Ambani Daughter: ಹೊಸ ಉದ್ಯಮ ಆರಂಭಿಸಿದ ಅಂಬಾನಿ ಮಗಳು!

Advertisement
ರಿಲಯನ್ಸ್ ಕಂಪನಿ ಇದೀಗ ಫ್ಯಾಶನ್ ಲೋಕಕ್ಕೂ ಕಾಲಿಟ್ಟಿದೆ. ಫ್ಯಾಶನ್ ಜಗತ್ತಿನ ಮೇಲೆ ಕೇಂದ್ರೀಕರಿಸಿರುವ ರಿಲಯನ್ಸ್ ರಿಟೇಲ್, ಯೂಸ್ಟಾ (Yousta) ಎನ್ನುವ ಫ್ಯಾಷನ್ ಸ್ಟೋರ್ ಬಿಡುಗಡೆ ಮಾಡಿದೆ. ಅತಿ ಕಡಿಮೆ ಬೆಲೆಗೆ ಯೂಸ್ಟಾದಲ್ಲಿ ಬಟ್ಟೆಗಳನ್ನು ಖರೀದಿ ಮಾಡಬಹುದಾಗಿದೆ.
ಹೈದರಾಬಾದ್ ನಲ್ಲಿ ಆರಂಭವಾದ ಮೊದಲ ರಿಟೇಲ್ ಶಾಪ್:
ರಿಲಯನ್ಸ್ ತನ್ನ ರಿಟೇಲ್ ಶಾಪ್ ಆಗಿರುವ ಯೂಸ್ಟಾ ಸ್ಟೋರ್ (Yousta Store) ಅನ್ನು ಹೈದರಾಬಾದ್ ನ ಶರತ್ ಸಿಟಿ ಮಾಲ್ ನಲ್ಲಿ ಮೊದಲ ಬಾರಿಗೆ ಆರಂಭಿಸಿದೆ. ಈ ಸ್ಟೋರ್ ನಲ್ಲಿ ವಿಶೇಷ ಅಂದರೆ ಯುವಕರಿಗೆ ಇಷ್ಟ ಆಗುವಂತಹ ಬಟ್ಟೆಗಳನ್ನು ಇಡಲಾಗಿದ್ದು ಕೇವಲ 999 ರೂಪಾಯಿಗಳಿಗಿಂತಲೂ ಅತಿ ಕಡಿಮೆ ಬೆಲೆಗೆ ಫ್ಯಾಶನೆಬಲ್ ಆಗಿರುವ ಬಟ್ಟೆಗಳನ್ನು ಖರೀದಿ ಮಾಡಬಹುದಾಗಿದೆ. ಕೇವಲ 499 ರೂಪಾಯಿಗಳಿಂದ ಇಲ್ಲಿ ಬಟ್ಟೆಗಳು ಸಿಗುತ್ತವೆ. ಎಲ್ಲಾ ಬ್ರ್ಯಾಂಡೆಡ್ ಬಟ್ಟೆಗಳು ದುಭಾರಿಯಾಗಿರುತ್ತವೆ. ಆದರೆ ಇಲ್ಲಿ ಸಕ್ಕತ್ ಟ್ರೆಂಡಿ ಆಗಿರುವ ಬಟ್ಟೆಗಳಾನ್ನು ಅತಿ ಕಡಿಮೆ ಬೆಲೆಗೆ ಖರೀಸಿ ಮಾಡಬಹುದು. ಹಾಗಾಗಿ ರಿಲಯನ್ಸ್ ನ ಯೂಸ್ಟಾ ಸ್ಟೋರ್ (Reliance Yousta Store), ಟಾಟಾದ ಜುಡಿಯೋ, ಪ್ಯಾಂಟಲೂನ್ಸ್ ಮೊದಲಾದ ಕಂಪನಿಗೆ ನೇರವಾಗಿ ಪೈಪೋಟಿ ನೀಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕೈಗೆಟುಕುವ ದರದಲ್ಲಿ ಬಟ್ಟೆಗಳು:
ಸಾಮಾನ್ಯವಾಗಿ ಬಹಳ ಫ್ಯಾಷನ್ ಆಗಿರುವ ಬಟ್ಟೆಗಳ ಬೆಲೆ ದುಬಾರಿ ಆಗಿರುತ್ತದೆ. ಆದರೆ ಯೂಸ್ಟಾ ಸ್ಟೋರಿಂಗ್ ನಲ್ಲಿ ನೀವು ಅತಿ ಕಡಿಮೆ ಬೆಲೆಗೆ ಬಟ್ಟೆಯನ್ನು ಖರೀದಿ ಮಾಡಿ ಸ್ಟಾರಿಂಗ್ ಲುಕ್ ಪಡೆದುಕೊಳ್ಳಬಹುದು. ಹೌದು ಯುನಿ ಸೆಕ್ಸ್ ಬಟ್ಟೆಗಳು, ಕ್ಯಾರೆಕ್ಟರ್ ಮರ್ಚಂಡೈಸ್, ರಿಫ್ರೇಶ ಕ್ಯಾಪ್ಸುಲ್ ಮೊದಲಾದ ಯೂತ್ ಗೆ ಇಷ್ಟವಾಗುವಂತಹ ಎಲ್ಲ ರೀತಿಯ ಫ್ಯಾಷನ್ ಉಡುಗೆಗಳು ಕೂಡ ಇಲ್ಲಿ ಲಭ್ಯವಿದೆ. ಹಾಗಾಗಿ ಕಡಿಮೆ ಬೆಲೆಗೆ ಎಷ್ಟು ಅದ್ಭುತ ಬಟ್ಟೆಗಳನ್ನು ನೀವು ಮಾತ್ರ ಖರೀದಿಸಲು ಸಾಧ್ಯ.
ಇಲ್ಲಿ ಖರೀದಿ ಮಾಡಿದ್ರೆ ಸಿಗುತ್ತೆ ಬೆನಿಫಿಟ್:
ಯೂಸ್ಟಾ ಸ್ಟಾರ್ (Yousta Store) ಗಳಲ್ಲಿ ನೀವು ಬಟ್ಟೆಗಳನ್ನು ಖರೀದಿ ಮಾಡಿದ್ರೆ ಉತ್ತಮವಾಗಿರುವ ಬಟ್ಟೆಯನ್ನು ಕಡಿಮೆ ಬೆಲೆಗೆ ಖರೀದಿ ಮಾಡುವ ಸೌಲಭ್ಯ ಮಾತ್ರವಲ್ಲದೆ ಯುವ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇನ್ನೂ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಕ್ಯೂಆರ್ ಕೋಡ್ ಸ್ಕ್ರೀನ್, ಟೆಕ್ ಟಚ್ ಪಾಯಿಂಟ್ ಮೊದಲಾದ ಲಾಭಗಳು ದೊರೆಯುತ್ತವೆ. ಇದರ ಜೊತೆಗೆ ಸ್ವಯಂ ಚೆಕ್ ಔಟ್ ಕೌಂಟರ್, ವೈಫೈ, ಚಾರ್ಜಿಂಗ್ ಸ್ಟೇಷನ್ ಮೊದಲಾದವುಗಳನ್ನು ಕೂಡ ಯುಸ್ಟಾ ಸ್ಟೋರ್ ನಲ್ಲಿ ನೀಡಲಾಗುತ್ತದೆ. ಸದ್ಯ ಯುಸ್ಟಾ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ಟೋರಿಗಳು ಎಲ್ಲಾ ಕಡೆ ಲಭ್ಯವಿಲ್ಲ. ನಿಧಾನವಾಗಿ ಎಲ್ಲಾ ನಗರಗಳಲ್ಲಿಯೂ ಕೂಡ ಯೂಸ್ಟಾ ರಿಟೇಲ್ ಸ್ಟೋರ್ ಆರಂಭವಾಗಬಹುದು. ಆದರೆ ಸದ್ಯ ನೀವು ಆನ್ಲೈನ್ ನಲ್ಲಿ ಪರ್ಚೇಸ್ ಮಾಡುವುದಾದರೆ ಅಜೀಯೋ (Ajio) ಹಾಗೂ ಜಿಯೋ ಮಾರ್ಟ್ (Jio Mart) ನಲ್ಲಿ ಖರೀದಿ ಮಾಡಬಹುದು.