Gold: ಚಿನ್ನ ನಕಲಿನಾ ಅಸಲಿನಾ ಅಂತಾ ಟೆಸ್ಟ್ ಮಾಡೋದು ಹೇಗೆ! ಬಂತು ಹೊಸ ರೂಲ್ಸ್!

Advertisement
ಹೂಡಿಕೆ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರೂ ಕೂಡ ಆಯ್ಕೆ ಮಾಡುವಂತಹ ಮೊದಲ ಹೂಡಿಕೆಯ ಪ್ಲ್ಯಾಟ್ ಫಾರ್ಮ್ ಚಿನ್ನ (Gold Investment) ಎಂದು ಹೇಳಬಹುದಾಗಿದೆ. ಭೂಮಿ ಹಾಗೂ ಚಿನ್ನ (Gold) ದ ಮೇಲಿನ ಹೂಡಿಕೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ನೀವು ಲಾಭವನ್ನು ಪಡೆಯುವಂತಹ ಹೂಡಿಕೆ ಆಗಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಚಿನ್ನವನ್ನು ಖರೀದಿಸಿದ ನಂತರ ಅದು ಶುದ್ಧತೆಯ ವಿಚಾರದಲ್ಲಿ ಅಸಲಿನ ಅಥವಾ ನಕಲಿನ ಅನ್ನೋದನ್ನ ತಿಳಿದುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಹಾಗಿದ್ದರೆ ಬನ್ನಿ ಇವತ್ತಿನ ಈ ಆರ್ಟಿಕಲ್ ಮೂಲಕ ನಾವು ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ.
ಚಿನ್ನ (Gold) ಖರೀದಿಸಿದ ತಕ್ಷಣ ನೀವು ಮೊದಲು ಪರೀಕ್ಷಿಸಬೇಕಾಗಿರುವಂತದ್ದು ಚಿನ್ನದ ಹಾಲ್ಮಾರ್ಕ್ (Gold Hallmark). ಇದು ಚಿನ್ನದ ಅಸಲಿಯತ್ತನ್ನು ಸಾಬೀತುಪಡಿಸುವಂತಹ ಚಿಹ್ನೆಯಾಗಿದೆ. BIS ಸಂಸ್ಥೆ ಅಧಿಕೃತವಾಗಿ ಚಿನ್ನ (Gold) ದ ಮೇಲೆ ಹಾಲ್ ಮಾರ್ಕ್ ಅನ್ನು ಹಾಕಿರುತ್ತದೆ. ಹೀಗಾಗಿ ಈ ಗುರುತು ಚಿನ್ನವನ್ನು ಅಸಲಿ ಎಂಬುದನ್ನು ಸಾಬೀತುಪಡಿಸುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಎರಡನೇದಾಗಿ ಈ ಸಂದರ್ಭದಲ್ಲಿ ನೀವು ಖರೀದಿಸಿರುವ ಚಿನ್ನದ ಮೇಲೆ ಏನನ್ನಾದರೂ ಬರೆಯಿರಿ ಅದಾದ ನಂತರ ಅದರ ಮೇಲೆ Nitric Acid ಅನ್ನು ಹಾಕಬೇಕು ಆ ಸಂದರ್ಭದಲ್ಲಿ ಅದರ ಮೇಲೆ ಏನಾದರೂ ಬದಲಾವಣೆ ಆಗಿದ್ರೆ ಅದು ನಿಜವಾದ ಚಿನ್ನವಲ್ಲ ಏನಾದರೂ ಬದಲಾವಣೆ ಆಗದೆ ಹೇಗೆ ಇತ್ತೋ ಹಾಗೆ ಇದ್ದರೆ ಅದು ನಿಜವಾದ ಚಿನ್ನ ಎಂಬುದಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಮೂರನೇದಾಗಿ ನೀವು ವಿನೆಗರ್ ಟೆಸ್ಟ್ ಅನ್ನು ಮಾಡಬೇಕಾಗಿರುತ್ತದೆ. ವಿನೆಗರ್ ಹನಿಯನ್ನು ನೀವು ಖರೀದಿಸಿರುವಂತಹ ಚಿನ್ನ (Gold) ದ ಮೇಲೆ ಹಾಕಿದಾಗ ಒಂದು ವೇಳೆಯಲ್ಲಿ ಬಣ್ಣ ಬದಲಾದರೆ ಅದು ನಕಲಿ ಚಿನ್ನ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿರುತ್ತದೆ. ಅಸಲಿ ಚಿನ್ನದ ಮೇಲೆ ಇದು ಯಾವ ಪರಿಣಾಮವನ್ನು ಕೂಡ ಬೀರುವುದಿಲ್ಲ. ನಾಲ್ಕನೇ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಚಿನ್ನ ಅತ್ಯಂತ ಬಲಶಾಲಿ ಆಗಿರುವಂತಹ ಲೋಹವಾಗಿದೆ. ಹೀಗಾಗಿ ನೀವು ಫ್ಲೋಟಿಂಗ್ ಟೆಸ್ಟ್ ಮಾಡಿದಾಗ ಅದು ತಳಕ್ಕೆ ಸೇರಿದರೆ ಅದು ನಿಜವಾದ ಚಿನ್ನ ಹಾಗೂ ತೇಲಿದರೆ ಅದು ನಕಲಿ ಚಿನ್ನ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಕೊನೆಯದಾಗಿ ಹಾಗೂ ಐದನೆಯದಾಗಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವ ಮತ್ತೊಂದು ವಿಚಾರೇನೆಂದರೆ ನೀವು ಖರೀದಿಸುವಂತಹ ಚಿನ್ನವನ್ನು ಮ್ಯಾಗ್ನೆಟ್ ಟೆಸ್ಟ್ (Gold Magnet Test) ರೂಪದಲ್ಲಿ ಕೂಡ ಪರೀಕ್ಷೆ ಮಾಡಬಹುದಾಗಿದೆ. ಹೌದು ಗೆಳೆಯರೇ ಚಿನ್ನದಲಿ ಚುಂಬಕಶಕ್ತಿ ಇರುವುದಿಲ್ಲ ಹೀಗಾಗಿ ಒಂದು ವೇಳೆ ಆಯಸ್ಕಾಂತಕ್ಕೆ ನಿಮ್ಮ ಚಿನ್ನ ಅಂಟಿಕೊಂಡರೆ ಅದು ನಕಲಿ ಹಾಗೂ ಅಂಟಿಕೊಳ್ಳದೆ ಇದ್ದಲ್ಲಿ ಅದು ಅಸಲಿ ಎನ್ನುವುದನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ. ಈ ಮೇಲಿನ ನಾವು ಹೇಳಿರುವಂತಹ ಮಾಹಿತಿಗಳನ್ನು ಅನುಸರಿಸಿ ನೀವು ನಿಮ್ಮ ಚಿನ್ನ ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನ ಪರೀಕ್ಷಿಸಬಹುದಾಗಿದೆ.