲ್ಮೆಂಟ್. ಈ ವಿಧಾನದ ಮೂಲಕ ಆನ್ಲೈನ್ ನಲ್ಲಿ(Online) ದೊಡ್ದ ಮೊತ್ತದ ಹಣವನ್ನು ವರ್ಗಾಯಿಸಬಹುದು. ಯುಪಿಐ ನಲ್ಲಿ ಹಣದ ವಹಿವಾಟಿಗೆ ಮಿತಿ ಇದೆ. ಅದರಲ್ಲಿ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ. ಆದರೆ ಆನ್ಲೈನ್ ನಲ್ಲಿ ನೀವು ಆರ್ ಟಿ ಜಿ ಎಸ್ ಮೂಲಕ ಎರಡು ಲಕ್ಷದವರೆಗೂ ಹಣವನ್ನು ವರ್ಗಾಯಿಸಬಹುದು. ಇದರಲ್ಲಿ ನೈಜ ಸಮಯದ ಮೇಲೆ ಹಣ ವರ್ಗಾವಣೆ ಆಗುತ್ತದೆ. ಬ್ಯಾಂಕ್ ಕೆಲಸದಿಂದ ದಿನಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4:30ರ ವರೆಗೆ ಮಾತ್ರ ಈ ವಹಿವಾಟಿನ ಕೆಲಸ ಮಾಡಿಕೊಳ್ಳಬಹುದು. ಅಲ್ಲದೆ ಈ ಸೇವೆಗಾಗಿ ನೀವು ವಹಿವಾಟಿನ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ.

ಎನ್ ಇ ಎಫ್ ಟಿ – ಎಂದರೆ ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ. ಇದನ್ನು ಆನ್ಲೈನ್ ಮೂಲಕ ಮಾಡಬಹುದು. ದೇಶದ ಯಾವುದೇ ಮೂಲೆಗೆ ಬೇಕಾದರೂ ಹಣವನ್ನು ವರ್ಗಾವಣೆ ಮಾಡಬಹುದು. ಇದರಲ್ಲಿ ಹಣ ಕಳುಹಿಸಲು ಗರಿಷ್ಠ ಅಥವಾ ಕನಿಷ್ಠ ಮೊತ್ತ ನಿಗದಿಪಡಿಸಿಲ್ಲ ಜೊತೆಗೆ ಯಾವುದೇ ರೀತಿಯ ಶುಲ್ಕವನ್ನು ಕೂಡ ಪಾವತಿಸಬೇಕಾಗಿಲ್ಲ.

ದಿನದ 24ಗಳು ಗಂಟೆಗಳು ವಾರದ ಏಳು ದಿನಗಳು ಕೂಡ ಈ ವ್ಯವಹಾರ ಮಾಡಬಹುದು. ಕ್ರೆಡಿಟ್ ಕಾರ್ಡ್ ಬಿಲ್(Credit Card Bill) ಪಾವತಿಯನ್ನು ಇದರಲ್ಲಿ ಮಾಡಬಹುದು.ಐ ಎಂ ಪಿ ಎಸ್- ತಕ್ಷಣ ಪಾವತಿ ಸೇವೆ. ಈ ಸೌಲಭ್ಯದಲ್ಲಿ ನೀವು ತಕ್ಷಣ ಯಾರಿಗೆ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ರಜಾದಿನಗಳಲ್ಲಿಯೂ ಕೂಡ ವರ್ಗಾವಣೆ ಮಾಡಬಹುದು ಇದರಲ್ಲಿಯೂ ಕನಿಷ್ಠ ಹಾಗೂ ಗರಿಷ್ಠ ಹಣ ವ್ಯವಹಾರದ ಮಿತಿ ಇಲ್ಲ.

Leave A Reply

Your email address will not be published.