ಇಂದು ಬಹುತೇಕ ಜನ ಆನ್ಲೈನ್(Online) ಮೂಲಕವೇ ಎಲ್ಲಾ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ ಇನ್ನು ನಾವು ದಿನವೂ ಒಂದಲ್ಲ ಒಂದು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಲೇ ಇರುತ್ತೇವೆ ಅದರಲ್ಲೂ ಹೆಚ್ಚಾಗಿ ಎಲೆಕ್ಟ್ರಾನಿಕ್(Electronic) ವಸ್ತುಗಳನ್ನು ಖರೀದಿ ಮಾಡುವಾಗ ಅದರ ಗುಣಮಟ್ಟದ ಬಗ್ಗೆ ನಮಗೆ ಹೆಚ್ಚು ಯೋಚನೆಯಾಗುತ್ತದೆ.
ಅಂಗಡಿಯಲ್ಲಿ ಯಾವುದೇ ಉತ್ಪನ್ನ ಖರೀದಿ ಮಾಡಿದಾಗ ಅದಕ್ಕೆ ಖಾತರಿ ಹಾಗೂ ಭರವಸೆಯನ್ನು ನೀಡುತ್ತಾರೆ. ಆದರೆ ಈ ಗ್ಯಾರಂಟಿ(Guarantee) ಹಾಗೂ ವ್ಯಾರಂಟಿ ನಡುವಿನ ವ್ಯತ್ಯಾಸವೇನು ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ ನಿಮಗೂ ಈ ಎರಡು ವಿಷಯದ ನಡುವೆ ವ್ಯತ್ಯಾಸ ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ವ್ಯಾರೆಂಟಿ ಎಂದರೇನು?
ವ್ಯಾರಂಟಿ(Warranty) ಅಥವಾ ಖಾತರಿ ಒಂದು ಲಿಖಿತ ದಾಖಲೆಯಾಗಿದೆ. ನೀವು ಯಾವುದೇ ಉತ್ಪನ್ನವನ್ನು ಖರೀದಿಸಿದಾಗ ಅಥವಾ ಯಾವುದೇ ಸೇವೆಯನ್ನು ತೆಗೆದುಕೊಂಡಾಗ ಆ ಉತ್ಪನ್ನದ ತಯಾರಕರು ನಿಮಗೆ ಖಾತರಿಯ ಕಾರ್ಡ್ ಒಂದನ್ನು ನೀಡುತ್ತಾರೆ. ಈ ಉತ್ಪನ್ನದಲ್ಲಿ ಯಾವುದೇ ದೋಷಗಳು ಅಥವಾ ಸಮಸ್ಯೆ ಇದ್ದರೆ ಅಥವಾ ಸೇವೆಯಲ್ಲಿ ಯಾವುದಾದರೂ ದೋಷ ಉಂಟಾಗಿದ್ದರೆ ಅದನ್ನು ನೀವು ಖಾತರಿ ಕಾರ್ಡ್ ತೋರಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ಈ ಕೆಲಸಕ್ಕೆ ನೀವು ಶುಲ್ಕ ಪಾವತಿಸಬೇಕಾಗಿಲ್ಲ ತಯಾರಕರು ಅವರ ಸ್ವಂತ ಖರ್ಚಿನಲ್ಲಿಯೇ ಯಾವುದೇ ಬದಲಾವಣೆ ಬೇಕಿದ್ದರೂ ಮಾಡುತ್ತಾರೆ.
ಎಷ್ಟು ಸಮಯದವರೆಗೆ ಮಾನ್ಯವಾಗಿರುತ್ತದೆ ಗೊತ್ತಾ?
ಯಾವುದೇ ಉತ್ಪನ್ನದ ಮೇಲೆ ವಾರೆಂಟಿ ಪಡೆದಿದ್ದರೆ ಅದು ಸ್ವಲ್ಪ ಸಮಯದವರೆಗೆ ಮಾತ್ರ ಮಾನ್ಯವಾಗಿರುತ್ತದೆ ನಂತರ ನೀವು ಆ ಸೇವೆ ಅಥವಾ ಉತ್ಪನ್ನದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ನೀವು ಹಣ ಪಾವತಿ ಮಾಡಬೇಕು. ಆದರೆ ನೀವು ಹೆಚ್ಚಿನ ಮೊತ್ತವನ್ನು ನೀಡಿ ಉತ್ಪನ್ನ ಖರೀದಿಸುವಾಗಲೇ ಅದರ ವ್ಯಾರೆಂಟಿ ಅವಧಿಯನ್ನು ಕೂಡ ವಿಸ್ತರಿಸಿಕೊಳ್ಳಬಹುದು.
ಗ್ಯಾರಂಟಿ ಎಂದರೇನು?
ಇಲ್ಲಿಯೂ ಕೂಡ ನೀವು ಯಾವುದೇ ಉತ್ಪನ್ನ ಖರೀದಿ ಮಾಡಿದರೆ ಅಥವಾ ಸೇವೆಯನ್ನು ಪಡೆದರೆ ರಿಪೇರಿ ಗ್ಯಾರಂಟಿ ನೀಡಲಾಗುತ್ತದೆ ಆದರೆ ವ್ಯಾರಂಟಿಯಲ್ಲಿ ಇರುವ ಹಾಗೆ ಗ್ಯಾರಂಟಿಯಲ್ಲಿ ಲಿಖಿತ ರೂಪದಲ್ಲಿ ಕಾರ್ಡ್ ಪಡೆಯುವುದು ಅನಿವಾರ್ಯವಲ್ಲ. ಸಾಮಾನ್ಯವಾಗಿ ಗ್ಯಾರಂಟಿಯನ್ನು ಯಾವುದೇ ಲಿಖಿತ ಆಧಾರವಿಲ್ಲದೆ ನೀಡಲಾಗುತ್ತದೆ. ಗ್ಯಾರಂಟಿ ಮುಗಿಯುವುದರ ಒಳಗೆ ಉತ್ಪನ್ನದಲ್ಲಿ ಯಾವುದೇ ದೋಷ ಕಂಡು ಬಂದರೆ ಗ್ರಾಹಕರು ಆ ಉತ್ಪನ್ನವನ್ನು ರಿಪೇರಿ ಮಾಡಿಸಬಹುದು ಅಥವಾ ಬದಲಾಯಿಸಬಹುದು ಇದಕ್ಕೆ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ವ್ಯಾರಂಟಿ ಮತ್ತು ಗ್ಯಾರಂಟಿ ನಡುವಿನ ವ್ಯತ್ಯಾಸವೇನು?
ವ್ಯಾರಂಟಿಯಲ್ಲಿ, ವ್ಯಾರಂಟಿಯ ಅವಧಿ ಮುಗಿದ ನಂತರ ಹಣವನ್ನು ಪಾವತಿಸಬೇಕು ಆದರೆ ಗ್ಯಾರಂಟಿಯಲ್ಲಿ ಹಾಗಿಲ್ಲ ನೀವು ಹಣ ಪಾವತಿಸಬೇಕಾಗಿಲ್ಲ. ವ್ಯಾರಂಟಿಯನ್ನು ಲಿಖಿತವಾಗಿ ಕೊಡಬಹುದು ಅಥವಾ ಮೌಖಿಕವಾಗಿ ಕೊಡಬಹುದು ಆದರೆ ಗ್ಯಾರಂಟಿ ಯಾವಾಗಲೂ ಬರವಣಿಗೆಯ ರೂಪದಲ್ಲಿ ಇರುತ್ತದೆ.
ಗ್ಯಾರಂಟಿಯಲ್ಲಿ ಯಾವುದೇ ಉತ್ಪನ್ನ ದೋಷಪೂರಿತವಾಗಿದ್ದರೆ ಆ ಉತ್ಪನ್ನವನ್ನು ಸಂಪೂರ್ಣ ಬದಲಾಯಿಸಿಕೊಳ್ಳಬಹುದು. ಆದರೆ ವ್ಯಾರಂಟಿಯಲ್ಲಿ ಹಾಗಿಲ್ಲ ನೀವು ಉತ್ಪನ್ನವನ್ನು ದುರಸ್ತಿ ಮಾಡಿಕೊಳ್ಳಬಹುದು ಅಷ್ಟೇ. ಅದೇ ರೀತಿ ಗ್ಯಾರಂಟಿ ಇದ್ದರೆ ಯಾವುದೇ ಉತ್ಪನ್ನದಲ್ಲಿ ದೋಷ ಇದ್ದರೆ ನೀವು ಮರುಪಾವತಿ ಹಣ ಪಡೆಯಬಹುದು ಆದರೆ ವ್ಯಾರಂಟಿಯಲ್ಲಿ ಹಣ ಹಿಂತಿರುಗಿಸಿ ಕೊಡುವುದಿಲ್ಲ.