BSNL: ರಕ್ಷಾ ಬಂಧನಕ್ಕೆ ಹೊಸ ಆಫರ್ ಕೊಟ್ಟ BSNL! ನಡುಗಿದ ಜಿಯೋ, ರಿಚಾರ್ಜ್ ಗೆ ಮುಗಿಬಿದ್ದ ಜನ

Advertisement
ಪ್ರಸ್ತುತ ಏರ್ಟೆಲ್ ಹಾಗೂ ಜಿಯೋ ನಡುವಿನ ಸ್ಪರ್ಧೆಯಿಂದ BSNL ಟೆಲಿಕಾಂ ಕಂಪನಿ ಕೊಂಚ ಹಿಂದೆ ಉಳಿದಿದ್ದರು ಕೂಡ ಅದು ಗ್ರಾಹಕರನ್ನು ಆಕರ್ಷಿಸಲು ಆಗಾಗ ವಿವಿಧ ರೀತಿಯ ಪ್ರಯೋಗ ಮಾಡುವ ಮೂಲಕ ವಿಶೇಷ ಆಫರ್ ನೀಡುತ್ತದೆ. ನಿಮ್ಮ ಬಳಿ BSNL SIM ಇದ್ದರೆ ಈ ವಿಚಾರ ನಿಮಗೆ ಖುಷಿ ನೀಡುತ್ತದೆ. ಈ ಸಿಮ್ ತಿಂಗಳಿಗೆ ಒಂದೊಂದು ಹೊಸ ಯೋಜನೆಯನ್ನು ತರ್ತಾ ಇದೆ. ಹೀಗಾಗಿ ನೀವು ಈಸಿಯಾಗಿ ಈ ಯೋಜನೆಯನ್ನು ಕೂಡ ಎಂಜಾಯ್ ಮಾಡಬಹುದಾಗಿದೆ.
ಈ ತಿಂಗಳಿನಲ್ಲಿ ರಕ್ಷಾ ಬಂಧನ ಸೇರಿದಂತೆ ಅನೇಕ ಹಬ್ಬಗಳಿದ್ದು, ಇಂತಹ ಸಮಯದಲ್ಲಿ ಒಂದು ಹೊಸ ಯೋಜನೆಯನ್ನು ಇದು ನೀಡುತ್ತಿದೆ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ರೂ. 397 ಅತ್ಯುತ್ತಮ ಯೋಜನೆ ತಂದಿದೆ. ಈ ಯೋಜನೆಯ ವ್ಯಾಲಿಡಿಟಿ 150 ದಿನಗಳು ಇರುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2GB ಡೇಟಾ, ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 SMS ಅನ್ನು ಪಡೆಯಬಹುದಾಗಿದೆ. ಅನ್ಲಿಮಿಟೆಡ್ ಯೋಜನೆಯಿದು. ಆದರೆ ಈ ಪ್ರಯೋಜನಗಳು ಕೇವಲ 30 ದಿನಗಳ ಮಾನ್ಯತೆಯನ್ನು ಹೊಂದಿವೆ. ಹೀಗಾಗಿ ನೀವು ಬೇಗ ಈ ರೀಚಾರ್ಜ್ ಮಾಡಿಕೊಳ್ಳಿ ಮತ್ತು ಎಂಜಾಯ್ ಮಾಡಿ
BSNL ನ ರೂ. 397 ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳು 30 ದಿನಗಳಲ್ಲಿ ಮುಕ್ತಾಯಗೊಳ್ಳುತ್ತವೆ. ಆದರೆ ಇದರ ವ್ಯಾಲಿಡಿಟಿ 150 ದಿನಗಳವರೆಗೆ ಇರುತ್ತದೆ. ನೀವು ಎರಡು ಸಿಮ್‌ಗಳನ್ನು ಬಳಸುತ್ತಿದ್ದರೆ, ಎರಡನೇ ಸಿಮ್‌ನ ಮಾನ್ಯತೆಯನ್ನು ದೀರ್ಘಾವಧಿಯವರೆಗೆ ವಿಸ್ತರಿಸಲು ಈ ಯೋಜನೆಯು ಅತ್ಯುತ್ತಮ ಆಯ್ಕೆಯಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲೀ ಇಷ್ಟು ದಿನ ವ್ಯಾಲಿಡಿಟಿ ನೀಡುವ ಯೋಜನೆ ಇದಾಗಿದ್ದು ಕೊಳ್ಳಬಹುದು.