ಮಹಾಭಾರತದಲ್ಲಿ ಕರ್ಣ (Karna) ನನ್ನು ಧಾನವೀರ ಶೂರನೆಂದು ಕರೆಯುತ್ತಾರೆ. ಈ ಮೂಲಕ ಕರ್ಣನ ಪಾತ್ರವು ಮಹಾ ಭಾರತದಲ್ಲಿ (Mahabharata) ಎಂದು ಮರೆಯದೆ ಅನೇಕರಿಗೆ ಕರ್ಣ ಇಂದಿಗೂ ಆದರ್ಶ ಪ್ರೀಯ ರಾಗಿದ್ದಾರೆ. ಕರ್ಣ ಇಂದು ಅಜರಾಮರ ವಾಗಿದ್ದರೂ ಅವನು ಅಧರ್ಮದ ಪರವಾಗಿ ಇದ್ದ ಎಂಬ ಅಭಿಪ್ರಾಯ ಹೊರಹೊಮ್ಮುತ್ತಿದೆ. ಹಾಗಾದರೆ ಯಾವುದು ಸತ್ಯ ಅವನು ಧರ್ಮೊದ್ಧಾರಕನೆ ಅಥವಾ ಅಧರ್ಮ ಮಾರ್ಗದಲ್ಲಿ ಸಹ ಸಂಚರಿಸಿದ್ದನೇ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಅಧರ್ಮ ನಡೇ ಹೌದೆ?
ಕರ್ಣ ನಿಜಾರ್ಥದಲ್ಲಿ ಏನು ಅರಿಯದ ಎಳೆ ಕಂದಮ್ಮನೆಂದೆ ಹೇಳಬಹುದು. ಅವನಿದ್ದಕಿಂತಲೂ ವಿಧಿಯಾಟವೇ ಅವನ ಬದುಕನ್ನು ಬರುಡು ಮಾಡಿ ಬಿಟ್ಟಿತ್ತು. ಈ ಮೂಲಕ ಹುಟ್ಟುತ್ತಲೆ ಮೇರು ಕುಲದವನಾದರೂ ಕೀಳು ಕುಲದ ಪಟ್ಟ ಹೊರಬೇಕಾಯಿತು. ರಾಧೆಯ ಮಗನಾಗಿ ಸ್ಥಾನ ಸಿಕ್ಕರು ರಾಜ ಮಹಾರಾಜರಿಗೆ ಇವನು ಕೀಳು ಕುಲದವನೇ ಆಗಿದ್ದನು. ಸೂರ್ಯ ನನ್ನಾಗಲಿ ಅಥವಾ ಕುಂತಿಯನ್ನಾಗಲಿ ಜನ್ಮ ನೀಡುವಂತೆ ಕೇಳಲಿಲ್ಲ. ಸೂರ್ಯ ಸುತನಾದರೂ ಎಲ್ಲೆಡೆ ಅಪವಾಧನೆ ಮಾತ್ರ ತಪ್ಪಿಲ್ಲ. ಇಷ್ಟೇಲ್ಲ ಅಪಮಾನದ ನಡುವೆ ಸಿಕ್ಕ ಪರಿಶುದ್ಧ ಸ್ನೇಹ ಎಂದರೆ ಅದು ದುರ್ಯೋಧನ ನ (Duryodhana) ಸ್ನೇಹ. ಹಾಗಾಗಿ ಕೌರವ ಮಹಾರಾಜನ ಪರವಾಗಿ ಇರಲು ಒಪ್ಪಿದನೇ ಹೊರತು ಅಧರ್ಮ ನಡೆ ಖಂಡಿತಾ ಇಲ್ಲ ಎನ್ನಬಹುದು.
ಧಾನ ಮಾಡಿ ಶೂರನಾದ ಕರ್ಣ:
ವಿದ್ಯೆ ಕಲಿಸಿದ ಗುರು ದ್ರೋಣಾ ಚಾರ್ಯರಿಗೂ ಇವನ ಕೀಳು ಕುಲದವನು ಸುಳ್ಳು ಹೇಳಿದ್ದನೆಂದು ಕೋಪ ಆದರೆ ಸತ್ಯ ಹೇಳಿದರೆ ವಿದ್ಯೆ ಕಲಿಸುತ್ತಿದ್ದರೆ ಖಂಡಿತಾ ಇಲ್ಲ. ಅದಕ್ಕೆ ಕಷ್ಟ ಕಾಲದಲ್ಲೇ ಕಲಿತ ವಿದ್ಯೆ ಮರೆತುಹೋಗಲೆಂದು ಶಾಪನೀಡಿ ಕರ್ಣನ ಅಂತ್ಯಕ್ಕೂ ಅದು ಒಂದು ಕಾರಣ ಆಯಿತು. ತುಪ್ಪ ಬಿದ್ದಿದೆ ಎಂದು ಅತ್ತ ಮಗುವನ್ನು ಸಮಾಧಾನಿಸಲೆಂದು ಭೂಮಿಯ ಮಣ್ಣನ್ನು ಹಿಂಡಿದರೆ ವಿನಃ ಭೂ ತಾಯಿಗೆ ಅಪಮಾನ ಮಾಡುವ ಉದ್ದೇಶ ಆತನಿಗೆ ಇರಲಿಲ್ಲ. ಇಂದ್ರನು ಮಾರು ವೇಷದಲ್ಲಿದ್ದರೂ ತನ್ನ ರಕ್ಷಣೆಗಂತಿದ್ದ ಕವಚವನ್ನು ಧಾನಮಾಡಿ ಶೂರನಾದ ವೀರ ಮಹಾಭಾರತದ ಕರ್ಣನೆಂದರೂ ತಪ್ಪಾಗಲಾರದು. ಈ ಮೂಲಕ ಕರ್ಣ ಎಂದಿಗೂ ಧರ್ಮದ ನಡೆಯಲ್ಲಿ ಇದ್ದದ್ದು ಹಾಗಾಗಿಯೇ ಪಾಂಡವರ ವಿರುದ್ಧ ಹೋರಾಡಲಾಗದೆ ಇತ್ತ ಕೌರವರ ಸೈನ್ಯ ಮುಂದಾಳತ್ವ ವಹಿಸಲಾಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕರ್ಣ ತಲುಪಿದ್ದು.
ಕರ್ಣನ ಪಾತ್ರ ಪ್ರೇರಣೆ:
ಮಹಾಭಾರತ ಸಕಲ ಗೆಲುವು ಪಾಂಡವರದ್ದೇ ಆದರೂ ಗೆದ್ದ ನಿಜ ಗೆಲುವು ಕರ್ಣನದ್ದೆ ಎನ್ನಬಹುದು. ಯಾಕೆಂದರೆ ಯಾರು ಧೂಶಿಸದ ಎಲ್ಲರನ್ನು ಎಲ್ಲದನ್ನು ಸಹಿಸಿ ನಡೆಯ ಬೇಕೆಂಬ ನೀತಿ ಸಾರುವ ನೆಲೆಯಲ್ಲಿ ಕರ್ಣನ ಪಾತ್ರ ಮಾತ್ರ ಅದ್ಭುತವಾಗಿದ್ದು ನಮಗೆಲ್ಲ ಪ್ರೇರಣೆ ಎಂದೇ ಹೇಳಬಹುದು. ಕರ್ಣನ ವ್ಯಕ್ವಿತ್ವದ ನಡೆ ಎಂಬುದು ಎಲ್ಲರಿಗೂ ಮಾದರಿ ಎನ್ನಬಹುದು.