Karnataka Times
Trending Stories, Viral News, Gossips & Everything in Kannada

Plane Travel: ವಿಮಾನದಲ್ಲಿ ಪ್ರಯಾಣಿಸುವಾಗ ಈ ವಸ್ತುಗಳನ್ನು ತಗೆದುಕೊಂಡು ಹೋಗುವಂತಿಲ್ಲ! ಹೊಸ ರೂಲ್ಸ್

Advertisement

ವಿಮಾನದಲ್ಲಿ ಪ್ರಯಾಣಿಸಬೇಕು ಅಂತ ಹಲವರಿಗೆ ಆಸೆ ಇರುತ್ತೆ ಜೊತೆಗೆ ನೀವು ವಿದೇಶಕ್ಕೆ ಹೋಗಬೇಕು ಅಂದರೆ ವಿಮಾನ ಮಾರ್ಗವನ್ನೇ ಅನುಸರಿಸಬೇಕು ಆದರೆ ವಿಮಾನದಲ್ಲಿ ಪ್ರಯಾಣಿಸುವಾಗ ಕೆಲವೊಂದು ನಿಯಮಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು. ಇತ್ತೀಚಿಗೆ ವಿಮಾನ ನಿಲ್ದಾಣದಲ್ಲಿ ಕೆಲವು ಹೊಸ ರೂಲ್ಸ್ ಕೂಡ ಮಾಡಲಾಗಿದ್ದು ನೀವು ಪ್ರಯಾಣಿಸುವಾಗ ನಿಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಈ ವಿಷಯಗಳನ್ನು ಗಮನಿಸಿ. ನಿಶೇಧಿತ ವಸ್ತುಗಳ ಜೊತೆಗಿನ ಪ್ರಯಾಣ, ಖಂಡಿತವಾಗಿಯೂ ಮುಂದೆ ಪ್ರಯಾಣ ಮಾಡಲು ಕೂಡ ಕಷ್ಟವಾಗಬಹುದು. ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ವಿಮಾನ ಮಾರ್ಗವಾಗಿ ಪ್ರಯಾಣ ಮಾಡುವುದಿದ್ದರೆ ಈ ನಿಯಮಗಳನ್ನು ಅನುಸರಿಸಬೇಕು ಇಲ್ಲವಾದರೆ ತೊಂದರೆ ಅನುಭವಿಸಬೇಕಾಗಬಹುದು ಎಂದು ಮಾಹಿತಿ ಲಭ್ಯವಾಗಿದೆ.

ಕೆಲವು ವಸ್ತುಗಳನ್ನು ನಿಷೇಧಿತ ಎಂದು ಘೋಷಿಸಲಾಗಿದೆ!

ವಿಮಾನ ಪ್ರಯಾಣದಲ್ಲಿ ನಿಷೇಧಿತ ವಸ್ತುಗಳನ್ನು ಸಾಧಿಸುವ ಹಾಗಿಲ್ಲ ವಿಮಾನ ನಿಲ್ದಾಣದಲ್ಲಿ ಎಲ್ಲಾ ರೀತಿಯ ತಪಾಸಣೆಯನ್ನು ಮಾಡಿ ಒಂದು ವೇಳೆ ಅಂತಹ ವಸ್ತುಗಳನ್ನು ಸಾಗಿಸುವುದು ಕಂಡು ಬಂದರೆ ಪ್ರಯಾಣಿಕರ ವಿರುದ್ಧ ಕಾನೂನಿನ ಕ್ರಮ ಕೂಡ ಕೈಗೊಳ್ಳಬಹುದು. ಹಾಗಾದ್ರೆ ಯಾವ ವಸ್ತುಗಳನ್ನು ವಿಮಾನದಲ್ಲಿ ಪ್ರಯಾಣಿಸುವಾಗ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ನೋಡೋಣ.

ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಯಾಣದಲ್ಲಿ ಈ ವಸ್ತುಗಳನ್ನು ಕೊಂಡೊಯ್ಯುವ ಹಾಗೆ ಇಲ್ಲ:

  • ಫ್ರೋಜನ್ ಕೋಳಿ ಅಥವಾ ಪಕ್ಷಿಗಳು
  • ಪಾನ್ ಬೀಡ
  • ನಕಲಿ ಅಥವಾ ಕಳ್ಳತನ ಮಾಡಿದ ವಸ್ತುಗಳು
  • ಸಭ್ಯ ಅಥವಾ ರಾಷ್ಟ್ರೀಯ ಆಗಿರುವಂತಹ ವಸ್ತುಗಳು
  • ಗ್ಯಾಂಬಲಿಂಗ್ ಅಥವಾ ಜೂಜಿಗೆ ಉಪಯೋಗಿಸುವಂತಹ ವಸ್ತು/ ಯಂತ್ರ
  • ನಕಲಿ ಕರೆನ್ಸಿ
  • ಇಸ್ಲಾಮಿಕ್ ಮೌಲ್ಯಗಳಿಗೆ ಧಕ್ಕೆ ಉಂಟು ಮಾಡುವಂತಹ ಮಾಟ ಮಂತ್ರ, ವಾಮಾಚಾರದಲ್ಲಿ ಬಳಸುವಂತಹ ಉತ್ಪನ್ನಗಳು.

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ನೀವು ನಿಮ್ಮ ಬ್ಯಾಗ್ ನಲ್ಲಿ ತೆಗೆದುಕೊಂಡು ಪ್ರಯಾಣ ಮಾಡುವಂತಿಲ್ಲ. ಇದೇ ರೀತಿಯಾಗಿ ದುಬೈಗೆ ನೀವು ವಿಮಾನದ ಮೂಲಕ ಹಾರುವುದಾದ್ರೆ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ತೆಗೆದುಕೊಂಡು ಹೋಗುವ ಹಾಗಿಲ್ಲ. ಅಥವಾ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಲು ನೀವು ಪೂರ್ವ ಅನುಮತಿ ಹಾಗೂ ಆ ವಸ್ತುಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತದೆ. ಅಂತಹ ವಸ್ತುಗಳು ಯಾವವು ನೋಡೋಣ.

  • ಪ್ರಾಣಿಗಳು ಸಸ್ಯಗಳು ಹಾಗೂ ರಸಗೊಬ್ಬರಗಳು
  • ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳು
  • ಮೀಡಿಯಾ ಪಬ್ಲಿಕೇಶನ್ಸ್ (ಮಾಧ್ಯಮ ಪ್ರಕಟಣೆ)
  • ಟ್ರಾನ್ಸ್ ಮಿಷನ್ ಅಥವಾ ವಯರ್ಲೆಸ್ ಡಿವೈಸ್ ಗಳು
  • ಆಲ್ಕೋಹಾಲ್ ಹೊಂದಿರುವ ಪಾನಿಯಗಳು
  • ಈ ಸಿಗರೇಟ್ ಹಾಗೂ ಎಲೆಕ್ಟ್ರಾನಿಕ್ ಹುಕ್ಕ
  • ಯಾವುದಾದರೂ ಎಕ್ಸಿಬಿಷನ್ ಗಾಗಿ ಸೌಂದರ್ಯವರ್ಧಕಗಳು ಅಥವಾ ವೈಯಕ್ತಿಕ ಆರೋಗ್ಯ ಉತ್ಪನ್ನಗಳು

ಇಷ್ಟು ವಸ್ತುಗಳನ್ನು ನೀವು ನಿಮ್ಮ ಬ್ಯಾಂಕ್ ನಲ್ಲಿ ಇಟ್ಟುಕೊಂಡು ದುಬೈಗೆ ಪ್ರಯಾಣ ಮಾಡುವ ಹಾಗಿಲ್ಲ.

Leave A Reply

Your email address will not be published.