Arecanut: ಅಡಿಕೆ ಜೊತೆ ಕಾಳಮೆಣಸು ಅಲ್ಲ, ಇದನ್ನ ಬೆಳೆದರೆ ಆದಾಯ ದುಪ್ಪಟ್ಟು!

Advertisement
ಇಂದು ಕಂಪೆನಿಯಲ್ಲಿ ಇತರರ ಅಡಿಯಲ್ಲಿ ಮಾಡೋ ಕೆಲಸ ಕಾರ್ಯಕ್ಕಿಂತಲೂ ನಮ್ಮ ಸ್ವ ಉದ್ಯೋಗ ಇದ್ದರೆ ಲಾಭ ದೊಂದಿಗೆ ಆರ್ಥಿಕ ಭದ್ರತೆ ಸಹ ಇರುವುದು ಹಾಗಾಗಿ ಅಡಿಕೆ ಬೆಳೆಯ ಉಪಬೆಳೆಗಳಲ್ಲಿ ಒಂದಾದ ಜಾಯಿ ಕಾಯಿ ಕೃಷಿ ಕಾರ್ಯದ ಬಗ್ಗೆ ನಾವಿಂದು ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ನೀವು ಮಸಾಲ ಪದಾರ್ಥ ತಿನ್ನುವವರಾಗಿದ್ದರೆ ಈ ಜಾಯಿಕಾಯಿ ಬಗ್ಗೆ ಕೇಳಿರಲೇ ಬೇಕು ಹಾಗಿದ್ದರೂ ಇದು ತಿನ್ನುವ ಸಾಮಾಗ್ರಿ ಗಿಂತಲೂ ಆಯುರ್ವೇದದ ಔಷಧವಾಗಿ ಅಧಿಕ ಪ್ರಚಲಿತದಲ್ಲಿದೆ. ಹಾಗಾಗಿ ಅಂತರ್ ಬೆಳೆ ಸಾಲಿನಲ್ಲಿ ಅಡಿಕೆ (Arecanut) ಮತ್ತು ತೆಂಗಿನ ಕೃಷಿ ಮಾಡೊ ರೈತರಿಗೆ ಅಧಿಕ ಲಾಭ ಕೊಡುವ ಜಾಯಿ ಕಾಯಿ ಕೃಷಿ ಬಗ್ಗೆ ಮಾಹಿತಿ ಇಲ್ಲಿ ಇದೆ. 3-4ವರ್ಷ ಗಿಡ ನೆಟ್ಟ ಬಳಿಕ 6-7ನೇ ವರ್ಷಕ್ಕೆ ಉತ್ತಮ ಇಳುವರಿಯನ್ನು ಈ ಕೃಷಿ ಮೂಲಕ ನಿರೀಕ್ಷಿಸಬಹುದಾಗಿದೆ.
ಅಧಿಕ ಲಾಭ:
ಚಕ್ಕೆ, ಬೀಜ, ಹೂ, ಪತ್ರೆ ಎಲ್ಲವೂ ಮಾರಾಟವಾಗುವ ಕಾರಣ ಇದು ಅಧಿಕ ಲಾಭದ ಒಂದು ಕೃಷಿ ಎನ್ನಬಹುದು. ಹೆಚ್ಚಾಗಿ ಕಾಯಿಲೆಗೆ ಬಳಸುವ ಈ ಪದಾರ್ಥ ವಿದೇಶಕ್ಕೆ ಅಧಿಕ ರಫ್ತಾಗುತ್ತಿದೆ. ಇದು ವರ್ಷದ ಎಲ್ಲಾ ಕಾಲಕ್ಕೂ ಬೆಳೆಯಬಹುದಾದ ಬೆಳೆಯಾಗಿದ್ದು ಅದಕ್ಕಾಗಿ ಪೋಷಣೆ ಅಗತ್ಯ ಇಲ್ಲ. ಅಡಿಕೆ (Arecanut) ಹೊಂಡಕ್ಕೆ ಹಾಕುವ ಪೋಷಕಾಂಶಗಳೇ ಇದಕ್ಕೂ ಕೂಡ ಸಾಕಾಗುವುದು. ಇದರಲ್ಲಿ ಹೆಣ್ಣು ಮತ್ತು ಗಂಡು ಗಿಡ ಇದ್ದು ಹೆಣ್ಣು ಮಾತ್ರವೇ ಅಧಿಕ ಲಾಭ ನೀಡುತ್ತದೆ. ಹಾಗಾಗಿ ಕಸಿ ವಿಧಾನ ಮಾಡಬೇಕು . ಪುನಶ್ಚೇತನ ಸಹ ಮಾಡಿದರೆ ಫಲ ಸಿಗುತ್ತದೆ.
ಆದ್ದರಿಂದ ಒಂದೇ ಹೊಂಡಕ್ಕೆ ಎರಡು ಗಿಡ ನೆಡಬಹುದಾಗಿದ್ದು ಇದು ಮರ ಆಗಲಾರದು ಮತ್ತು ಕಡಿಮೆ ಜಾಗ ಸಾಕಾಗುವುದು. ಗಿಡದ ಸುತ್ತ ಸ್ವಚ್ಛತೆ ಮಾಡಬೇಕು ಇಲ್ಲವಾದರೆ ಕಾಯಿ ಫಲ ಸಿಗುವುದು ಕಷ್ಟ. ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 35 ರಿಂದ 45 ಅಡಿ ಅಂತರ ಅಗತ್ಯ. ಅಡಿಕೆ (Arecanut) ಲಾಭಕ್ಕೆ ವರ್ಷದಲ್ಲಿ 3.50 ಲಕ್ಷ ಗಳಿಸಿದರೆ ಇದು ಒಂದು ವರ್ಷಕ್ಕೆ 5 ರಿಂದ 6 ಲಕ್ಷ ಲಾಭ ಸಿಗುತ್ತದೆ.
ಇಷ್ಟು ಸರಳವಾದ ಕೃಷಿ ಚಟುವಟಿಕೆ ಅದರಲ್ಲೀ ಉಪಬೆಳೆ ಕ್ರಮ ಅಳವಡಿಸಿ ಕೊಂಡೆರೆ ನಿಮಗೆ ಖರ್ಚು ಕಡಿಮೆ ಅದರಂತೆ ಈ ಜಾಯಿಕಾಯಿ ಬೆಳೆಗೆ ಮದ್ದು ಸಿಂಪಡಣೆ ಸಹ ಬೇಡ, ಕೀಟ ಬಾಧೆ ಸಹ ಬರಲಾರದು. ಹಾಗಾಗಿ ಇದೊಂದು ಲಾಭದಾಯಕ ಕೃಷಿ ಕ್ರಮ ಎನ್ನಬಹುದು.