ಇಂದು ಹೆಚ್ಚು ಹಣ ಮಾಡುವ ಉದ್ದೇಶ ದಿಂದ ಕೆಲವುಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಅಕ್ರಮ ಹಣ ವನ್ನು ಪಡೆದು ಕೊಳ್ತಾ ಇದ್ದಾರೆ, ಅದರಲ್ಲಿಯು ಸರಕಾರಿ (Government) ಅಧಿಕಾರಿಗಖೇ ಇಂದು ಹೆಚ್ಚು ಹಣ ಮಾಡುವ ಉದ್ದೇಶ ದಿಂದ ತಪ್ಪುಕೆಲಸ ಮಾಡುತ್ತಾರೆ, ಅದೇ ರೀತಿ ಬಿಬಿಎಂಪಿ ಅಧಿಕಾರಿಗಳ ಅವಾಂತರಗಳ ಪಟ್ಟಿ ಮತ್ತೆ ಮತ್ತೆ ಹೆಚ್ಚಾಗುತ್ತಿದ್ದು ಈಗ ಅಕ್ರಮ ಖಾತೆ ಹಂಚಿಕೆಯಲ್ಲೂ ಬಿಬಿಎಂಪಿ ಅಧಿಕಾರಿಗಳ ಗಳ ಅಸಲಿ ಮುಖ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಅಕ್ರಮ ಎ ಖಾತೆ:
ಹೌದು ಬೆಂಗಳೂರು ನಗರದಲ್ಲಿನ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತೆ ನೀಡಿದ ಅಕ್ರಮ ಕೆಲಸ ಬೆಳಕಿಗೆ ಬಂದಿದೆ, ಈ ವಿಚಾರ ವಾಗಿಯೇ ಈಗಾಗಲೇ ಸಾಕಷ್ಟು ದೂರುಗಳು ಕೂಡ ಕೇಳಿ ಬಂದಿವೆ, ಇದನ್ನು ಕಂಡು ಹಿಡಿಯುದಕ್ಕಾಗಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿದೆ.
ಪತ್ತೆಯಾಗಿದೆ:
ಬೆಂಗಳೂರು ಹಣಕಾಸು ವಿಭಾಗದ ವಿಶೇಷ ಆಯುಕ್ತರ ತಂಡ ಕಂದಾಯ ಉಪ ವಿಭಾಗಕ್ಕೆ ಭೇಟಿ ನೀಡಿ, ಅಕ್ರಮ ಎ ಖಾತಾ ನೀಡಿದ ವಾರ್ಡ್ ಗಳ ದಾಖಲೆ ನೋಡಿ, ಈ ಮೂಲಕ ಸುನಾರು 698 ಅಕ್ರಮ ಎ ಖಾತೆ ಪ್ರಮಾಣಪತ್ರ ನೀಡಿರುವ ಮಾಹಿತಿ ಗಳು ಗೊತ್ತಾಗಿದ್ದು, ಇನ್ನು 45,133 ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವುದು ಪತ್ತೆಯಾಗಿದೆ.
ಕಾನೂನಿನ ಪ್ರಕಾರ, ಎ ಖಾತಾ (ನೋಂದಾವಣೆ) ಅನ್ನು ಲೇಔಟ್ ಅಥವಾ ಅನುಮತಿ ಪಡೆದ ಸೈಟ್‌ಗೆ ಮಾತ್ರ ನೀಡಬಹುದಾಗಿದೆ,ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಖಾತೆ ನೀಡುವ ಕುರಿತಂತೆ ಸಂಪೂರ್ಣವಾಗಿ ಪರಿಶೀಲಿಸಲು ನಿರ್ಧರ ಮಾಡಲಾಗಿದೆ, ಇನ್ನು ನೀಡಲಾಗುವ ವರದಿಯಲ್ಲಿನ ಮಾಹಿತಿ ತಪ್ಪು ಅಥವಾ ಅಕ್ರಮ ಮಾಹಿತಿ ನೀಡಿದ್ದರೆ, ಅಂತಹ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಆದೇಶ ನೀಡಿದ್ದಾರೆ.