Arecanut: 25 ವರ್ಷಗಳಿಂದ ಸಂಶೋಧನೆ ಮಾಡಿ ಇದೇ ಅಡಿಕೆ ತಳಿ ಬೆಸ್ಟ್ ಎಂದ ರೈತ! ಇದರಿಂದ ಆದಾಯ ದುಪ್ಪಟ್ಟು

Advertisement
ಅಡಿಕೆ ಕೃಷಿ ಮಾಡಲು ಬಯಸುವವರು ಮೊದಲು ಮುಖ್ಯವಾಗಿ ಆಯ್ದುಕೊಳ್ಳಬೇಕಾಗಿರುವುದು ಉತ್ತಮವಾಗಿರುವ ತಳಿ. ಚೆನ್ನಾಗಿ ಫಸಲು ಬರುವಂತಹ ತಳಿಯನ್ನು ಆಯ್ದುಕೊಳ್ಳಬೇಕು ಜೊತೆಗೆ ಎಲ್ಲ ರೀತಿಯ ಮಣ್ಣಿನಲ್ಲಿಯೂ ಹೊಂದಾಣಿಕೆಯಾಗುವಂತಹ ತಳಿಯಾಗಿದ್ದರೆ ಇನ್ನೂ ಅನುಕೂಲ. ಕಡಿಮೆ ನಿರ್ವಹಣೆ ಇರುವಂತಹ ಅಡಿಕೆ ತಳಿಯನ್ನು ಆಯ್ದುಕೊಂಡರೆ ಉತ್ತಮವಾದ ಫಸಲು ಪಡೆದುಕೊಳ್ಳಲು ಸಾಧ್ಯ.
ರಾಜ್ಯದ್ಯಂತ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ತಳಿಯ ಅಡಿಕೆಗಳನ್ನು ಬೇಸಾಯ ಮಾಡಲಾಗುತ್ತೆ. ಕರಾವಳಿ ಮಲೆನಾಡು ಅರೆ ಮಲೆನಾಡು, ಅರೆ ಮಲೆನಾಡಿಗೆ ತಾಗಿಕೊಂಡಿರುವಂತಹ ಬಯಲು ಸೀಮೆ ಪ್ರದೇಶ ಹೇಗೆ ಮೊದಲಾದ ಕಡೆ ಅಡಿಕೆ ಬೆಳೆಯಲಾಗುತ್ತದೆ ಅಲ್ಲಿನ ಮಣ್ಣಿನ ಗುಣಕ್ಕೆ ಅನುಗುಣವಾಗಿ ಅಡಿಕೆ ತಳೆ ಆಯ್ಕೆ ಮಾಡಲಾಗುತ್ತದೆ. ಒಂದು ಕಡೆ ಬೆಳೆಯುವ ಅಡಿಕೆ ತಳಿ ಇನ್ನೊಂದು ಕಡೆಗೆ ಬೆಳೆಯುವುದಿಲ್ಲ. ಆದರೆ ಸಾಗರದ ಕೆಳದಿ ಕ್ಯಾಸನೂರು ಸೀಮೆಯಲ್ಲಿ ಬೆಳೆಯುವ ಈ ಒಂದು ಅಡಿಕೆ ತಳಿ ಬಹುತೇಕ ಎಲ್ಲಾ ಪ್ರದೇಶಗಳಿಗೂ ಹೊಂದಾಣಿಕೆ ಆಗುತ್ತದೆ.
ಅಡಿಕೆ ತಳಿಗಳು
ಅಡಿಕೆಯಲ್ಲಿ ಮಂಗಳ, ಶ್ರೀ ಮಂಗಳ, ಮೋಹಿತ್ ನಗರ, ಸುಮಂಗಳ, ರತ್ನಗಿರಿ, ಮಧುಮಂಗಳ, ಶತಮಂಗಳ ಹೀಗೆ ಹಲವಾರು ರೀತಿಯ ತಳಿಗಳು ಇವೆ. ಆದರೆ 172 ರಿಂದಲೂ ಬಳಸಿಕೊಂಡು ಬಂದಿರುವ ಸ್ಥಳೀಯ ತಳಿಯನ್ನೇ ಕೃಷಿ ಮಾಡುವುದು ಸೂಕ್ತ ಎನ್ನುವುದು ಹಲವರ ಅಭಿಪ್ರಾಯ.
ಸಾಗರದ ಕೆಳದಿ ಬಳಿ ಕ್ಯಾಸನೂರು ಎನ್ನುವ ಪ್ರದೇಶದಲ್ಲಿ ರೈತರೊಬ್ಬರು ಕಳೆದ 25 ವರ್ಷಗಳಿಂದ ಸ್ಥಳೀಯ ಸ್ಥಳೀಯನ್ನು ಬೆಳೆಸಿ ಆರೈಕೆ ಮಾಡಿ ಅದರಿಂದ ಉತ್ತಮವಾದ ಆದಾಯ ಪಡೆಯುತ್ತಿದ್ದಾರೆ ಅವರು ಹೇಳುವ ಪ್ರಕಾರ ಇದಕ್ಕೆ 400 ವರ್ಷಗಳಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಕೆಳದಿ ಅರಸರು 15 16ನೇ ಶತಮಾನದಲ್ಲಿ ಅಡಿಕೆ ಬೇಸಾಯ ಮಾಡುವುದರ ಬಗ್ಗೆ ಗಮನ ಹರಿಸಿದ್ದರು ಎನ್ನಲಾಗಿದೆ. ಶರಾವತಿ ನದಿಯಿಂದ ವರದಾ ನದಿಯವರೆಗೂ ಕೂಡ ಈ ಅಡುಗೆಯ ಬೇಸಾಯ ಹೆಚ್ಚಾಗಿ ಕಂಡುಬರುತ್ತದೆ.
ಸ್ಥಳೀಯ ತಳಿಯ ವಿಶೇಷತೆ
ಈ ಅಡಿಕೆ ಗಿಡವನ್ನು ಹಾಕಿದ್ರೆ ತೋಟದಲ್ಲಿ ಆರೈಕೆ ಮಾಡಬೇಕಾದ ಅನಿವಾರ್ಯತೆ ಬಹಳ ಕಡಿಮೆ. ಇತ್ತೀಚಿನ ತಳಿಯ ಆರೈಕೆ ಮಾಡಿದಂತೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ ಜೊತೆಗೆ ಪೋಷಕಾಂಶ ನೀರಾವರಿಗಾಗಿ ಕಷ್ಟ ಪಡಬೇಕಾಗಿಲ್ಲ. ಹೆಚ್ಚಿನ ನಿರ್ವಹಣೆ ಇಲ್ಲದಿದ್ದರೂ ಎಕರೆಗೆ 15 ರಿಂದ 16 ಕ್ವಿಂಟಲ್ ಇಳುವರಿ ಕೊಡಬಹುದು. ಸ್ವಲ್ಪ ಮುತುವರ್ಜಿ ವಹಿಸಿ ಕೃಷಿ ಮಾಡಿದರೆ 20 ರಿಂದ 25 ಕ್ವಿಂಟಲ್ ವರೆಗೂ ಕೂಡ ಅಡಿಕೆ ಬರುತ್ತದೆ. ಈ ಅಡಿಕೆ ಕೊನೆಗೆ ತೂಕ ಜಾಸ್ತಿ ಅಡಿಕೆ ರೌಂಡ್ ಆಗಿ ಇರುತ್ತದೆ. ಬಾರಿ ಗಟ್ಟಿಯೂ ಅಲ್ಲದ ಮೆದು ಅಲ್ಲದ ಈ ಅಡಿಕೆ ತಿನ್ನುವುದಕ್ಕೂ ಕೂಡ ಬಹಳ ಸುಲಭ. ಇದನ್ನು ತೀರ್ಥಹಳ್ಳಿಯ ತಳಿ ಎನ್ನಬಹುದು. ಈ ತಳಿಯ ಅಡಿಕೆ ಗೊನೆಗಳು ಬಹಳ ಹತ್ತಿರ ಇರುತ್ತದೆ 50 ರಿಂದ 60 70 ವರ್ಷಗಳವರೆಗೆ ಈ ಅಡಿಕೆ ಮರ ಬದುಕುತ್ತದೆ.
ಸಾಗರದ ರೈತರ ಸಂಶೋಧನೆಯ ಪ್ರಕಾರ ಕಳೆದ 25 ವರ್ಷಗಳಿಂದಲೂ ಇದೇ ತಳಿಯ ಅಡಿಕೆಯನ್ನು ನೆಟ್ಟಿ ಬೆಳೆಸಿ ಉತ್ತಮ ಫಸಲನ್ನು ಪಡೆದುಕೊಂಡಿದ್ದಾರೆ ಆದರೆ ಅವರು ಹೇಳುವ ಪ್ರಕಾರ ಈ ಅಡಿಗೆಮರ ಬೀಜಕ್ಕೆ ಸೂಕ್ತವಲ್ಲ. ತುಂಬಾ ವರ್ಷಗಳವರೆಗೆ ನೋಡಿ ಅದರಲ್ಲಿ ಯಾವುದು ಬೆಸ್ಟ್ ಎಂಬುದನ್ನು ಆಯ್ಕೆ ಮಾಡಿ ನಂತರ ಪೂಜೆ ಮಾಡಬೇಕು. ಹಾಗಾಗಿ ಅವರೇ ಈ ಅಡಿಕೆ ಬೀಜಗಳಿಂದ ಸಸಿ ತಯಾರಿಸಿ ಹಲವರಿಗೆ ಕೊಡುತ್ತಾರೆ. ಸಾಗರದ ಸುತ್ತಮುತ್ತಲಿನ ಜನ ಅಡಿಕೆ ಬೀಜಕ್ಕಾಗಿ ಇವರ ಬಳಿಯೇ ಬರುತ್ತಾರೆ ಎನ್ನಲಾಗಿದೆ. ಹಾಗಾಗಿ ಬೂತೆ ಕಾಯಿ ಎಲ್ಲ ಭಾಗದಲ್ಲಿಯೂ ಬೆಳೆಯಬಹುದಾದ ಹಾಗೂ ಕಡಿಮೆ ನಿರ್ವಹಣೆ ಹೊಂದಿರುವ ಸಾಗರ ತೀರ್ಥಹಳ್ಳಿ ಭಾಗದ ಸ್ಥಳೀಯ ಅಡಿಕೆ ಗಿಡಗಳನ್ನು ಕೃಷಿ ಮಾಡುವುದು ಸೂಕ್ತ.