Moon: ಭೂಮಿ ಮೇಲೆ ನೀವು 100Kg ಇದ್ರೆ ಚಂದ್ರನ ಮೇಲೆ ಹೋದರೆ ಎಷ್ಟು Kg ಆಗುತ್ತೆ ಗೊತ್ತಾ?

Advertisement
ಇತ್ತೀಚಿಗಷ್ಟೇ ನಮ್ಮೆಲ್ಲರ ಹೆಮ್ಮೆಯ ಭಾರತ ದೇಶದ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋ (ISRO) ಈಗಾಗಲೇ ತಿಳಿದಿರುವ ಹಾಗೆ ಚಂದ್ರಯಾನ 3 (Chandrayaan 3) ಅನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿದ್ದು ಚಂದ್ರನ ಮೇಲೆ ಕಾಲಿಟ್ಟಿರುವಂತಹ ನಾಲ್ಕನೇ ದೇಶ ಎನ್ನುವಂತಹ ಶ್ರೇಯಕ್ಕೆ ಒಳಗಾಗಿದೆ. ಭಾರತ ದೇಶ ಒಂದು ಕಾಲದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು. ಪಾಠ ಪುಸ್ತಕಗಳಲ್ಲಿ ಓದುವಾಗ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಈಗ ಭಾರತ ದೇಶ ಬೆಳದಿರುವ ರಾಷ್ಟ್ರಗಳಲ್ಲಿ ಅತ್ಯಂತ ವೇಗವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ರಾಷ್ಟ್ರಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ.
ಈ ಸಮಯದಲ್ಲಿ ನಾವು ಇದಕ್ಕೆ ಕಾರ್ಣಿಕರಾಗಿರುವಂತಹ ಕೆಲವೊಂದು ವಿಜ್ಞಾನಿಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮ ರಾಷ್ಟ್ರದ ರಾಷ್ಟ್ರಪತಿಯಾಗಿ ಹಾಗೂ ಯಶಸ್ವಿ ವಿಜ್ಞಾನಿಯಾಗಿ ಕಾಣಿಸಿಕೊಂಡಿರುವಂತಹ ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರನ್ನು ಕೂಡ ನಾವು ಸ್ಮರಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಈ ಯೋಜನೆಯ ಮೂಲಕ ಚಂದ್ರನ ದಕ್ಷಿಣ ದ್ರುವದ ಮೇಲೆ ಕಾಲಿಟ್ಟಿರುವಂತಹ ಮೊದಲ ದೇಶವಾಗಿ ಕೂಡ ಭಾರತ ಕಾಣಿಸಿಕೊಳ್ಳುತ್ತದೆ.
ಇತ್ತೀಚಿಗಷ್ಟೇ ರಷ್ಯಾದ ಲೂನ 25 (Luna 25) ಉಪಗ್ರಹವನ್ನು ಕೂಡ ಚಂದ್ರನ ದಕ್ಷಿಣ ಧ್ರುವದ ಮೇಲೆ ಉಡಾವಣೆ ಮಾಡಲಾಗಿತ್ತು ಆದರೆ ಅದು ಆರ್ಬಿಟ್ ಅನ್ನು ತಲುಪುವ ಮುನ್ನವೇ ನಾಶವಾಗಿ ಹೋಗಿತ್ತು. ಪ್ರಪಂಚದ ಸೂಪರ್ ಪವರ್ ಗಳಲ್ಲಿ ಒಂದಾಗಿರುವ ರಷ್ಯಾ ದೇಶ ಕೂಡ ಮಾಡಲಾಗದ ಕೆಲಸವನ್ನು ನಮ್ಮ ಭಾರತ ದೇಶದ ವಿಜ್ಞಾನಿಗಳು ಮಾಡಿ ತೋರಿಸಿರುವುದು ನಿಜಕ್ಕೂ ಕೂಡ ಮೆಚ್ಚಿಕೊಳ್ಳಲೇ ಬೇಕಾಗಿರುವ ವಿಚಾರ. ಇನ್ನು ಚಂದ್ರನ ಮೇಲ್ಮೈ ಅನ್ನು ಪ್ರಗ್ಯಾನ್ ರೋವರ್ (Pragyan Rover) ಸುತ್ತಿ ಸಾಕಷ್ಟು ಮಾಹಿತಿಗಳನ್ನು ಇಸ್ರೋಗೆ ಕಳಿಸಿಕೊಡಲಿದೆ.
ಈ ಸಾಧನೆಯಿಂದಾಗಿ ನಾಸಾಗಿಂತಲೂ ಹೆಚ್ಚಿನ ಯಶಸ್ಸನ್ನು ಪಡೆದಿರುವಂತಹ ಬಾಹ್ಯಾಕಾಶ ಸಂಸ್ಥೆ ಎನ್ನುವ ಶ್ರೇಯಕ್ಕೆ ಹೆಸರು ಭಾಜನವಾಗಲಿದೆ. ಆದರೆ ಈ ಸಂದರ್ಭದಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ ಖಂಡಿತವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಕೂಡ ಮೂಡಿ ಬರುತ್ತದೆ. ಅದೇನೆಂದರೆ ಭೂಮಿಯ ಮೇಲಿನ ಮನುಷ್ಯನ ತೂಕಕ್ಕೂ ಚಂದ್ರನ ಮೇಲೆ ಹೋದಾಗ ಅಲ್ಲಿ ಆಗುವಂತಹ ತೂಕಕ್ಕೂ ಇರುವಂತಹ ವ್ಯತ್ಯಾಸ ಏನು ಎನ್ನುವುದಾಗಿ. ಹಾಗಿದ್ರೆ ಬನ್ನಿ ಅದರ ಬಗ್ಗೆ ಕೂಡ ಇವತ್ತಿನ ಆರ್ಟಿಕಲ್ ನಲ್ಲಿ ತಿಳಿಯೋಣ.
ಒಂದು ವೇಳೆ ಮನುಷ್ಯನ ತೂಕ ಭೂಮಿ (Earth) ಯಲ್ಲಿ ನೂರು ಕೆಜಿ ಇದೆ ಅಂದರೆ ಆತನ ತೂಕ ಚಂದ್ರ (Moon) ನ ಮೇಲೆ ಹೋದಾಗ ಕೇವಲ 16.5 ಕೆಜಿ ಆಗಿರುತ್ತದೆ. ಅಂದರೆ ಭೂಮಿಗಿಂತ ಚಂದ್ರನ ಗುರುತ್ವಾಕರ್ಷಣ ಬಲ ಅಷ್ಟೊಂದು ಪಟ್ಟು ಕಡಿಮೆ ಆಗಿರುತ್ತದೆ. ಹೀಗಾಗಿ ಭೂಮಿಯ ಮೇಲೆ ಇರುವಂತಹ ತೂಕ ಚಂದ್ರನ ಮೇಲೆ ಅದರ 16.5 ಪ್ರತಿಶತ ಮಾತ್ರ ಇರಲು ಸಾಧ್ಯ ಅನ್ನೋದನ್ನ ವಿಜ್ಞಾನಿಗಳು ಹೇಳುತ್ತಾರೆ. ಈ ಮೂಲಕ ನೀವು ಒಬ್ಬ ವ್ಯಕ್ತಿಯ ಅಥವಾ ಒಂದು ವಸ್ತುವಿನ ತೂಕ ಚಂದ್ರನ (Weight On Moon) ಮೇಲೆ ತಲುಪಿದಾಗ ಎಷ್ಟಾಗುತ್ತದೆ ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಂಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ. ಇಂತಹ ವಿಚಾರಗಳು ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೂಡ ಕಂಡುಬರುತ್ತದೆ ಹೀಗಾಗಿ ಇದನ್ನು ತಪ್ಪದೆ ನೆನಪಿನಲ್ಲಿಟ್ಟುಕೊಳ್ಳಿ.