Arecanut: ಅಡಿಕೆಗೆ ಇದೊಂದು ಗೊಬ್ಬರ ಇದ್ದರೆ ಸಾಕು! ಬೇರಾವುದು ಬೇಡ,

Advertisement
ನೀವು ಯಾವುದೇ ರೀತಿಯ ಕೃಷಿ ಮಾಡುವುದಿದ್ದರೂ ಕೃಷಿಯಲ್ಲಿ ರಾಸಾಯನಿಕ ಬಳಸುವುದಕ್ಕಿಂತಲೂ ಸಾವಯವ ಕೃಷಿಯನ್ನು ಮಾಡಿದರೆ ಉತ್ತಮ. ಇದರಿಂದ ಬಹಳ ಬೇಗ ಉತ್ತಮ ಇಳುವರಿ ಕೂಡ ಬರುತ್ತದೆ. ಅದರಲ್ಲೂ ಅಡಿಕೆ ತೋಟ ಅಥವಾ ತೆಂಗಿನ ಮರ ಬಾಳೆ ಗಿಡ ಈ ಎಲ್ಲಾ ಕೃಷಿಗೂ ಕೂಡ ಜೀವಾಮೃತ ಎನ್ನುವ ಸಾವಯವ ಸಿಂಪಡಣೆ ಬಳಸುವುದು ಬಹಳ ಒಳ್ಳೆಯದು. ಒಂದು ಕೃಷಿಗೆ ಅರ್ಧದಷ್ಟು ಸೂರ್ಯನ ಬೆಳಕು ಮತ್ತು ಗಾಳಿ ಹಾಗೂ ಇನ್ನು ಅರ್ಧದಷ್ಟು ಮನೆಯಲ್ಲಿಯೇ ನೀವು ತಯಾರಿಸಿಕೊಂಡ ಜೀವಾಮೃತ ಬಳಸಿದ್ರೆ ಸಾಕು ಉತ್ತಮ ಫಸಲು ಸಿಗುತ್ತದೆ.
ಏನಿದು ಜೀವಾಮೃತ!
ಭೂಮಿಗೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವಂತಹ ಜೀವಾಮೃತ ಮನೆಯಲ್ಲಿಯೇ ತಯಾರಿಸಬಹುದು ಇದನ್ನು ಬೆಳೆಗೆ ಸಿಂಪಡಣೆ ಮಾಡಿದರೆ ಉತ್ತಮ ಫಸಲು ಸಿಗುತ್ತದೆ. ಮನೆಯಲ್ಲಿಯೇ ಜೀವಾಮೃತ ತಯಾರಿಸುವುದು ಹೇಗೆ ನೋಡೋಣ.
ಜೀವಾಮೃತ ತಯಾರಿಸಲು ಬೇಕಾಗಿರುವ ವಸ್ತುಗಳು:
- 200 ಲಿ. ನೀರು
- ಹತ್ತು ಕೆಜಿ ದೇಸಿ ಹಸುವಿನ ಸಗಣಿ
- ಗೋಮೂತ್ರ 10 ಲೀಟರ್
- ದ್ವಿದಳ ಧಾನ್ಯಗಳ ಹುಟ್ಟು 2 ಕೆಜಿ
- ಬೆಲ್ಲ 2 ಕೆಜಿ
- ಒಂದು ಹಿಡಿ ಫಲವತ್ತಾಗಿರುವ ಮಣ್ಣು

ಜೀವಾಮೃತ ತಯಾರಿಸುವುದು ಹೇಗೆ?
ಜೀವಾಮೃತವನ್ನು ತಯಾರಿಸಲು 200 ಲೀಟರ್ ನ ಒಂದು ಬ್ಯಾರಲ್ ಅಥವಾ ಟ್ಯಾಂಕರ್ ತೆಗೆದುಕೊಳ್ಳಿ ಅದರಲ್ಲಿ ಮೇಲೆ ಹೇಳಿರುವ ಎಲ್ಲಾ ಮಿಶ್ರಣವನ್ನು ಹಾಕಿ. ಜೊತೆಗೆ 200 ಲೀಟರ್ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೀವು ನೆರಳಿನಲ್ಲಿಯೇ ಇಟ್ಟು ತಯಾರಿಸಬೇಕು ಒಂದು ಗಿಡದ ಕೆಳಗಡೆ ಇಟ್ಟು ಮಾಡಿದರೆ ಒಳ್ಳೆಯದು. ಸುಮಾರು ಏಳು ದಿನಗಳ ಕಾಲ ಇದನ್ನು ಹಾಗೆಯೇ ಬಿಟ್ಟು ಏಳನೇ ದಿನದ ನಂತರ ಗಿಡಕ್ಕೆ ಬಳಸಬೇಕು. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಜೀವಾಮೃತವನ್ನು ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡುವುದನ್ನು ಮರೆಯಬೇಡಿ. ಹೀಗೆ ಮಾಡಿದರೆ ಒಂದು ವಾರದಲ್ಲಿ ಜೀವಾಮೃತ ಸಿದ್ಧವಾಗುತ್ತದೆ ನೀವು ಇದನ್ನು ನಿಮ್ಮ ಬೆಳೆಗಳಿಗೆ ಸಿಂಪಡಣೆ ಮಾಡಬಹುದು.
ಜೀವಾಮೃತದ ಪ್ರಯೋಜನಗಳು:
ರಾಸಾಯನಿಕ ವಸ್ತುಗಳನ್ನು ಬಳಸುವುದಕ್ಕಿಂತಲೂ ಜೀವಾಮೃತ ಬಳಸಿದ್ರೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ. ಭೂಮಿಯಲ್ಲಿರುವ ಸಾರ್ವಜನಿಕ ಸೇರಿಕೊಂಡು ಅನಗತ್ಯ ಬ್ಯಾಕ್ಟೀರಿಯಗಳನ್ನು ನಾಶಪಡಿಸುತ್ತದೆ ಜೊತೆಗೆ ಬೇಕಾಗಿರುವ ಬ್ಯಾಕ್ಟೀರಿಯಾಗಳನ್ನು ಅಭಿವೃದ್ಧಿ ಪಡಿಸುತ್ತದೆ. ಏಳು ದಿನಗಳ ಕಾಲ ಜೀವಾಮೃತವನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಿಡಗಳಿಗೆ ಕೊಡುವುದರಿಂದ ಅದರಲ್ಲಿ ಮಣ್ಣಿಗೆ ಬೇಕಾಗಿರುವ ಉಪಯುಕ್ತಕರಿ ಸೂಕ್ಷ್ಮಾಣು ಜೀವಿಗಳು ಅಭಿವೃದ್ಧಿ ಹೊಂದಿರುತ್ತದೆ.
ಜೀವಾಮೃತವನ್ನು ಕೊಡುವುದರಿಂದ ಮಣ್ಣಿಗೂ ಬೆಳೆಗೂ ತುಂಬಾನೇ ಒಳ್ಳೆಯದು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮವಾದ ಫಸಲು ಬರುವಂತೆ ಮಾಡುತ್ತದೆ. ಜೀವಾಮೃತವನ್ನು ಎಲ್ಲ ರೀತಿಯ ಬೆಳೆಗಳಿಗೂ ಕೊಡಬಹುದು ಅಡಿಕೆ ಮರಕ್ಕೆ ಕೊಟ್ಟರೆ ಉತ್ತಮ ಫಸಲನ್ನು ಪಡೆಯಬಹುದು ರಾಸಾಯನಿಕಗಳನ್ನು ಬಳಸುವುದಕ್ಕಿಂತ ಇಂತಹ ಜೈವಿಕ ಪೋಷಕಾಂಶಗಳನ್ನು ನೀಡಿ ಬೆಳೆಗೆ ಹಾಗೂ ಭೂಮಿಗೆ ಹಾನಿಯಾಗದಂತೆ ಉತ್ತಮ ಆದಾಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.