Govt Land: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೆ ಯಾರಿಗೆ ದೂರು ನೀಡಬೇಕು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Advertisement
ನಮ್ಮ ಸುತ್ತ ಮುತ್ತಲಿನಲ್ಲಿ ಪ್ರದೇಶದಲ್ಲಿ ಸರ್ಕಾರಿ ಜಾಗ (Govt Land) ವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಈ ಸರ್ಕಾರಿ ಜಾಗ (Govt Land) ದಲ್ಲಿ ದೊಡ್ಡ ಕಟ್ಟಡಗಳನ್ನು ಕಟ್ಟಿರುತ್ತಾರೆ. ಆದರೆ ಈ ವಿಚಾರದ ಬಗ್ಗೆ ತಿಳಿದಿದ್ದರೂ ಅನೇಕರಿಗೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಯಾರಿಗೆ ಮಾಹಿತಿ ನೀಡಬೇಕು ಎನ್ನುವುದು ತಿಳಿದಿರುವುದಿಲ್ಲ. ವರ್ಷಗಳ ಕಾಲ ಒಂದು ಜಾಗ ಪಾಳು ಬಿದಿದ್ದರೆ, ಅದಕ್ಕೆ ಸಂಬಂಧಪಟ್ಟ ದಾಖಲೆ ಗಳು ಇಲ್ಲದೇ ಇದ್ದಾಗ ಅಂತಹ ಜಾಗಗಳು ಸರ್ಕಾರದ ಸ್ವಾಧೀನಕ್ಕೆ ಒಳ ಪಡುತ್ತದೆ. ದನಕರುಗಳಿಗೆ ಮೀಸಲಿಟ್ಟ ಸರ್ಕಾರಿ ಜಾಗ, ಗ್ರಾಮಕ್ಕೆ ಹೊಂದಿಕೊಂಡಿರುವ ಒಂದೆರಡು ಸರ್ವೇ ನಂಬರ್ ಗಳನ್ನು ಒಳಗೊಂಡ ಜಾಗ, ಗೋಮಾಳ ಹಾಗೂ ಗೈರಾಣಗಳು ಸರ್ಕಾರಕ್ಕೆ ಸಂಬಂಧಪಟ್ಟಿರುವುದು ಆಗಿರುತ್ತದೆ.
Govt Land ವನ್ನು ಯಾರದರೂ ಬಳಸಿಕೊಂಡಿರುವುದು ನಿಮ್ಮ ಗಮನಕ್ಕೆ ಬಂದರೆ ಏನು ಮಾಡಬೇಕು?
- ರೆವೆನ್ಯೂ ಇನ್ಸ್ಪೆಕ್ಟರ್ (Revenue Inspector) ಗೆ ಮಾಹಿತಿಯನ್ನು ನೀಡಬೇಕು.
- ರೆವೆನ್ಯೂ ಇನ್ಸ್ಪೆಕ್ಟರ್ ಯಾವುದೇ ರೀತಿಯ ಪ್ರತಿಕ್ರಿಯೆ ಬರದೇ ಇದ್ದಲ್ಲಿ, ಎಲ್ಲಾ ದಾಖಲೆಗಳ ಸಹಿತ ತಹಶೀಲ್ದಾರ್ (Tehsildar)ಅವರಿಗೆ ದೂರು ನೀಡಬಹುದು.
- ಈ ದೂರಿನ ಅರ್ಜಿಯಲ್ಲಿ ಸ್ಥಳ, ಎಷ್ಟು ಜಮೀನು ಕಬಳಿಸಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಬರೆದಿರಬೇಕು.
- ಅರ್ಜಿಯ ಜೊತೆಗೆ ದಾಖಲೆಗಳು ಅಥವಾ ಸಾಕ್ಷಿಗಾಗಿ ಸೂಕ್ತ ಪುರಾವೆಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವವರು ತಮ್ಮ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳಬೇಕು?
- ಗ್ರಾಮದಲ್ಲಿರುವ ಆಸಕ್ತರು ಒಟ್ಟಾಗಿ ದೂರು ಕೊಡುವುದು ಒಳಿತು.
- ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೂ ಸಲ್ಲಿಸುವುದು ಉತ್ತಮ.
- ಸರ್ಕಾರಿ ಜಾಗವು ಗ್ರಾಮಾಠಾಣಾ ವ್ಯಾಪ್ತಿಗೆ ಒಳಪಟ್ಟರೆ ತಹಸೀಲ್ದಾರರಿಗೆ ದೂರು ಕೊಡಬಾರದು. ಗ್ರಾಮ ಪಂಚಾಯತ್ ಅಧಿಕಾರಿ ಪಿಡಿಓ ( PDO) ಗೆ ಅವರಿಗೆ ಅರ್ಜಿ ಸಲ್ಲಿಸಬಹುದು.