Karnataka Times
Trending Stories, Viral News, Gossips & Everything in Kannada

IAS Question: ಯಾವ ದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲ ಗೊತ್ತಾ? IAS ಪ್ರಶ್ನೆ

ಜನರಲ್ ನಾಲೆಜ್ಡ್ ಅಥವಾ ಸಾಮಾನ್ಯ ಜ್ಞಾನ ಎನ್ನುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದರು ಕೂಡ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡಿರಬೇಕು. ಜೊತೆಗೆ ಸಾಮಾನ್ಯ ಜ್ಞಾನ ಕೂಡ ಇರಬೇಕು ಹೀಗೆ ಬೇರೆ ಬೇರೆ ರೀತಿಯಾದಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಮಾನ್ಯ ಜ್ಞಾನ ಹೊಂದಿರುವುದು ಬಹಳ ಮುಖ್ಯ. ನೀವು ಪಠ್ಯಕ್ರಮದಲ್ಲಿ ಏನು ಓದಿಕೊಂಡು ಬಂದಿದ್ದೀರೋ ಅದು ಇಲ್ಲಿ ಮುಖ್ಯವಾಗುವುದಿಲ್ಲ.

Advertisement

ನಿಮ್ಮ ಬಳಿ ಎಷ್ಟು ಸಾಮಾನ್ಯ ಜ್ಞಾನ ಇದೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ ನಿಮಗೆ ಉತ್ತರ ಗೊತ್ತಿದ್ದರೆ ಪರೀಕ್ಷೆ ಪಾಸ್ ಆಗುವುದು ಬಹಳ ಸುಲಭ. ಹಾಗಾದ್ರೆ ನಿಮಗೆ ಒಂದು ಟೆಸ್ಟ್ ಮಾಡೋಣ ಈ ಕೆಳಗೆ ಕೊಟ್ಟಿರುವ ಪ್ರಶ್ನೆ (IAS Question) ಗೆ ಸರಿಯಾದ ಉತ್ತರ ನಿಮಗೆ ಗೊತ್ತಿದ್ಯಾ ನೋಡಿ ಇಲ್ಲಿ ಕೊಟ್ಟಿರುವ ಉತ್ತರಗಳನ್ನು ನೋಡದೆ ಪ್ರಶ್ನೆಯನ್ನು ನೋಡಿ ಉತ್ತರಿಸುವ ಪ್ರಯತ್ನ ಮಾಡಿ

Advertisement

ಸಾಮಾನ್ಯ ಜ್ಞಾನದ ಪ್ರಶ್ನೆಗಳು ಹೀಗಿವೆ:

Advertisement

ಪ್ರಶ್ನೆ 1: ಅತಿ ಹೆಚ್ಚು ಏಲಕ್ಕಿ ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ: ಘಮಘಮಿಸುವ ಏಲಕ್ಕಿಯನ್ನು ಪ್ರತಿಯೊಬ್ಬರ ಮನೆಯಲ್ಲಿಯೂ ಸಿಹಿ ಖಾದ್ಯ ತಯಾರಿಸುವಾಗ ಬಳಸುತ್ತಾರೆ ಈ ಸಾಂಬಾರ ಪದಾರ್ಥಕ್ಕೆ ವಿದೇಶದಲ್ಲಿಯೂ ಕೂಡ ಬೇಡಿಕೆ ಇದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಏಲಕ್ಕಿಯನ್ನು ಕೇರಳ ರಾಜ್ಯದಲ್ಲಿ ಉತ್ಪಾದಿಸಲಾಗುತ್ತದೆ.

Advertisement

ಪ್ರಶ್ನೆ 2: ಹಾಲು ಮತ್ತು ಮೊಟ್ಟೆ ಈ ಎರಡನ್ನು ನೀಡುವ ಪ್ರಾಣಿ ಯಾವುದು?
ಉತ್ತರ: ಸಾಮಾನ್ಯವಾಗಿ ಹಾಲು ನೀಡುವ ಪ್ರಾಣಿ ಮೊಟ್ಟೆ ಕೊಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಪ್ಲಾಟಿಪಸ್ ಹಾಲು ಕೊಡುವುದು ಮಾತ್ರವಲ್ಲದೆ ಮೊಟ್ಟೆಯನ್ನು ಕೂಡ ನೀಡುವಂತಹ ಪ್ರಾಣಿಯಾಗಿದೆ. ಇದರ ಸಂಖ್ಯೆ ಮಾತ್ರ ಬಹಳ ವಿರಳ.

ಪ್ರಶ್ನೆ 3: ಈ ದೇಶದಲ್ಲಿ ಇಂಟರ್ನೆಟ್ ಬಳಸುವುದು ಅಪರಾಧ ಯಾವ ದೇಶ ಗೊತ್ತಾ?
ಉತ್ತರ: ಭಾರತದಲ್ಲಿ ಇಂಟರ್ನೆಟ್ ಇಲ್ಲದೆ ಜೀವಿಸುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಅಷ್ಟರ ಮಟ್ಟಿಗೆ ಪ್ರತಿಯೊಬ್ಬರು ಇಂಟರ್ನೆಟ್ ಬಳಸುತ್ತಾರೆ ಅದಕ್ಕೆ ಎಡಿಕ್ಟ್ ಕೂಡ ಆಗಿದ್ದಾರೆ. ಆದರೆ ಆಶ್ಚರ್ಯ ಅಂದ್ರೆ ಮಯನ್ಮಾರ್ ನಲ್ಲಿ ಮಾತ್ರ ಇಂಟರ್ನೆಟ್ ಬಳಸುವುದೇ ಅಪರಾಧ.

ಪ್ರಶ್ನೆ 4: ಮಾನವ ದೇಹದ ಯಾವ ಭಾಗ ವಿದ್ಯುತ್ ಉತ್ಪಾದಿಸುತ್ತೆ?
ಉತ್ತರ: ಮನುಷ್ಯನ ದೇಹದಲ್ಲಿಯೂ ಎಲೆಕ್ಟ್ರಿಕ್ ಅಥವಾ ವಿದ್ಯುತ್ ಇರುತ್ತದೆ ಎನ್ನುವುದು ಹಲವರಿಗೆ ಗೊತ್ತಿರಬಹುದು ನಮ್ಮ ದೇಹದ ಮೆದುಳು ಭಾಗದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ.

ಪ್ರಶ್ನೆ 5: “ಪೊಲೀಸ್” ಹಿಂದಿಯಲ್ಲಿ ಈ ಪದವನ್ನು ಏನೆಂದು ಕರೆಯಲಾಗುತ್ತೆ?
ಉತ್ತರ: ಎಂದೇ ಕರೆಯಲ್ಪಡುವ ಈ ಶಬ್ದ ಕನ್ನಡದಲ್ಲಿ ಆರಕ್ಷಕರು ಎಂಬುದಾಗಿದ್ದರೆ ಹಿಂದಿಯಲ್ಲಿ ಆರಾಕ್ಷಿ ಅಥವಾ ಕಾನ್ಸ್ಟೇಬಲ್ ಎಂದು ಕರೆಯಲಾಗುತ್ತದೆ.

ಪ್ರಶ್ನೆ 6: ಪ್ರಪಂಚದಲ್ಲಿರುವ ಈ ಒಂದು ದೇಶದಲ್ಲಿ ಮಾತ್ರ ಟ್ರಾಫಿಕ್ ಸಿಗ್ನಲ್ ಇಲ್ಲ ಯಾವ ದೇಶ ಗೊತ್ತಾ?
ಉತ್ತರ: ಪ್ರವಾಸೋದ್ಯಮ ವಿಚಾರದಲ್ಲಿ ಹೆಚ್ಚು ಗಮನಹರಿಸುವ, ಅತ್ಯಂತ ಸುಂದರ ತಾಣವಾಗಿರುವ ಭೂತಾನ್ (Bhutan) ರಾಷ್ಟ್ರದಲ್ಲಿ ಮಾತ್ರ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಕಾಣಲು ಸಿಗುವುದಿಲ್ಲ.

ಈ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರ ನಿಮಗೆ ಗೊತ್ತಾದರೆ ನಿಮ್ಮಲ್ಲಿ ಇಟ್ಟುಕೊಳ್ಳಬೇಡಿ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ ಅವರ ಉತ್ತರವನ್ನು ಕೂಡ ತಿಳಿದುಕೊಳ್ಳಿ.

Leave A Reply

Your email address will not be published.