Karnataka Times
Trending Stories, Viral News, Gossips & Everything in Kannada

Dubai: ದುಬೈನಲ್ಲಿ ಅತಿ ಹೆಚ್ಚು ನೆಲೆಸಿರುವುದು ಯಾವ ದೇಶದವರು ಗೊತ್ತಾ?.

UAE ದೇಶದ ರಾಜಧಾನಿಯ ರೂಪದಲ್ಲಿ ಕಾಣಿಸಿಕೊಳ್ಳುವಂತಹ ದುಬೈ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ನೀವು ತಿಳಿದಿದ್ದೀರೋ ಇಲ್ವೋ ಗೊತ್ತಿಲ್ಲ ಪ್ರಪಂಚದಲ್ಲಿರುವಂತಹ 200 ದೇಶಗಳ ನಾಗರಿಕರು ಕೂಡ ದುಬೈ (Dubai) ದೇಶದಲ್ಲಿ ಬಂದು ವಾಸಿಸುತ್ತಾರೆ ಎನ್ನುವಂತಹ ಅಂಕಿ ಅಂಶಗಳ ಮಾಹಿತಿ ಕೂಡ ತಿಳಿದುಬಂದಿದೆ. ಇದರಲ್ಲಿ ಪಾಕಿಸ್ತಾನಿಯರು ಹಾಗೂ ಭಾರತೀಯರು ಕೂಡ ಸೇರಿದ್ದು ಬನ್ನಿ ಯಾರು ಹೆಚ್ಚಾಗಿ ಇಲ್ಲಿ ನೆಲೆಸುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡೋಣ.

Advertisement

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಕೂಡ ದುಬೈ ನಗರದಲ್ಲಿ ಹೋಗಿ ವಾಸ ಮಾಡುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿದ್ದು ಈ ಜನರಲ್ಲಿ ಪಾಕಿಸ್ತಾನ ಹಾಗೂ ಭಾರತ ದೇಶದ ಜನರ ಸಂಖ್ಯೆ ಹೆಚ್ಚಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು 2023ರಲ್ಲಿ ದುಬೈ ದೇಶಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

Advertisement

ಪಾಕಿಸ್ತಾನದಲ್ಲಿ ಹೆಚ್ಚಾಗಿರುವಂತಹ ರಾಜಕೀಯ ಅಸ್ಥಿರತೆಯ ಭಯದಿಂದಾಗಿ ಪಾಕಿಸ್ತಾನಿಯರು ದುಬೈಗೆ ಬಂದು ನೆಲೆಸುವಂತಹ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದಾಗಿ ಕೂಡ ಮೂಲಗಳು ಮಾಹಿತಿಯ ರೂಪದಲ್ಲಿ ತಿಳಿಸಿ. UAE ದೇಶದಲ್ಲಿ ಒಟ್ಟಾರೆಯಾಗಿ 10.17 ಮಿಲಿಯನ್ ಜನಸಂಖ್ಯೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಇದರಲ್ಲಿ ದುಬೈ (Dubai) ನಗರದಲ್ಲಿ 3.57 ಮಿಲಿಯನ್ ಇದೆ ಎಂಬುದಾಗಿ ತಿಳಿದು ಬಂದಿದೆ. ವರ್ಷದಿಂದ ವರ್ಷಕ್ಕೆ ಪಾಕಿಸ್ತಾನದಿಂದ ದುಬೈಗೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

Advertisement

ಭಾರತದಿಂದ ಕೆಲಸ ಅಥವಾ ವ್ಯಾಪಾರಕ್ಕಾಗಿ ಕೂಡ ಇಲ್ಲಿ ಬಂದು ನೆಲೆಸಿರುವ ಜನರ ಸಂಖ್ಯೆ ಕೂಡ ಕಡಿಮೆ ಇಲ್ಲ ಎಂಬುದಾಗಿ ತಿಳಿದು ಬಂದಿದ್ದು ಹಾಗಿದ್ದರೆ ಬನ್ನಿ ದುಬೈ (Dubai) ನಗರದಲ್ಲಿ ಭಾರತ ಹಾಗೂ ಪಾಕಿಸ್ತಾನೀಯರ ನಡುವೆ ಹೆಚ್ಚಿನ ಜನಸಂಖ್ಯೆ ಯಾವ ದೇಶದವರದ್ದಾಗಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ ಬನ್ನಿ.

Advertisement

ಗ್ಲೋಬಲ್ ಮೀಡಿಯಾ ಸೈಟ್.ಕಾಂ (Global Media Site.com ) ನಡೆಸಿರುವಂತಹ ಸರ್ವೇಯ ಪ್ರಕಾರ ತಿಳಿದುಬಂದಿರುವ ಮಾಹಿತಿಯಲ್ಲಿ 2.80 ಮಿಲಿಯನ್ ಜನಸಂಖ್ಯೆ ಭಾರತ ದೇಶದಿಂದ ಬಂದಿದ್ದರೆ 1.29 ಮಿಲಿಯನ್ ಜನಸಂಖ್ಯೆ ಪಾಕಿಸ್ತಾನ ದೇಶದವರಾಗಿದ್ದಾರೆ. ಒಟ್ಟಾರೆಯಾಗಿ ದುಬೈ ನಗರದಲ್ಲಿ ಕೂಡ ಇರುವಂತಹ ಜನಸಂಖ್ಯೆ ವಿಚಾರದಲ್ಲಿ ಭಾರತೀಯರೇ ಮುಂದಿದ್ದಾರೆ ಎಂದು ಹೇಳಬಹುದಾಗಿದೆ.

ಅದರಲ್ಲೂ ವಿಶೇಷವಾಗಿ ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಸ್ಥಿತಿಗತಿಗಳನ್ನು ಹಾಗೂ ಅಲ್ಲಿ ಹೆಚ್ಚಾಗುತ್ತಿರುವಂತಹ ಬಡತನದ ಪ್ರಮಾಣ ಮತ್ತು ಬೆಲೆ ಏರಿಕೆಯ ಕಾರಣದಿಂದಾಗಿ ಪಾಕಿಸ್ತಾನೀಯರು ಕೆಲಸವನ್ನು ಹುಡುಕಿಕೊಂಡು ದುಬೈ (Dubai) ದೇಶಕ್ಕೆ ಈಗ ಬರುತ್ತಿರುವುದು ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.