ಸಾಮಾನ್ಯವಾಗಿ ಇಂದಿನ ಯುವ ಜನತೆಗೆ ಕೃಷಿ ಮಾಡಿ ಎಷ್ಟು ಆದಾಯ ಪಡೆಯಬಹುದು ಎನ್ನುವ ಕಲ್ಪನೆ ಇಲ್ಲ ಆದರೆ ಒಂದು ವೇಳೆ ನೀವು ಕೃಷಿಯ ಮುಖ ಮಾಡಿದರೆ ಒಂದು ಐಟಿ ಕಂಪನಿಯಲ್ಲಿ ದುಡಿಯುವುದಕ್ಕಿಂತಲೂ ಹೆಚ್ಚಿನ ಹಣವನ್ನು ಗಳಿಸಬಹುದು ಎಂಬುದು ನಿಮಗೆ ಗೊತ್ತೇ? ಹೌದು ತುಮಕೂರಿನ ಒಬ್ಬ ಯುವ ರೈತ ಇಂತಹ ಕೃಷಿಗೆ ಮಾದರಿಯಾಗಿದ್ದಾರೆ.
ಎಂವಿಎ ಪದವೀಧರ ಆಗಿರುವ ಒಬ್ಬ ಯುವ ರೈತ ಐಟಿ ಕಂಪನಿಗಳಲ್ಲಿಯೂ ಕೂಡ ಸೇವೆ ಸಲ್ಲಿಸಿ ನಂತರ ಎಲ್ಲದಕ್ಕಿಂತ ಬೆಸ್ಟ್ ಕೃಷಿ ಎಂಬುದನ್ನ ಮನಗಂಡು ತಮ್ಮ ಊರಿಗೆ ಬಂದು ಕೃಷಿಯನ್ನು ಆರಂಭಿಸುತ್ತಾರೆ. ಈಗ ಬರೋಬ್ಬರಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ ಅವರು ಮಾಡಿದ ಕೃಷಿ ಏನು ಅದರಿಂದ ಆಗ್ತಾ ಇರುವಂತಹ ಪ್ರಯೋಜನ ಏನು ಎಂಬುದನ್ನು ನೋಡೋಣ.
ಕೋಳಿ ಕೃಷಿ:
ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಇವರು ತಮ್ಮ ಪ್ರಾಣಿ ಹಾಗೂ ಪಕ್ಷಿ ಸಾಕಾಣಿಕ ಉದ್ಯಮವನ್ನು ಆರಂಭಿಸಿದರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಸಾಗುತ್ತಿದ್ದಾರೆ ಪ್ರತಿ ತಿಂಗಳು ಇದರಿಂದಲೇ ಒಂದು ಲಕ್ಷದಷ್ಟು ಆದಾಯ ಬರುತ್ತದೆ. ಅವರು ಹೇಳುವ ಪ್ರಕಾರ ಕೋಳಿ ಬೆಳೆಸುವಾಗ ಅದರ ಬಗ್ಗೆ ವೈಜ್ಞಾನಿಕವಾಗಿ ಕೂಡ ತಿಳಿದುಕೊಳ್ಳಬೇಕು ನಿಮಗೆ ಸರಿಯಾದ ಜ್ಞಾನ ಇದ್ದರೆ ಕೋಳಿಗೆ ಯಾವುದೇ ತೊಂದರೆ ಆಗದೆ ಇರುವ ರೀತಿಯಲ್ಲಿ ಫಾರ್ಮಿನ್ ಮಾಡಬಹುದು.

ಈ ವಿಷಯಗಳು ನೆನಪಿರಲಿ
ನೀವು ಕೋಳಿ ಕೃಷಿ ಮಾಡುತ್ತೀರಿ ಎಂದರೆ ಅದಕ್ಕೆ ಹೆಚ್ಚಿನ ಇನ್ವೆಸ್ಟ್ಮೆಂಟ್ ಬೇಕಾಗುವುದಿಲ್ಲ ಕೇವಲ ಒಂದುವರೆ ಲಕ್ಷ ರೂಪಾಯಿಗಳಲ್ಲಿ ಸಾವಿರದಷ್ಟು ಕೋಳಿಯನ್ನು ಫಾರ್ಮ್ ನಲ್ಲಿ ತಯಾರಿಸಲು ಸಾಧ್ಯವಿದೆ. ಮುಖ್ಯವಾಗಿ ಗಮನಿಸಬೇಕಾದ ವಿಷಯ ಅಂದ್ರೆ ನೀವು ಯಾವ ತಳಿಯ ಕೋಳಿ ಕೃಷಿ ಮಾಡುತ್ತಿದ್ದೀರಿ ಎಂಬುದು. ನೀವು ನಿಮ್ಮ ಕೋಳಿ ಕೃಷಿಯನ್ನು ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೀರಿ ಎಂಬುದನ್ನು ಗಮನಿಸಬೇಕು ಮೊಟ್ಟೆ ಉದ್ದೇಶಕ್ಕಾಗಿ, ಮಾಂಸದ ಉದ್ದೇಶಕ್ಕಾಗಿ, ಬ್ರೀಡಿಂಗ್ ಉದ್ದೇಶಕ್ಕಾಗಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ನೋಡಿಕೊಳ್ಳಬೇಕು ಅದರ ಆಧಾರದ ಮೇಲೆ ನೀವು ಕೋಳಿ ತಳಿಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಕೋಳಿ ಸಾಕಾಣಿಕೆ ಮಾಡುವಾಗ ನೀವು ಪೂರ್ಣ ಪ್ರಮಾಣದ ಆಹಾರವನ್ನು ಕೊಟ್ಟು ಸಾಕಬಹುದು ಇದರಿಂದ ಬೇಗ ಕೋಳಿ ತೂಕ ಪಡೆದುಕೊಳ್ಳುತ್ತದೆ. ಅದೇ ರೀತಿಯಾಗಿ ಕೋಳಿಗೆ ಬರುವ ರೋಗ ಅದಕ್ಕೆ ಯಾವ ರೀತಿಯ ಆಹಾರ ನೀಡಬೇಕು, ನೀರಿನ ನಿರ್ವಹಣೆ ಹೇಗೆ ಎಂಬೆಲ್ಲ ವಿಚಾರದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಕೋಳಿ ಸಾಕಾಣಿಕೆ ಮಾಡಿದ ನಂತರ ಅದನ್ನು ಎಲ್ಲಿ ಮಾರಾಟ ಮಾಡಬಹುದು ಎಂಬುದರ ಬಗ್ಗೆಯೂ ಕೂಡ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಈ ರೀತಿ ಕೋಳಿ ಸಾಕಾಣಿಕೆ ಬಗ್ಗೆ ನಿಮಗೆ ಜ್ಞಾನ ಇದ್ರೆ ಸುಲಭವಾಗಿ ಈ ಕೃಷಿ ಮಾಡಬಹುದು.
ಇನ್ನು ಎಂ ಬಿ ಎ ಪದವೀಧರರಾಗಿರುವ ಈ ರೈತರು ತಿಳಿಸುವಂತೆ ಅವರು ತಮ್ಮ ಅತ್ಯಲ್ಪ ಜಮೀನಿನಲ್ಲಿ ಕೋಳಿ ಫಾರ್ಮಿಂಗ್ ಮಾಡುವುದರ ಜೊತೆಗೆ ಕುರಿಯನ್ನು ಸಾಕಿದ್ದಾರೆ ಜೊತೆಗೆ ಮೀನು, ಹೈನು ಹಾಗೂ ಜೇನು ಕೃಷಿಯನ್ನೂ ಕೂಡ ಮಾಡುತ್ತಿದ್ದಾರೆ. ಈ ಎಲ್ಲಾ ಕೃಷಿಯನ್ನು ಮಾಡಲು ನೀವು ಒಂದೇ ಸಲ ಬಂಡವಾಳ ಹೂಡಿಕೆ ಮಾಡಬೇಕಾಗಿಲ್ಲ. ಬದಲಾಗಿ ಒಂದು ಕೃಷಿ ಮಾಡಿ ಅದರಲ್ಲಿ ಬಂದ ಆದಾಯದಲ್ಲಿ ಇನ್ನೊಂದು ಕೃಷಿ ಆರಂಭಿಸಬಹುದು.
ಹೀಗೆ ಕೃಷಿಯನ್ನು ವೈಜ್ಞಾನಿಕವಾಗಿ ಹಾಗೂ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಕೃಷಿ ಮಾಡಿದರೆ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸಬಹುದು.