Gas Cylinder: ಸೆಪ್ಟೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಬೆಲೆ ಆಗ್ತಾ ಇದೆ 587 ರೂಪಾಯಿ. ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.
ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಬಂದ್ ಮಾಡಿದ್ದು ಎನ್ನುವುದನ್ನು ನಾವು ನೋಡಬಹುದಾಗಿದ್ದು ಈಗ ಮತ್ತೆ ಸರ್ಕಾರ ಕೆಲವೊಂದು ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದು ಅದರಲ್ಲೂ ವಿಶೇಷವಾಗಿ ದೈನಂದಿನ ಅಡುಗೆಯಲ್ಲಿ ಬಳಸಲಾಗುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯನ್ನು ಸಬ್ಸಿಡಿ ದರದ ರೂಪದಲ್ಲಿ 303 ರೂಪಾಯಿಗಳಿಗೆ ಕಡಿತಗೊಳಿಸುತ್ತಿದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ.
ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದ್ದು ಒಂದು ವೇಳೆ ಇದಕ್ಕೆ ಒಪ್ಪಿಗೆ ಅಂಕಿತ ಸಿಕ್ಕಿದರೆ ಖಂಡಿತವಾಗಿ 900 ರೂಪಾಯಿಗಳ ಗ್ಯಾಸ್ ಸಿಲಿಂಡರ್ (Gas Cylinder) ನಿಮಗೆ ಕೇವಲ 587 ರೂಪಾಯಿಗಳಿಗೆ ಸಿಗಲಿದೆ. ನಿಮಗೆ ನೆನಪಿರಬಹುದು ಸರ್ಕಾರ ಲಾಕ್ಡೌನ್ ಸಂದರ್ಭದಲ್ಲಿ ಸಾಕಷ್ಟು ಬೇರೆ ಯೋಜನೆಗಳ ಜೊತೆಗೆ ಗ್ಯಾಸ್ ಮೇಲಿನ ಸಬ್ಸಿಡಿ ದರವನ್ನು ಕೂಡ ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಇದಕ್ಕಾಗಿ ಸರ್ಕಾರ ಈಗ ಗ್ಯಾಸ್ ಸಬ್ಸಿಡಿಯನ್ನು ಮತ್ತೆ ಪುನೇಶ್ಚೇತನ ಗೊಳಿಸುವ ನಿರ್ಧಾರಕ್ಕೆ ಬಂದಿದೆ.
ಹೇಳಿ ಬಂದಿರುವ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ರಾಜ್ಯಗಳ ಗ್ರಹಪಯೋಗಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯ ಮೇಲೆ ಸಬ್ಸಿಡಿ ನೀಡುವಂತಹ ಯೋಜನೆಯನ್ನು ಮಾಡಿಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕಿಂತ ಹೆಚ್ಚಾಗಿ ತಿಳಿದುಬಂದಿರುವ ಮತ್ತೊಂದು ಪ್ರಮುಖ ಮಾಹಿತಿ ಎಂದರೆ ಲೋಹದ ಗ್ಯಾಸ್ ಸಿಲಿಂಡರ್ (Gas Cylinder) ಬದಲಿಗೆ ಮಿಶ್ರಣ ಮಾಡಿರುವಂತಹ ಗ್ಯಾಸ್ ಸಿಲಿಂಡರ್ ಅನ್ನು ಬದಲಾಯಿಸುವಂತಹ ಕುರಿತಂತೆ ಕೂಡ ಯೋಚನೆ ಮಾಡುತ್ತಿದೆ. ಮಿಶ್ರಣ ಮಾಡಿರುವಂತಹ ವಸ್ತುವಿನ ಗ್ಯಾಸ್ ಸಿಲಿಂಡರ್ ತೂಕದಲ್ಲಿ ಕಡಿಮೆ ಆಗಿರಬಹುದು ಆದರೆ ಕ್ವಾಲಿಟಿಯ ವಿಚಾರದಲ್ಲಿ ಲೋಹದ ಸಿಲಿಂಡರ್ ಕ್ಕಿಂತ ಅತ್ಯಂತ ಮಜಬೂತು ಎಂದು ಹೇಳಬಹುದಾಗಿದೆ.
ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಕೂಡ ಬದಲಾವಣೆಯನ್ನು ತರುವಂತಹ ನಿರ್ಧಾರವನ್ನು ಮಾಡಬಹುದೇ ಎಂಬುದಾಗಿ ಕೆಲವೊಂದು ಮೂಲಗಳಿಂದ ತಿಳಿದು ಬಂದಿದೆ. ಸಬ್ಸಿಡಿ ಇಲ್ಲವೇ ಬೆಲೆಯನ್ನು ಕಡಿಮೆ ಮಾಡುವಂತಹ ಕುರಿತಂತೆ ಕೂಡ ಸಂಬಂಧ ಪಟ್ಟಂತಹ ಇಲಾಖೆಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಪ್ರತಿಯೊಂದು ಕಡೆಗಳಲ್ಲಿ ಕೂಡ ಪ್ರತಿಯೊಂದು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಕಂಡು ಬರುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗಾಗಿ ಖಂಡಿತವಾಗಿ ಗ್ಯಾಸ್ (Gas Cylinder) ಬೆಲೆಯ ಮೇಲೆ ಸಬ್ಸಿಡಿ ದರವನ್ನು(Subsidy On Gas) ನೀಡಲು ಹೊರಟಿರುವ ಸರಕಾರದ ನಿರ್ಧಾರ ನಿಜಕ್ಕೂ ಕೂಡ ಜನಸಾಮಾನ್ಯರಿಂದ ಸ್ವಾಗತಾರ್ಹವಾಗಿದೆ. ಗ್ಯಾಸ್ ಸಬ್ಸಿಡಿರುವನು ನೋಡುತ್ತಿರುವಂತಹ ಕೆಲವೊಂದು ಜನಸಾಮಾನ್ಯರು ಅದೇ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೂಡ ಕಡಿಮೆ ಮಾಡಿ ಎನ್ನುವುದಾಗಿ ಕೇಳಿಕೊಳ್ಳಲು ಪ್ರಾರಂಭಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಆಗಿದ್ದ ಕೆಲವೊಂದು ವಿಚಾರಗಳು ಈಗ ಮತ್ತೆ ಸುಸ್ಥಿತಿಗೆ ಬರುವಂತಹ ಹೆಜ್ಜೆಯನ್ನು ಇಟ್ಟಿರುವುದು ಕೂಡ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.