Pan-Aadhaar Link: ಆಧಾರ್ ಗೆ ಪಾನ್ ಅನ್ನು ಎಸ್ಎಂಎಸ್ ಮೂಲಕ ಲಿಂಕ್ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.

Advertisement
Pan Card Link ಪಾನ್ ಕಾರ್ಡ್ ಎನ್ನುವುದು ಆರ್ಥಿಕ ಸಂಬಂಧಿತ ಎಲ್ಲಾ ವಿಚಾರಗಳಲ್ಲಿ ಬಳಸಲಾಗುವಂತಹ ಪ್ರಮುಖ ಸರ್ಕಾರಿ ದಾಖಲೆಯಾಗಿದೆ. ಇನ್ಕಮ್ ಟ್ಯಾಕ್ಸ್ ಫೈರಿಂಗ್ ಸೇರಿದಂತೆ ಹಲವಾರು ವಿಚಾರಗಳಲ್ಲಿ ಇದರ ಬಳಕೆ ಆಗುತ್ತದೆ. ಆದರೆ ಸರ್ಕಾರ ಈಗಾಗಲೇ ಇದನ್ನು ಆಧಾರ್ ಕಾರ್ಡ್(Aadhar Card) ಗೆ ಲಿಂಕ್ ಮಾಡಲೇಬೇಕು ಎನ್ನುವ ಆದೇಶವನ್ನು ಹೊರಡಿಸಿದ್ದು ಇದು ಜೂನ್ 30ರ ಒಳಗೆ ನಡೆಯಬೇಕು. ಇಲ್ಲವಾದಲ್ಲಿ ಪಾನ್ ಕಾರ್ಡ್ ಸಂಪೂರ್ಣವಾಗಿ ನಿಷ್ಕ್ರಿಯಗೊಂಡು ಯಾವುದೇ ಕೆಲಸಕ್ಕೆ ಉಪಯೋಗವಾಗದಂತೆ ಆಗಿಬಿಡುತ್ತದೆ.
ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಎಸ್ಎಂಎಸ್(SMS) ಮೂಲಕ ಲಿಂಕ್ ಮಾಡಲು ಇರುವಂತಹ ಸುಲಭ ಉಪಾಯ ಯಾವುದು ಎನ್ನುವುದನ್ನು ಇಂದಿನ ಲೇಖನಿಯಲ್ಲಿ ನಾವು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ UIDPAN ಬರೆದು ನಂತರ ಆಧಾರ್ ನಂಬರ್ ಹಾಕಿ ಆಮೇಲೆ ಪಾನ್ ಕಾರ್ಡ್ ನಂಬರ್ ಹಾಕಿ 56161 ಅಥವಾ 567678 ನಂಬರ್ಗೆ ಸೆಂಡ್ ಮಾಡಬೇಕು. ಇದಾದ ನಂತರ ಇನ್ಕಮ್ ಟ್ಯಾಕ್ಸ್ ಪೋರ್ಟಲ್ ಮೂಲಕ ಹೇಗೆ ಆಧಾರ್ ಅನ್ನು ಲಿಂಕ್ ಮಾಡುವ ಬಗ್ಗೆ ಕೂಡ ತಿಳಿಯೋಣ ಬನ್ನಿ.
ಮೊದಲಿಗೆ e ಫೈಲಿಂಗ್ ಪೋರ್ಟಲ್ ಅನ್ನು ಓಪನ್ ಮಾಡಬೇಕು. ಅದರಲ್ಲಿ ಆಧಾರ್ ಲಿಂಕ್ ಆಪ್ಷನ್ ಅನ್ನು ಓಪನ್ ಮಾಡಬೇಕು. ಅದಾದ ನಂತರ ಅಲ್ಲಿ ಕೇಳಲಾಗಿರುವ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನಂಬರ್ ಅನ್ನು ಭರ್ತಿ ಮಾಡಬೇಕು. ಆ ಸಮಯದಲ್ಲಿ ನಿಮಗೆ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಕೂಡ ಅಲ್ಲಿ ಹಾಕಬೇಕು. ಅದಾದ ನಂತರ ಟ್ಯಾಕ್ಸ್ ಫೈಲ್ ಸೆಗ್ಮೆಂಟ್(Tax File Segment) ಗೆ ಹೋಗಿ ಅಲ್ಲಿ ಕೇಳಲಾಗಿರುವಂತಹ ಹಣವನ್ನು ಭರಿಸಬೇಕು. ಒಮ್ಮೆ ನಿಮ್ಮ ಹಣ ಪಾವತಿ ಸಕ್ಸಸ್ ಆದಮೇಲೆ ಅದೇ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಕೂಡ ಲಿಂಕ್ ಆಗಿರುತ್ತದೆ.
ಒಂದು ವೇಳೆ ನೀವು ಪಾನ್ ಕಾರ್ಡ್(Pan Card) ಅನ್ನೋ ಲಿಂಕ್ ಮಾಡದೇ ಹೋದರೆ ಏನಾಗುತ್ತದೆ ಎನ್ನುವುದಾಗಿ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದು ಮಾತ್ರವಲ್ಲದೆ ಅದರ ಜೊತೆಗೆ ನಿರ್ವಹಿಸಬೇಕಾಗಿರುವಂತಹ ಎಲ್ಲಾ ಕೆಲಸಗಳು ಕೂಡ ಸ್ಥಗಿತಗೊಳ್ಳುತ್ತವೆ. ಟ್ಯಾಕ್ಸ್ ಫೈಲ್(Tax File) ಮಾಡುವುದು ಸೇರಿದಂತೆ ದೊಡ್ಡ ಮಟ್ಟದ ಹಣದ ಟ್ರಾನ್ಸಾಕ್ಷನ್ ಮಾಡುವುದಕ್ಕೆ ಕೂಡ ಸಾಧ್ಯವಾಗುವುದಿಲ್ಲ. ಕೇವಲ ಆರ್ಥಿಕ ವಿಚಾರಕ್ಕೆ ಮಾತ್ರವಲ್ಲದೆ ಕೆಲವೊಂದು ಸರ್ಕಾರಿ ಕೆಲಸಗಳಲ್ಲಿಯೂ ಕೂಡ ಪಾನ್ ಕಾರ್ಡ್ ಎನ್ನುವುದು ಸಾಕಷ್ಟು ಪ್ರಮುಖವಾದಂತಹ ದಾಖಲೆಯಾಗಿದ್ದು ಅದನ್ನು ಕಳೆದುಕೊಂಡರೆ ಮತ್ತೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.