Karnataka Times
Trending Stories, Viral News, Gossips & Everything in Kannada

Pan Card Link: ಮಾರ್ಚ್ 31ರ ಒಳಗೆ ಪಾನ್ ಲಿಂಕ್ ಆಗದಿದ್ದರೆ ಈ 10 ಕೆಲಸಗಳು ಮಾಡೋಕಾಗಲ್ಲ.

Advertisement

ಪಾನ್ ಕಾರ್ಡ್ ಎನ್ನುವುದು ಭಾರತದ ಡಾಕ್ಯುಮೆಂಟ್ಗಳಲ್ಲಿ ಅತ್ಯಂತ ಪ್ರಮುಖ ಡಾಕ್ಯುಮೆಂಟ್ ಆಗಿದೆ. ಹೀಗಾಗಿ ಇದೇ ಮಾರ್ಚ್ 31ರ ಒಳಗೆ ಆಧಾರ್ ಕಾರ್ಡ್ (Aadhaar Card) ಜೊತೆಗೆ ಪಾನ್ ಕಾರ್ಡ್ ಅನ್ನು ಲಿಂಕ್ (Pan Card Link) ಮಾಡಲೇಬೇಕಾಗಿದೆ. ಒಂದು ವೇಳೆ ನೀವು ಲಿಂಕ್ ಮಾಡದೆ ಹೋದರೆ ಏಪ್ರಿಲ್ 1ರಿಂದ ಸಾಕಷ್ಟು ಕೆಲಸಗಳಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ನೀವು ಪಾನ್ ಕಾರ್ಡ್ (Pan Card) ಗೆ ಲಿಂಕ್ ಮಾಡದೆ ಹೋದರೆ ಅಧಿಕ ಟ್ಯಾಕ್ಸ್ ಹಣವನ್ನು ಕಟ್ಟಬೇಕಾದಂತ ಪರಿಸ್ಥಿತಿ ಕೂಡ ಎದುರಾಗಲಿದ್ದು ಅದಕ್ಕೂ ಮಿಗಿಲಾಗಿ ಹತ್ತಕ್ಕೂ ಅಧಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದರಿಂದ ಆಗುವ ಸಮಸ್ಯೆಗಳನ್ನು ಲೆಕ್ಕಾಚಾರ ಹಾಕುವುದಾದರೆ ಹೊಸ ವಾಹನ ಖರೀದಿಗೆ ತೊಡಕು ಉಂಟಾಗಲಿದೆ. ಖಾತೆಯಲ್ಲಿ 50,000ಕ್ಕೂ ಮಿಗಿಲಾಗಿ ಟ್ರಾನ್ಸಾಕ್ಷನ್ ಅನ್ನು ಮಾಡಲು ದಾಖಲೆಗಳನ್ನು ನೀಡಬೇಕಾದಂತಹ ಪರಿಸ್ಥಿತಿ ಕೂಡ ಉಂಟಾಗಲಿದೆ. ಕ್ರೆಡಿಟ್ ಕಾರ್ಡ್ (Credit Card) ಹಾಗೂ ಡಿಮ್ಯಾಟ್ ಖಾತೆಯನ್ನು ಪಡೆಯಲು ಹಾಗೂ ತೆರೆಯಲು ಕೂಡ ಸಾಕಷ್ಟು ಕಷ್ಟ ಉಂಟಾಗಲಿದೆ. RBI ಬಾಂಡ್ ಅಥವಾ ಕಂಪನಿ ಬಾಂಡ್ ಇಲ್ಲವೇ ಡಿಬೇಚರ್ ಅನ್ನು ಖರೀದಿಸಲು 50,000 ಗಿಂತಲೂ ಹೆಚ್ಚಿನ ಹಣವನ್ನು ಕಟ್ಟಲು ಆಗುವುದಿಲ್ಲ.

10 ಲಕ್ಷಕ್ಕಿಂತಲೂ ಅಧಿಕ ಆಸ್ತಿಯನ್ನು ಖರೀದಿಸಲು ಅಥವಾ ಮಾರಲು ಸಾಧ್ಯವಾಗುವುದಿಲ್ಲ. 2 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಸೇವೆ ಹಾಗೂ ವಸ್ತುವನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ವಿದೇಶಿ ಪ್ರಯಾಣದಲ್ಲಿ 50,000 ಕ್ಕಿಂತಲೂ ಅಧಿಕ ಒಂದೇ ಸಮಯದಲ್ಲಿ ಹಣವನ್ನು ವ್ಯಯಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಪ್ಯಾನ್ ಕಾರ್ಡ್ (Pan Card) ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು www.incometaxindiaefiling.gov.in ಗೆ ನೀವು ಲಾಗಿನ್ ಆಗಬೇಕಾಗುತ್ತದೆ.

ಇಲ್ಲಿ ಕೇಳಲಾಗಿರುವಂತಹ ನಿಮ್ಮ ಪಾನ್ ಕಾರ್ಡ್ ನಂಬರ್ ಸಹಿತ ಉಪಯುಕ್ತ ಮಾಹಿತಿಗಳನ್ನು ತುಂಬಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ (Aadhaar Card) ಜೊತೆಗೆ ಪಾನ್ ಕಾರ್ಡ್ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವ ಆಪ್ಷನ್ ಗೆ ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಫಲಿತಾಂಶ ಕಂಡುಬರುತ್ತದೆ. ಒಂದು ವೇಳೆ ಲಿಂಕ್ ಆಗದಿದ್ದರೆ ಮಾರ್ಚ್ 31ರ ಒಳಗೆ ಪಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್ (Aadhaar Card) ಜೊತೆ ಲಿಂಕ್ ಮಾಡಿ ಇಲ್ಲದಿದ್ದರೆ ಏಪ್ರಿಲ್ 1ರ ನಂತರ ನಿಮ್ಮ ಪಾನ್ ಕಾರ್ಡ್ ಅಮಾನ್ಯವಾಗುತ್ತದೆ ಹಾಗೂ ಯಾವುದೇ ಹಣ ಸಂಬಂಧಿತ ವ್ಯವಹಾರದಲ್ಲಿ ಪಾನ್ ಕಾರ್ಡಿನ ಅಗತ್ಯತೆ ಇದ್ದರೆ ಆ ಸೇವೆಗಳನ್ನು ನೀವು ಪಡೆಯಲು ಸಾಧ್ಯವಿಲ್ಲ. ಮಾತ್ರವಲ್ಲದೆ ಹೆಚ್ಚಿನ ಟ್ಯಾಕ್ಸ್ (Tax) ಅನ್ನು ಕೂಡ ಭರಿಸಬೇಕಾಗುತ್ತದೆ.

Leave A Reply

Your email address will not be published.