Arecanut Husk: ಅಡಿಕೆ ಸಿಪ್ಪೆಯನ್ನು ಸುಡುವುದು ಅಥವಾ ಬಿಸಾಡುವ ಬದಲು ಈ ರೀತಿ ಬಳಸಿ! ಡಬಲ್ ಆದಾಯ

Advertisement
ಇಂದು ರಾಜ್ಯದ್ಯಂತ ಅಡಿಕೆ ಕೃಷಿ ಹೆಚ್ಚು ವ್ಯಾಪಿಸುತ್ತಿದೆ. ರೈತರು ಹೆಚ್ಚಾಗಿ ಅಡಿಕೆ ಕೃಷಿ ಮಾಡಲು ಇಷ್ಟಪಡುತ್ತಾರೆ ಹೊಸದಾಗಿ ಅಡಿಕೆ ಗಿಡಗಳನ್ನು ಹಾಕಿ ಉತ್ತಮ ಇಳುವರಿ ಪಡೆದುಕೊಳ್ಳಲು ಉತ್ತಮ ಗೊಬ್ಬರ ನೀರು ಹಾಕಿ ಗಿಡಗಳನ್ನು ಆರೈಕೆ ಮಾಡುತ್ತಾರೆ. ಆದರೆ ಅದೆಷ್ಟು ಜನರಿಗೆ ತಮ್ಮ ಜಮೀನಿನಲ್ಲಿಯೇ ಇರುವ ಕೆಲವು ವಸ್ತುಗಳು ಉತ್ತಮ ಗೊಬ್ಬರ ಆಗಬಹುದು ಎನ್ನುವ ಕಲ್ಪನೆ ಇರುವುದಿಲ್ಲ ಅಂತವುಗಳಲ್ಲಿ ಅಡಿಕೆ ಸಿಪ್ಪೆ ಕೂಡ ಒಂದು ಸಾಮಾನ್ಯವಾಗಿ ಅಡಿಕೆ ಸಿಪ್ಪೆಗಳನ್ನ ರೈತರು ಸುಡುತ್ತಾರೆ ಅಥವಾ ರಸ್ತೆಗಳಲ್ಲಿ ಬಿಸಾಡುವುದನ್ನು ನೀವು ನೋಡಿರಬಹುದು ಆದರೆ ಹೀಗೆ ಮಾಡುವುದಕ್ಕಿಂತ ಅಡಿಕೆ ಸಿಪ್ಪೆಯನ್ನು ಸರಿಯಾದ ರೀತಿಯಲ್ಲಿ ಗೊಬ್ಬರವಾಗಿ ತಯಾರಿಸಿಕೊಳ್ಳಬಹುದು.
ಅಡಿಕೆ ಸಿಪ್ಪೆ ಪ್ರಯೋಜನ:
ಅಡಿಕೆ ಸಿಪ್ಪೆಯಲ್ಲಿ ಸೆಲ್ಯೂಲೊಸ್, ಲಿಗ್ನಿನ್, ಹೆಮಿ ಸೆಲ್ಲಿಲೋಸ್ ಅಂಶ ಬಹಳ ಜಾಸ್ತಿ ಇರುವುದರಿಂದ ಅಡಿಕೆ ಸಿಪ್ಪೆ ಬೇಗ ಕೊಳೆಯುವುದಿಲ್ಲ. ಅದೇ ರೀತಿ ಇಂಗಳ ಹಾಗೂ ಸಾರಜನಕ ಪ್ರಮಾಣದಲ್ಲಿಯೂ ಕೂಡ ವ್ಯತ್ಯಾಸ ಇರುವುದರಿಂದ ಅಡಿಕೆ ಸಿಪ್ಪೆ ಅಷ್ಟು ಬೇಗ ಕೊಳೆಯುವುದಿಲ್ಲ. ಇದೇ ಕಾರಣಕ್ಕೆ ರೈತರು ತಾಳ್ಮೆಯಿಂದ ಇದನ್ನು ಗೊಬ್ಬರವಾಗಿ ಪರಿವರ್ತಿಸುವ ಕೆಲಸಕ್ಕೆ ಕೈಯಾಗುವುದಿಲ್ಲ.
ಅಡಿಕೆ ಸಿಪ್ಪೆ ಪೋಷಕಾಂಶಗಳ ಆಗರವಾಗಿದೆ ಇದರಲ್ಲಿ ಭೂಮಿಗೆ ಬೇಕಾಗಿರುವ ಸಾರ್ವಜನಿಕ ಪೊಟ್ಯಾಶಿಯಂ ರಂಜಕ, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಇರುವುದರಿಂದ ಇದನ್ನ ತೋಟಕ್ಕೆ ಗೊಬ್ಬರವಾಗಿ ಬಳಸಿಕೊಂಡರೆ ಉತ್ತಮವಾದ ಇಳುವರಿ ಪಡೆಯಬಹುದು ಜೊತೆಗೆ ಮಣ್ಣಿನ ಫಲವತ್ತತೆ ಕೂಡ ಚೆನ್ನಾಗಿರುತ್ತೆ.
ಅಡಿಕೆ ಸಿಪ್ಪೆ ಬೇಗ ಕೊಳೆಯುವಂತೆ ಮಾಡಲು ಏನು ಮಾಡಬೇಕು?
ಅಡುಗೆ ರೆಸಿಪಿಯನ್ನು ಒಂದು ಜಾಗದಲ್ಲಿ ಸುರಿಯಬೇಕು. ಮೊದಲ ಲೇಯರ್ ನಲ್ಲಿ ಅಡಿಕೆ ಸೋಗೆಯನ್ನು ಹರಡಬೇಕು. ಅದರ ನಂತರ ಅಡಿಗೆ ಸಿಪ್ಪೆ ಆಗಬೇಕು. ಮೂರನೇ ಲೇಯರ್ ನಲ್ಲಿ ಸೆಗಣಿ ಅಥವಾ ಸ್ಲೇರಿ ದ್ರಾವಣವನ್ನು ಸಿಂಪಡಿಸಬೇಕು. ಹೀಗೆ ನಾಲ್ಕೈದು ಲೇಯರ್ ಸಾವಯವ ವಸ್ತುಗಳನ್ನು ಹಾಕಬೇಕು. ಈ ಲೇಯರ್ಗಳ ನಡುವೆ ಸೂಕ್ಷ್ಮಾಣು ಜೀವಿಗಳನ್ನು ಹಾಕಿದರೆ ಅದಕ್ಕೆ ಸಿಪ್ಪೆ ಬೇಗ ಕೊಳೆಯುವಂತೆ ಮಾಡುತ್ತವೆ. ಎಸ್ ಎಸ್ ಪಿ ಮೊದಲದ ಸೂಕ್ಷ್ಮಾಣು ಜೀವಿಗಳು ಬೆಳೆಯುವಂತಹ ಪೌಡರ್ ಅನ್ನು ನೀವು ಹಾಕಬಹುದು. ಈ ಗೊಬ್ಬರವನ್ನು ಆಗಾಗ ಜೆಸಿಬಿ ಸಹಾಯದಿಂದ ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ಒಂದರಿಂದ ಎರಡು ವರ್ಷಗಳ ಅವಧಿಯಲ್ಲಿ ಕೊಳೆಯುವ ಅಡಿಕೆ ಸಿಪ್ಪೆ ಕೇವಲ ಐದಾರು ತಿಂಗಳ ಒಳಗೆ ಕೊಳೆತು ನಿಮ್ಮ ಭೂಮಿಗೆ ಅತ್ಯುತ್ತಮವಾದ ಗೊಬ್ಬರ ಸಿದ್ದವಾಗುತ್ತದೆ. ಒಂದು ಹೆಕ್ಟರ್ ಪ್ರದೇಶಕ್ಕೆ ಎಂಟರಿಂದ ಹತ್ತು ಟನ್ ನಷ್ಟು ಈಗ ಗೊಬ್ಬರವನ್ನು ಹಾಕಬಹುದು.
ಹಾಗಾಗಿ ರೈತರ ಅಡುಗೆ ಸಿಪ್ಪೆ ಸುಡುವುದು ಅಥವಾ ರಸ್ತೆಯ ಮೇಲೆ ಅಡಿಕೆ ಸಿಪ್ಪೆಯನ್ನು ಹಾಕಿ ಅದನ್ನ ನಂತರದ ದಿನಗಳಲ್ಲಿ ಮಣ್ಣಿನ ಜೊತೆಗೆ ಮಿಕ್ಸ್ ಮಾಡಿ ತೋಟಕ್ಕೆ ಬಳಸುವುದಕ್ಕಿಂತಲೂ ಅಡಿಕೆ ಸಿಪ್ಪೆಯನ್ನು ಅತ್ಯುತ್ತಮ ಗೊಬ್ಬರವಾಗಿ ನೀವೇ ತಯಾರಿಸಿ ನಿಮ್ಮ ಗಿಡಗಳಿಗೆ ಹಾಕಬಹುದು ಇದರಿಂದ ಇಳುವರಿಯು ಡಬಲ್ ಆಗುತ್ತದೆ ಜೊತೆಗೆ ಭೂಮಿಯ ಫಲವತ್ತತೆ ಕೂಡ ಹೆಚ್ಚಾಗುತ್ತದೆ.