Arecanut: ಈ 3 ತಪ್ಪು ಮಾಡಿದರೆ ನಿಮ್ಮ ಅಡಿಕೆ ತೋಟ ಸರ್ವನಾಶವಾಗುತ್ತೆ!

Advertisement
ನಮ್ಮ ರಾಜ್ಯದಲ್ಲಿ ಅಡಿಕೆ ಬೆಳೆಗೆ ಹೆಚ್ಚಿನ ಬೇಡಿಕೆ ಇದೆ. ದೇಶದ ಮೂಲೆ ಮೂಲೆಗೂ ರಾಜ್ಯದಲ್ಲಿ ಬೆಳೆದ ಅಡಿಕೆ ರವಾನಿಸಲಾಗುತ್ತದೆ. ಇನ್ನು ಅಡಿಕೆ ಬೆಳೆಗಾರರು ಬಹಳ ಮುತುವರ್ಜಿಯಿಂದ ತಮ್ಮ ತೋಟವನ್ನು ನೋಡಿಕೊಳ್ಳುತ್ತಾರೆ. ಆದರೆ ಬೇಗ ಫಸಲು ಬರಲಿ ಎನ್ನುವ ಕಾರಣಕ್ಕೆ ತಪ್ಪಾಗಿ ಮಾಡುವ ಕೃಷಿಯಿಂದ ಅಡಿಕೆ ತೋಟ ಸರ್ವನಾಶವಾಗಬಹುದು. ಅಡಿಕೆ ತೋಟದಲ್ಲಿ ಮಾಡಲೇಬಾರದ ತಪ್ಪುಗಳು ಯಾವುವು ಎಂದರೆ..
ಟ್ರೆಂಚಿಂಗ್ ಮಾಡುವುದು:
ಸಾಕಷ್ಟು ಜನ ಚಿಕ್ಕ ಅಡಿಕೆ (Arecanut) ಗಿಡಗಳನ್ನು ಕೂಡ ಟ್ರೆಂಚಿಂಗ್ ತೆಗೆದು ನಾಟಿ ಮಾಡುತ್ತಾರೆ ಈ ರೀತಿ ಮಾಡಿ ಅತ್ಯಂತ ಹತ್ತಿರದಲ್ಲಿ ಗಿಡಗಳನ್ನು ನೆಡುವುದರಿಂದ ಗಿಡ ಉತ್ತಮವಾದ ಫಸಲು ಕೊಡಲು ಸಾಧ್ಯವೇ ಇಲ್ಲ. ಮೇಲ್ಮಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ ಆದರೆ ಯಾವುದೇ ಬೆಳೆಗೆ ಟ್ರೆಂಚಿಂಗ್ ತೆಗೆದು ಆಳವಾಗಿ ಗುಂಡಿಯನ್ನು ತೆಗೆದು ಗಿಡ ನೆಡುವುದರಿಂದ ಗಿಡಕ್ಕೆ ಫಲವತ್ತತೆ ಸಿಗಲು ಸಾಧ್ಯವಿಲ್ಲ.
ಅತಿಯಾದ ನೀರನ್ನು ಬಳಸುವುದು:
ಅಡಿಕೆ (Arecanut) ಗಿಡ ಚೆನ್ನಾಗಿ ಬೆಳೆಯಲಿ ಎಂದು ಅದಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ನೀರು ಕೊಡುವ ಅಗತ್ಯವಿಲ್ಲ ಅಡಿಕೆ ಗಿಡಕ್ಕೆ ಮುಖ್ಯವಾಗಿ ಸೂರ್ಯನ ಬೆಳಕು ಗಾಳಿ ಹಾಗೂ ಸ್ವಲ್ಪ ಪ್ರಮಾಣದ ನೀರು ಕೊಟ್ಟರೆ ಸಾಕು ನೀರು ಅತಿಯಾದರೆ ಅಡಿಕೆ ಗಿಡ ಹಾಳಾಗುತ್ತದೆ ಉದಾಹರಣೆಗೆ ಅತಿಯಾಗಿ ಮಳೆ ಆದ ಸಂದರ್ಭದಲ್ಲಿ, ಅಡಿಗೆ ಗಿಡದಲ್ಲಿ ರೋಗಗಳು ಬರುವುದನ್ನು ನೀವು ಕಂಡಿರಬಹುದು ಅದೇ ರೀತಿ ಅತಿಯಾಗಿ ನೀರನ್ನು ಕೊಟ್ಟರೆ ಸುಳಿರೋಗ ಗಿಡಕ್ಕೆ ಬರುತ್ತದೆ. ಅಡಿಕೆ ಗಿಡ ಚಿಕ್ಕದಾಗಿರುವಾಗಲೇ ಸುಳಿ ಕೊಳೆ ರೋಗ ಬಂದರೆ ಆ ಗಿಡ ಮತ್ತೆ ಬೆಳೆಯಲು ಸಾಧ್ಯವಿಲ್ಲ.
ಇನ್ನು ಅಡಿಕೆ (Arecanut) ಗಿಡ ನೆಡುವಾಗ ಮಣ್ಣಿನಲ್ಲಿ ಫಲವತ್ತತೆ ಇದೆಯೇ ಎಂಬುದನ್ನು ಮೊದಲು ಪರೀಕ್ಷೆ ಮಾಡಬೇಕು ಮಣ್ಣಿನಲ್ಲಿ ಹೆಚ್ಚು ತೇವಾಂಶ ಉಳಿದುಕೊಂಡಿದ್ದರೆ ಆ ಮಣ್ಣು ಫಲವತ್ತಾಗಿ ಇರುವುದಿಲ್ಲ. ಯಾವುದೇ ಬೆಳೆ ಬೆಳೆಯಲು ಕೂಡ ಅನುಕೂಲಕರವಾಗಿರುವುದಿಲ್ಲ. ಫಲವತ್ತಾಗಿರುವ ಮಣ್ಣು ಕೈನಲ್ಲಿ ಹಿಡಿದರೆ ಉದುರುದುರಾಗಿ ಬೀಳುವಂತೆ ಇರಬೇಕು ಆದರೆ ಡ್ರೈ ಆಗಿರಬಾರದು. ಅದರಂತೆ, ಭೂಮಿಯಲ್ಲಿ ಮಣ್ಣು ಫಲವತ್ತಾಗಿದ್ದರೆ ಕೈಯಿಂದಲೇ ಸುಮಾರು ಆರು ಇಂಚಿನವರೆಗೂ ಗುಂಡಿ ತೋಡಬಹುದು ಆ ರೀತಿ ಇದ್ದಾಗ ಮಾತ್ರ ಅದು ಫಲವತ್ತಾದ ಮಣ್ಣು ಎಂದು ಕರೆಸಿಕೊಳ್ಳುತ್ತದೆ. ಇಂತಹ ಮಣ್ಣಿನಲ್ಲಿ ಗಿಡಗಳೂ ಬೇಗ ಬೆಳೆಯುತ್ತದೆ.
DAP ಅತಿಯಾಗಿ ಬಳಸುವುದು:
ಇನ್ನು ತೋಟದಲ್ಲಿ ಅಡಿಕೆ (Arecanut) ಗಿಡ ಸರಿಯಾಗಿ ಬೆಳೆಯಲು ಅದಕ್ಕೆ ಸರಿಯಾದ ಪೋಷಕಾಂಶಗಳು ಬೇಕು. ರಂಜಕ, ಪೊಟ್ಯಾಷ್ ಸರಿಯಾಗಿ ಸಿಗಬೇಕು ಆದರೆ ಡಿಎಪಿ ನಂತಹ ರಾಸಾಯನಿಕ ಗೊಬ್ಬರಗಳನ್ನು ಅತಿಯಾಗಿ ಬಳಸುವುದರಿಂದ ಹಾಗೂ ಅತಿಯಾಗಿ ನೀರನ್ನು ಕೊಡುವುದರಿಂದ ಗಿಡ ಚೆನ್ನಾಗಿ ಬೆಳವಣಿಗೆ ಆಗುವುದಿಲ್ಲ. ಒಂದು ಅಡಿಕೆ ಗಿಡವನ್ನು ಹಾಕಿ ಒಂದೂವರೆಯಿಂದ ಎರಡು ತಿಂಗಳಲ್ಲಿ ಅದರ ಬೇರು ಬೆಳವಣಿಗೆ ಆಗುವುದಕ್ಕೆ ಶುರುವಾಗುತ್ತದೆ ಆದರೆ ಬೇರು ಬೆಳವಣಿಗೆಯಾಗಲು ಪೋಷಕಾಂಶ ಬೇಕು. ಮತ್ತೆ ಪೋಷಕಾಂಶ ನೀಡುವುದಕ್ಕೆ ರಾಸಾಯನಿಕ ಬಳಸುವುದಕ್ಕಿಂತ ಬೇವಿನ ಹಿಂಡಿ ಹಸುವಿನ ಗೊಬ್ಬರ ಬಳಸುವುದು ಉತ್ತಮ.
ಈ ರೀತಿಯಾಗಿ ಅಡಿಕೆ ಕೃಷಿಯಲ್ಲಿ ಮಾಡುವಂತಹ ತಪ್ಪುಗಳು ಬೆಳೆಯ ಫಸಲನ್ನು ಹಾಳು ಮಾಡಬಹುದು ಅಥವಾ ಗಿಡಕ್ಕೆ ರೋಗ ಕೂಡ ಬರಬಹುದು. ಆದ್ದರಿಂದ ಅಡಿಕೆ ಕೃಷಿ ಮಾಡುವಾಗ ಬಹಳ ಜಾಗರೂಕತೆಯಿಂದ ತಜ್ಞರನ್ನು ಕೇಳಿ ತಿಳಿದು ಅಡಿಕೆ ಕೃಷಿ ಮಾಡುವುದು ಒಳ್ಳೆಯದು.