Karnataka Times
Trending Stories, Viral News, Gossips & Everything in Kannada

Land Registration: ಜಾಗ ರಿಜಿಸ್ಟರ್ ಮಾಡುವ ಸಮಯದಲ್ಲಿ ಈ ರೀತಿ ಮಾಡಿಕೊಂಡರೆ ಹಣ ಉಳಿತಾಯ ಆಗುತ್ತೆ!.

ನೀವು ನಿಮ್ಮ ಹಣವನ್ನು ಹೊಸ ಮನೆ ಫ್ಲಾಟ್ ಭೂಮಿ ಖರೀದಿಸುವುದಕ್ಕೆ ಹಣವನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದರೆ ಆ ಆಸ್ತಿಯನ್ನು ಅದರ ನಿಜವಾದ ಮಾಲೀಕನಿಂದ ನಿಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡರೆ ಮಾತ್ರ ಅದನ್ನು ಮಾನ್ಯ ಎಂಬುದಾಗಿ ಪರಿಗಣಿಸಲಾಗುತ್ತಿದೆ ಹೀಗಾಗಿ ರಿಜಿಸ್ಟರ್ ಮಾಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ. ರಿಜಿಸ್ಟ್ರಿ ಮಾಡಿಸಿಕೊಳ್ಳುವುದಕ್ಕೆ ಕೂಡ ಒಟ್ಟಾರೆ ಆಸ್ತಿಯ ಐದರಿಂದ ಏಳು ಪ್ರತಿಶತ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಉದಾಹರಣೆಗೆ ಒಂದು ಆಸ್ತಿಯ ಬೆಲೆ 50 ಲಕ್ಷ ರೂಪಾಯಿ ಇದೆ ಅಂದರೆ ಕೇವಲ ರಿಜಿಸ್ಟ್ರಿಗಾಗಿ (Land Registry) ನೀವು ಎರಡುವರೆಯಿಂದ 3 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಪ್ರತಿಯೊಬ್ಬರು ಕೂಡ ರಿಜಿಸ್ಟರ್ ಹಣವನ್ನು ಉಳಿಸಲು ಪ್ರಯತ್ನ ಪಡುತ್ತಾರೆ ಹಾಗಿದ್ದರೆ ಬನ್ನಿ ಇದಕ್ಕೆ ಇರುವಂತಹ ಒಂದೊಳ್ಳೆ ಉಪಾಯ ಏನು ಅನ್ನೋದನ್ನ ತಿಳಿದುಕೊಳ್ಳೋಣ.

Advertisement

ಕೆಲವೊಮ್ಮೆ ಗಮನಿಸಿರಬಹುದು ನೀವು ಖರೀದಿಸುವಂತಹ ಭೂಮಿಯ ಮಾರುಕಟ್ಟೆ ಬೆಲೆ ಕಡಿಮೆಯಾಗಿರುತ್ತದೆ ಹಾಗೂ ಸರ್ಕಿಲ್ ರೇಟ್ ಜಾಸ್ತಿ ಆಗಿರುತ್ತದೆ. ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ (Stamp Duty) ನಿಯಮಗಳ ಪ್ರಕಾರ ಮಾರ್ಕೆಟ್ ವ್ಯಾಲ್ಯೂ ಮೇಲೆ ಸ್ಟ್ಯಾಂಪ್ ಡ್ಯೂಟಿಯನ್ನು ಅಪಿಲ್ ಮಾಡುವ ಮೂಲಕ ಕಡಿಮೆ ಮೊತ್ತಕ್ಕೆ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ. ಜಮೀನಿನ ರಿಜಿಸ್ಟ್ರಿ ಹಾಗೂ ಇನ್ನಿತರ ಆದಾಯಗಳು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಕೆಲವೊಂದು ಬಾರಿ ರಾಜ್ಯ ಸರ್ಕಾರದಿಂದ ರಿಜಿಸ್ಟ್ರಿ ಮಾಡುವಂತಹ ಶುಲ್ಕ ಕಡಿಮೆ ಮಾಡಲಾಗುತ್ತದೆ. ಈ ಮೂಲಕ ನೀವು ಜಮೀನಿನ ರಿಜಿಸ್ಟ್ರಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಉಳಿತಾಯ ಮಾಡಬಹುದು. ಮಹಾರಾಷ್ಟ್ರ ಪಂಜಾಬ್ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಜಮೀನಿನ ರಿಜಿಸ್ಟ್ರಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ. ಅದು ಕೂಡ ಪ್ರಾಪರ್ಟಿಯನ್ನು ಉಡುಗೊರೆ ರೂಪದಲ್ಲಿ ನೀಡಿದರೆ ಮಾತ್ರ. ಈ ರೀತಿಯ ನಿಯಮಗಳ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಎಂಬುದನ್ನು ಖಂಡಿತವಾಗಿ ನಾವು ತಿಳಿದಿದ್ದೇವೆ. ಈ ನಿಯಮಗಳ ಬಗ್ಗೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ರೀತಿಯ ನಿಯಮಗಳನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ ನಿಮ್ಮ ಜಮೀನಿನ ರಿಜಿಸ್ಟ್ರಿ ಮಾಡುವುದಕ್ಕಿಂತ ಮುಂಚೆ ನಿಮ್ಮ ರಾಜ್ಯದ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗುತ್ತದೆ.

Advertisement

ನೀನು ಮಹಿಳೆಯರ ಹೆಸರಿನಲ್ಲಿ ಭೂಮಿಯ ರಿಜಿಸ್ಟ್ರಿ ಮಾಡಿಸಿಕೊಳ್ಳುವುದರಿಂದಲೂ ಕೂಡ ಸಾಕಷ್ಟು ರಿಯಾಯಿತಿಯನ್ನು ನೀವು ಪಂಜಾಬ್ ರಾಜಸ್ತಾನ ದಿಲ್ಲಿ ಅಂತಹ ರಾಜ್ಯಗಳಲ್ಲಿ ಕಾಣಬಹುದಾಗಿದೆ. ಪುರುಷರ ಹೆಸರಿನಲ್ಲಿ ರಿಜಿಸ್ಟ್ರಿ ಮಾಡಿದರೆ ಆರು ಪ್ರತಿಶತ ಶುಲ್ಕವನ್ನು ನೀಡಬೇಕಾಗುತ್ತದೆ ಅದೇ ಮಹಿಳೆಯರ ಹೆಸರಿನಲ್ಲಿ ರಿಜಿಸ್ಟರ್ ಮಾಡಿದರೆ ಕೇವಲ ನಾಲ್ಕು ಪ್ರತಿಶತ ಶುಲ್ಕ ನೀಡಬೇಕಾಗುತ್ತದೆ. ರೆಸಿಡೆನ್ಸಿಯಲ್ ಪ್ರಾಪರ್ಟಿ (Residential Property) ಮೇಲೆ 1.5 ಲಕ್ಷ ರೂಪಾಯಿಗಳ ವರೆಗೂ ಕೂಡ ಉಳಿತಾಯ ಮಾಡಬಹುದು

Leave A Reply

Your email address will not be published.