Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೂ 24 ಗಂಟೆ ಮುನ್ನ ಈ ಕೆಲಸ ಮಾಡಿ

Advertisement

ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಚಾಲನೆ ನೀಡಲು ನಾಳೆ ಸಿದ್ದತೆ ನಡೆಸಿದ್ದಾರೆ, ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಯುವ ನಿಧಿ ಯೋಜನೆ ಇನ್ನಷ್ಟೆ ಜಾರಿ ಯಾಗಬೇಕಿದೆ, ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದವರ ಖಾತೆಗೆ ನಾಳೆ ಅಂದರೆ ಆಗಸ್ಟ್ 30 ರಂದು ಖಾತೆಗೆ ಹಣ ಬೀಳಲಿದೆ, ನಾಳೆಯಷ್ಟೆ ಕಾಂಗ್ರೆಸ್ ಸರ್ಕಾರಕ್ಕೆ 100 ದಿನ ತುಂಬಿದ ಖುಷಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಮಾಡಲಿದ್ದು ಚಾಲನೆ‌ನೀಡಲಿದ್ದಾರೆ.

ಹೀಗೆ ಚೆಕ್ ಮಾಡಿ:

ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಕೆ ಮಾಡಿದ್ದಾರೆಯೋ ಅವರ ಹೆಸರು ಕೂಡ ಬಿಡುಗಡೆ ಮಾಡಿದ್ದಾರೆ, ಇದೀಗ ಗೃಹಲಕ್ಷ್ಮಿ ಯೋಜನೆ ಯನ್ನು ಪಡೆಯುವವರ ಲಿಸ್ಟ್ ಬಿಡುಗಡೆ ಆಗಿದ್ದು, ನಿಮ್ಮ ಹೆಸರು ಕೂಡ ಈ ಲಿಸ್ಟ್ ನಲ್ಲಿ ಇದೆಯಾ. ಇಲ್ಲವಾ ಎಂದು ಚೆಕ್ ಮಾಡಿ, ನೀವು ಆಹಾರ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಇಲ್ಲಿ https://ahara.kar.nic.in/WebForms/Show_Village_List. aspx ಇಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಕೂಡ ಮಾಡಬಹುದಾಗಿದೆ.

ಸಮಾರಂಭದ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ:

ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು ನಾಳೆ ನಡೆಯಲಿರುವ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಸಮಾರಂಭದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದುಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ, ಇದರ ಜೊತೆ ಜಿಲ್ಲೆಯ ಗ್ರಾಪಂಗಳಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕೂಡ ನಡೆಸಲಾಗುವುದು ಎಂದಿದ್ದಾರೆ

ಬಸ್‌ ವ್ಯವಸ್ಥೆ:

‘ರಾಜ್ಯಾದ್ಯಂತ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಆನ್‌ಲೈನ್‌ ಮೂಲಕವು ಕಾರ್ಯ ಕ್ರಮ ವೀಕ್ಷಣೆ ಮಾಡಬಹುದಾಗಿದ್ದು, ಮೈಸೂರು, ಮಂಡ್ಯ, ಹಲವು ಕಡೆಯ ಮಹಿಳೆಯರು ಆಗಮಿಸಲಿದ್ದು, ಕಾರ್ಯಕ್ರಮಕ್ಕೆ ಬರಲು , 2 ಸಾವಿರ ಬಸ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ನಾಳೆ ಚಾಲನೆ ಸಿಗಲಿದ್ದು ಮಹಿಳೆಯರ ಖುಷಿ ಮತ್ತಷ್ಟು ದುಪ್ಪಟಾಗಿದೆ ಎನ್ನಬಹುದು,

Leave A Reply

Your email address will not be published.