Gruha Lakshmi Yojana: ಗೃಹಲಕ್ಷ್ಮೀ ಯೋಜನೆಗೆ ಅತೀ ಹೆಚ್ಚು ನೋಂದಣಿ ಮಾಡಿಕೊಂಡ ಆ ಜಿಲ್ಲೆ ಯಾವುದು ಗೊತ್ತಾ?
ರಾಜ್ಯ ಸರಕಾರ ಈ ಬಾರಿ ಚುನಾವಣೆಗೆ ನೀಡಿದಾಶ್ವಸನೆಯಂತೆ ನಡೆಯುತ್ತಿದ್ದು ಸಾಕಷ್ಟುಜನಪರ ಅಭಿವೃದ್ಧಿ ಕಾರ್ಯಕ್ರಮ ಮಾಡಿದೆ ಅದರಲ್ಲೂ ಮಹಿಳೆಯರಿಗೆ ಒಂದು ಅಂಶ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದರೂ ತಪ್ಪಲ್ಲ ಶಕ್ತಿ ಯೋಜನೆಯ ಭರ್ಜರಿ ಯಶಸ್ಸಿನ ಬಳಿಕ ಎಲ್ಲರ ಬಳಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಪ್ರಕ್ರಿಯೆ ನಡೆಸಲಾಗಿತ್ತು ರಾಜ್ಯದ ಮೂಲೆ ಮೂಲೆಗಳಿಂದಲೂ ಮನೆ ಹಿರಿಯ ಮಹಿಳೆಯರು ಈ ಆರ್ಥಿಕ ನೆರವು (economical benifit) ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಕೆಲ ನಿರ್ದಿಷ್ಟ ನಿಯಮದ ಹೊರತು ಅರ್ಹರಿಗೆ ಆರ್ಥಿಕ ಸಹಾಯಧನವಾಗಿ ಪ್ರತಿ ತಿಂಗಳು ಎರಡು ಸಾವಿರ ಲಭ್ಯ ಇರಲಿದ್ದು ಸ್ವಾವಲಂಬನೆಗೆ ಈ ಒಂದು ಯೋಜನೆ ಸಾಕಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲೆಲ್ಲ ನೋಂದಣಿ ಪ್ರಕ್ರಿಯೆ ಭರ್ಜರಿಯಾಗಿ ಸಾಗಿತ್ತಿದ್ದರೂ ಅತೀ ಹೆಚ್ಚು ನೋಂದಣಿ ಮಾಡಿಕೊಂಡ ಭಾಗ ಯಾವುದಿರಬಹುದು ಎಂಬ ಸಹಜ ಕುತೂಹಲ ಎಲ್ಲರಿಗೂ ಬರಲಿದೆ ಆ ಸ್ಥಳ ಯಾವುದು ಇತ್ಯಾದಿ ಮಾಹಿತಿ ಇಲ್ಲಿದೆ.
ಯಾವುದು ಆ ಜಿಲ್ಲೆ?
ರಾಜ್ಯದಲ್ಲಿ ಗೃಹಲಕ್ಷ್ಮೀ (Gruha Lakshmi Yojana) ಯೋಜನೆಗೆ ಅತೀ ಹೆಚ್ಚು ನೋಂದಣಿ ಮಾಡಿಕೊಂಡ ಜಿಲ್ಲೆ ಮತ್ಯಾವುದು ಅಲ್ಲ ಹಾವೇರಿ (Haveri) . ಅಲ್ಲಿ 3.94ಲಕ್ಷ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಿದ್ದು ಅದರಲ್ಲಿ 3.48ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಹಾವೇರಿ ಮೊದಲ ಸ್ಥಾನ ಅಲಂಕರಿಸಿದ್ದು ಉಳಿದ ಮಂದಿಯಾಕಾಗಿ ಅರ್ಜಿ ಸಲ್ಲಿಸಿಲ್ಲ ಎಂಬ ಪರಿಶೀಲನೆ ಸಹ ಮಾಡುತ್ತಿದ್ದಾರೆ.
ಸಚಿವೆ ತಿಳಿಸಿದ್ದೇನು?
ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀಗೆ ಆ.30ರಂದು ಮೈಸೂರಿನಲ್ಲಿ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ (Rahul Gandhi) ಅವರ ಸಮ್ಮುಖದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಬಗ್ಗೆ ತಿಳಿಸಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾಂಗ್ರೆಸ್ ವರಿಷ್ಠ ರಾದ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಮಧುಬಂಗಾರಪ್ಪ ಸೇರಿದಂತೆ ಅನೇಕ ಶಾಸಕರು ಹಾಗೂ ಸಚಿವರು ಪಾಲ್ಗೊಳ್ಳಲಿದ್ದಾರೆ.
ಈಗಾಗಲೇ ಈ ಸಂಬಂಧಿತ ಸಕಲ ಸಿದ್ಧತೆ ನಡೆಯುತ್ತಿದ್ದು ಇನ್ನೆನು ಕೆಲ ದಿನದಲ್ಲಿ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀ ಭರ್ಜರಿಯಾಗೇ ರಾಜ್ಯದಲ್ಲಿ ಎಲ್ಲೆಡೆ ಸುದ್ದಿಯಾಗಲಿದೆ. ಅರ್ಜಿ ಸಲ್ಲಿಕೆಯಾದದ್ದು ಈಗ ಪರಿಶೀಲನೆ ಹಂತದಲ್ಲಿದ್ದು ಆ. 30ರ ಬಳಿಕ ಅರ್ಹರಿಗೆ ಎರಡು ಸಾವಿರ ಹಣ ಬರುವುದು ಪಕ್ಕಾ ಎನ್ನಬಹುದು.