Electricity Bill: 300 ಯೂನಿಟ್ ಗಿಂತ ಹೆಚ್ಚು ಕರೆಂಟ್ ಬಿಲ್ ಬರುತ್ತಿದೆಯಾ? ಕೂಡಲೇ ಈ ಕೆಲಸ ಮಾಡಿ, ಬಿಲ್ ಕಟ್ಟೋದೆ ಬೇಡ.

Advertisement
ನೀವು ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸುತ್ತೀರಾ? 300 ಯೂನಿಟ್ ಗಿಂತಲೂ ಹೆಚ್ಚಿಗೆ ಬಳಸುತ್ತೀರಾ ಹಾಗಾದ್ರೆ ನಿಮಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಸಿಗುವುದಿಲ್ಲ ಸಂಪೂರ್ಣ ಉಚಿತವಾಗಿ ವಿದ್ಯುತ್ ಬರುವಂತೆ ಮಾಡಿಕೊಳ್ಳಬಹುದು. ಅದೇನು ಗೊತ್ತಾ?
ಸೋಲಾರ್ ಪ್ಯಾನೆಲ್ ಅಳವಡಿಕೆ:
ನೀವು ಮನೆಯಲ್ಲಿ 200 ಅಥವಾ 300 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಸುವುದಾಗಿದ್ದರೆ ಈ ಸುದ್ದಿ ನಿಮಗಾಗಿ ನೀವು ಮನೆಯಲ್ಲಿ ಸೋಲಾರ್ ಅನ್ನು ಅಳವಡಿಸುವುದರ ಮೂಲಕ ವಿದ್ಯುತ್ (Electricity Bill) ವೆಚ್ಚ ಬಹಳ ಕಡಿಮೆ ಆಗುವಂತೆ ಮಾಡಿಕೊಳ್ಳಬಹುದು. ಸೋಲಾರ್ ಪ್ಯಾನೆಲ್ (Solar Panel) ಹೇಗೆ ಅಳವಡಿಸುವುದು ಎಷ್ಟು ಖರ್ಚಾಗುತ್ತದೆ ಎಂದು ಹಲವು ಯೋಜನೆಗಳು ಜನರಲ್ಲಿ ಇರುತ್ತೆ ಅದಕ್ಕಾಗಿ ಸೋಲಾರ್ ಪ್ಯಾಣಲ್ ಅಳವಡಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
ನಿಮ್ಮ ವಿದ್ಯುತ್ ಬಳಕೆ ಅಧಿಕವಾಗಿದ್ದರೆ, ದಿನಕ್ಕೆ 10 ಯೂನಿಟ್ ಬಳಸಿ ತಿಂಗಳಿಗೆ 300 ಯೂನಿಟ್ ಗಿಂತ ಹೆಚ್ಚಿಗೆ ಬಳಕೆ ಮಾಡುತ್ತಿದ್ದರೆ ನೀವು ಮನೆಯಲ್ಲಿ ಎರಡು ಕಿಲೋ ವ್ಯಾಟ್ ಹೊಂದಿರುವ ಸೌರಫಲಕವನ್ನು ಸ್ಥಾಪನೆ ಮಾಡಬಹುದು. ನಿಮಗೆ 300 ಯೂನಿಟ್ ವಿದ್ಯುತ್ ಬೇಕು ಅಂದರೆ ಎರಡು ಕಿಲೋ ವಾಟ್ ಆಗುತ್ತದೆ. ಇದರಿಂದ ವಿದ್ಯುತ್ ತಯಾರಿಸಿ ನಿಮ್ಮ ಬಳಕೆಗೆ ಇಟ್ಟುಕೊಂಡು ಇನ್ನು ಹೆಚ್ಚು ಉಳಿದ ವಿದ್ಯುತ್ತನ್ನು ಸರ್ಕಾರಕ್ಕೆ ಮಾರಾಟವನ್ನು ಕೂಡ ಮಾಡಿ ಅದರಿಂದಲೂ ಹಣ ಗಳಿಸಬಹುದು.
ಎರಡು ಕಿಲೋ ವ್ಯಾಟ್ ನಲ್ಲಿ ತಯಾರಿಸಿದ ಸುಮಾರು 100 ರಿಂದ 200 ಯೂನಿಟ್ ಗಳಷ್ಟು ಹೆಚ್ಚುವರಿಯಾಗಿ ಸರ್ಕಾರಕ್ಕೆ ಮಾರಾಟ ಮಾಡಲು ಸಾಧ್ಯವಿದೆ. ಇನ್ನು ಎರಡು ಕಿಲೋ ವ್ಯಾಟ್ ಹೊಂದಿರುವ ಸೋಲಾರ್ ಪ್ಯಾನೆಲ್ ಅನ್ನು ನೀವು ನಿಮ್ಮ ಮನೆಯಲ್ಲಿ ಅಳವಡಿಸುವುದಾದರೆ 76,000 ರೂ. ಬೇಕು. ಇಷ್ಟು ಪೂರ್ಣ ಹಣವನ್ನು ನೀವು ಒಂದೇ ಸಲ ಭರಿಸಬೇಕಾಗಿಲ್ಲ. ಸರ್ಕಾರ 30,400 ರೂ, ಸಹಾಯಧನವನ್ನು ಕೂಡ ನೀಡುತ್ತದೆ. ನೀವು ಸರ್ಕಾರದ ಸಬ್ಸಿಡಿ ನಿಯಮದ ಅನುಸಾರವಾಗಿ ಸಬ್ಸಿಡಿಯನ್ನು ಪಡೆಯುತ್ತೀರಿ.
ಇನ್ನು ಗ್ರಿಡ್ ಸೋಲಾರ್ ಸಿಸ್ಟಮ್ ಒಂದು ಕಿಲೋ ಬ್ಯಾಟರಿಗೆ 80,000 ರೂ. ಖರ್ಚಾಗುತ್ತೆ. ಅದೇ ರೀತಿ ಎರಡು ಕಿಲೋ ವ್ಯಾಟ್ ಗ್ರೀಡ್ ಸೋಲಾರ್ ಸಿಸ್ಟಮ್ ಗೆ 1,55,000 ಖರ್ಚಾಗುತ್ತದೆ. ಅದೇ ರೀತಿ ಹತ್ತು ಕಿಲೋಮೀಟರ್ ಅನ್ ಗ್ರಿಡ್ ಸೋಲಾರ್ ಸಿಸ್ಟಮ್ ಅನ್ನು ಸ್ಥಾಪಿಸಿದರೆ 6 ಲಕ್ಷ ರೂಪಾಯಿಗಳಷ್ಟು ಖರ್ಚಾಗುತ್ತೆ. ಆದರೆ ಸೋಲಾರ್ ಪ್ಯಾನೆಲ್ ಅಳವಡಿಕೆ ಒಂದು ಸಲದ ಇನ್ವೆಸ್ಟ್ಮೆಂಟ್ ಮಾತ್ರ. ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನಲ್ ಇದ್ದರೆ ನೀವು ಸರ್ಕಾರದಿಂದ ವಿದ್ಯುತ್ ಪಡೆಯುವ ಅಗತ್ಯವೇ ಇರುವುದಿಲ್ಲ ಅದರ ಬದಲು ನೀವೇ ವಿದ್ಯುತ್ ತಯಾರಿಸಿ ಸರ್ಕಾರಕ್ಕೂ ಮಾರಾಟ ಮಾಡಬಹುದು. ಹಾಗಾಗಿ ನೀವು ಸ್ವಲ್ಪ ವೆಚ್ಚ ಮಾಡಲು ಸಿದ್ಧರಿದ್ದರೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸುವುದು ಅತ್ಯುತ್ತಮ ಆಯ್ಕೆಯಾಗಿದೆ.