IAS Question: ಯಾವ ಜೀವಿಯ ತಲೆ ಬೇರ್ಪಟ್ಟ ನಂತರವೂ ಕೂಡ ಸಾಕಷ್ಟು ದಿನ ಬದುಕಿರುತ್ತೆ? IAS ಪ್ರಶ್ನೆ.
ಪ್ರತಿಯೊಬ್ಬರು ಕೂಡ ಇತ್ತೀಚಿನ ದಿನಗಳಲ್ಲಿ ಜ್ಞಾನ ಸಂಪಾದನೆಗಾಗಿ ಪುಸ್ತಕ ಓದಬೇಕು ಎಂಬುದಾಗಿ ಸಾಕಷ್ಟು ಪುಸ್ತಕಗಳನ್ನು ಹುಡುಕುತ್ತಿರುತ್ತಾರೆ. ಆದರೆ ಅಂತಹ ವಿವಿಧ ವಿಭಾಗದ ಪ್ರಾಕೃತಿಕ ಹಾಗೂ ಬೇರೆ ಬೇರೆ ಕ್ಷೇತ್ರದ ಜ್ಞಾನಗಳು ಇಂತಹ ಕ್ವಿಜ್ (Quiz) ಪ್ರಶ್ನೆಗಳ ಮೂಲಕವೂ ಕೂಡ ಸಿಗುತ್ತದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಅದೇ ರೀತಿಯ ಕ್ವಿಜ್ ಪ್ರಶ್ನೆಗಳ ಜ್ಞಾನ ಬಂಡಾರವನ್ನು ತಂದಿದ್ದು ನೀವು ಇವುಗಳಿಗೆ ಉತ್ತರ ನೀಡುವ ಮೂಲಕ ನಿಮ್ಮ ಸಾಮಾನ್ಯ ಜ್ಞಾನವನ್ನು (General Knowledge) ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಬಹುದಾಗಿದೆ.
ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ಬರೋಬ್ಬರಿ ಒಂಬತ್ತು ಪ್ರಶ್ನೆಗಳನ್ನು ಕೇಳಲಿದ್ದೇವೆ. ತಪ್ಪದೇ ಪ್ರತಿಯೊಂದು ಪ್ರಶ್ನೆಗಳಿಗೂ ಕೂಡ ಉತ್ತರವನ್ನು ನೀಡುವ ಮೂಲಕ ನೀವು ನಿಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬಹುದು ಇಲ್ಲಿ ನಿಮ್ಮ ಬುದ್ಧಿಮತ್ತೆಗೆ ತೀಕ್ಷ್ಣತೆಯನ್ನು ನೀಡುವಂತಹ ಕೆಲಸವನ್ನು ನಾವು ಮಾಡಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಒಂದೊಂದೇ ಪ್ರಶ್ನೆ (IAS Question) ಗೆ ಸರಿಯಾದ ಉತ್ತರವನ್ನು ನೀಡುವ ಪ್ರಯತ್ನವನ್ನು ನೀವು ಮಾಡಿ ನಿಮ್ಮ ಬುದ್ಧಿಮತ್ತೆಯನ್ನು ಹೆಚ್ಚಿಸುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ.
Questions:
- ಮೊದಲ ಪ್ರಶ್ನೆ ಮನುಷ್ಯನ ದೇಹದಲ್ಲಿ ಯಾವ ಅಂಗ ಪ್ರತಿ ಎರಡು ತಿಂಗಳಿಗೊಮ್ಮೆ ಬದಲಾಗುತ್ತದೆ?
- ಎರಡನೇ ಪ್ರಶ್ನೆ ಭಾರತ ದೇಶದ ಅತ್ಯಂತ ದುಬಾರಿ ನಗರ ಯಾವುದು?
- ಮೂರನೇ ಪ್ರಶ್ನೆ ಪೆಟ್ರೋಲ್ ಪಂಪ್ ನಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬಾರದು?
- ನಾಲ್ಕನೇ ಪ್ರಶ್ನೆ ರೈಲ್ವೆ ನಲ್ಲಿ W/L ಬೋರ್ಡಿನ ನಿಜವಾದ ಅರ್ಥವೇನು?
- ಐದನೇ ಪ್ರಶ್ನೆ ನೆರಳೆ ಇಲ್ಲದ ವಸ್ತು ಯಾವುದು?
- ಆರನೇ ಪ್ರಶ್ನೆ ಸಮುದ್ರ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಆ ಒಂದು ವಸ್ತು ಯಾವುದು?
- 7ನೇ ಪ್ರಶ್ನೆ ಯಾವ ಜೀವಿ ನೀರಿನಲ್ಲಿ ಇದ್ದರೂ ಕೂಡ ನೀರನ್ನು ಕುಡಿಯುವುದಿಲ್ಲ?
- ಎಂಟನೇ ಪ್ರಶ್ನೆ ಯಾವ ಗ್ರಹದ ಬಳಿ ಎರಡು ಚಂದ್ರ ಇದ್ದಾರೆ?
- 9ನೇ ಪ್ರಶ್ನೆ ಯಾವ ಜೀವಿಯ ತಲೆ ಕಡಿತಗೊಂಡ ನಂತರವೂ ಕೂಡ ಕೆಲವು ದಿನಗಳ ಕಾಲ ಜೀವಂತವಾಗಿರುತ್ತದೆ?
ಇಲ್ಲಿ ನಾವು ನಿಮಗೆ ಒಂಬತ್ತು ಪ್ರಶ್ನೆಯನ್ನು ಕೇಳಿದ್ದೇವೆ ಆದಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡುವ ಮೂಲಕ ನೀವು ನಿಮ್ಮ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಒಂದೊಂದಾಗಿ ಪ್ರಶ್ನೆಗಳನ್ನು ನೋಡುವ ಮೂಲಕ ಅವುಗಳಿಗೆ ಸರಿಯಾದ ಉತ್ತರವನ್ನು ನೀಡುವಂತಹ ಪ್ರಯತ್ನವನ್ನು ಮಾಡಿ.
Answers:
- ಮೊದಲ ಪ್ರಶ್ನೆಗೆ ಉತ್ತರ ಮಾನವ ದೇಹದಲ್ಲಿ ಎರಡು ತಿಂಗಳಿಗೊಮ್ಮೆ ಬೆಳವಣಿಗೆ ಕಾಣುವಂತಹ ಅಂಗ ಕಣ್ಣಿನ ಹುಬ್ಬು.
- ಎರಡನೇ ಪ್ರಶ್ನೆಗೆ ಉತ್ತರ ಭಾರತ ದೇಶದ ಅತ್ಯಂತ ದುಬಾರಿ ನಗರ ಮುಂಬೈ.
- ಮೂರನೇ ಪ್ರಶ್ನೆಗೆ ಉತ್ತರ ಸಿಂಥೆಟಿಕ್ ಬಟ್ಟೆಗಳನ್ನು (Synthetic Dress) ಪೆಟ್ರೋಲ್ ಪಂಪ್ ನಲ್ಲಿ ಧರಿಸಬಾರದು.
- ನಾಲ್ಕನೇ ಪ್ರಶ್ನೆಗೆ ಉತ್ತರ ರೈಲ್ವೆ ಸ್ಟೇಷನ್ ನಲ್ಲಿ W/L ಬೋರ್ಡುಗಳನ್ನು ರೈಲ್ವೆ ಚಾಲಕ ಹಾರ್ನ್ ಹೊಡಿಯೋ ಜಾಗದಲ್ಲಿ ಅಳವಡಿಸಲಾಗಿರುತ್ತದೆ.
- 5ನೇ ಪ್ರಶ್ನೆಗೆ ಉತ್ತರ ನೆರಳು ಇಲ್ಲದಿರುವ ವಸ್ತು ರಸ್ತೆಯಾಗಿದೆ.
- 6ನೇ ಪ್ರಶ್ನೆಗೆ ಉತ್ತರ ಸಮುದ್ರ ಹಾಗೂ ಮನೆಯಲ್ಲಿರುವಂತಹ ಒಂದೇ ವಸ್ತು ಉಪ್ಪಾಗಿದೆ.
- 7ನೇ ಪ್ರಶ್ನೆಗೆ ಉತ್ತರ ನೀರಿನಲ್ಲಿ ಎದುರು ಕೂಡ ಕಪ್ಪೆ ನೀರನ್ನು ಕುಡಿಯುವುದಿಲ್ಲ.
- ಎಂಟನೇ ಪ್ರಶ್ನೆಗೆ ಉತ್ತರ ಎರಡು ಚಂದ್ರನ ಹೊಂದಿರುವಂತಹ ಗ್ರಹ ಮಂಗಳ ಗ್ರಹವಾಗಿದೆ (Mars).
- 9ನೇ ಹಾಗೂ ಕೊನೆಯ ಪ್ರಶ್ನೆಗೆ ಉತ್ತರ ತಲೆ ಕಡಿತಗೊಂಡ ನಂತರವೂ ಕೂಡ ಕೆಲವು ದಿನಗಳ ಕಾಲ ಜೀವಂತವಾಗಿರುವ ಜೀವಿ ಜಿರಳೆ (Cockroach) ಯಾಗಿದೆ.
ಕೇಳಿರುವಂತಹ ಒಂಬತ್ತು ಪ್ರಶ್ನೆಗಳಲ್ಲಿ ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದನ್ನು ಲೆಕ್ಕಾಚಾರ ಹಾಕಿಕೊಂಡು ನಿಮ್ಮ ಬುದ್ಧಿಶಕ್ತಿಯನ್ನು ನೀವು ಲೆಕ್ಕಾಚಾರ ಹಾಕಬಹುದಾಗಿದೆ.