ರೈಲ್ವೆ ಪ್ರಯಾಣದಲ್ಲಿ ತುಂಬಾ ಜನರು ಕೆಳ ಸೀಟು ಬಯಸುತ್ತಾರೆ, ವಿಶೇಷವಾಗಿ ಹಿರಿಯ ನಾಗರಿಕರು ಮೊಳಕಾಲು ನೋವು ಅಥವಾ ಇತರೆ ಸಮಸ್ಯೆಗಳಿಂದ ಕೆಳ ಸೀಟು ಬಯಸುತ್ತಾರೆ. ಕೆಳ ಸೀಟು ಆರಾಮದಾಯಕ ಹಾಗು ಸುಲಭ ಪ್ರಯಾಣದ ಒಂದು ಅಂಶಬಾಗಿದ್ದು ಹಿರಿಯ ನಾಗರಿಕರಿಗೆ ಸುಲಭ ಪ್ರಯಾಣದ ಒಂದು ಸುಯೋಗ ಎನ್ನಬಹುದು.
ಇಂತಹ ಹಿರಿಯ ನಾಗರಿಕರು ಕೆಳ ಸೀಟು ಸಿಗದೇ ಕೆಲವು ಬರಿ ತೊಂದರೆ ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರೈಲ್ವೆ Lower Berth Quota (LBQ) ಅನ್ನು ಅನೇಕ ವರ್ಷಗಳಿಂದ ಜಾರಿಗೊಳಿಸಿದೆ. ಆದರೆ ಈ ನಿಯಮ ಯಾರಿಗೆ ಅನ್ವಯಿಸುತ್ತದೆ ಮತ್ತು ಹೇಗೆ Seat Assign ಆಗುತ್ತದೆ ಎಂಬುದರ ಬಗ್ಗೆ ಹಲವು ತಪ್ಪು ಕಲ್ಪನೆಗಳು ಸಾಮಾಜಿಕ ಜಾಲತಾಣ ಹಾಗು ಕೆಲ ನ್ಯೂಸ್ ಪೋರ್ಟಲ್ ಗಳಲ್ಲಿ ಹರಿದಾಡುತ್ತಿವೆ.
ಲೇಖನ ದಲ್ಲಿ India Railway ಅಧಿಕೃತ ನಿಯಮಗಳ ಆಧಾರದ ಮೇಲೆ ದೃಢೀಕರಿಸಿದ ಮಾಹಿತಿ ನೀಡಲಾಗಿದೆ.
ಲೋವರ್ ಬರ್ತ್ ಕೋಟಾ ಯಾರಿಗೆ ಅನ್ವಯಿಸುತ್ತದೆ?
Indian Railway Circular ಪ್ರಕಾರ ಕೆಳಗಿನ ಪ್ರಯಾಣಿಕರಿಗೆ Lower Berth Quota ಮೀಸಲಾಗುತ್ತದೆ:
1. ಹಿರಿಯ ಮಹಿಳೆಯರು – 58 ವರ್ಷ ಮತ್ತು ಮೇಲ್ಪಟ್ಟವರು

58 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ Lower Berth Quota ಅನ್ವಯಿಸುತ್ತದೆ.
Normal booking ಸಮಯದಲ್ಲಿ 50% ರಿಯಾಯಿತಿ ಕೂಡ ಲಭ್ಯವಿರುತ್ತದೆ.
2. ಹಿರಿಯ ಪುರುಷರು – 60 ವರ್ಷ ಮತ್ತು ಮೇಲ್ಪಟ್ಟವರು

60 ವರ್ಷ ಮತ್ತು ಮೇಲ್ಪಟ್ಟ ಪುರುಷ ಪ್ರಯಾಣಿಕರಿಗೆ ಕೂಡ Lower Berth Quota ಅನ್ವಯಿಸುತ್ತದೆ.
ಇವರಿಗೆ Normal booking ಸಮಯದಲ್ಲಿ 40% ರಿಯಾಯಿತಿ ನೀಡಲಾಗುತ್ತದೆ.
3. ಅಂಗವಿಕಲ (PwD) ಪ್ರಯಾಣಿಕರು

ಅಂಗವಿಕಲ ಪ್ರಯಾಣಿಕರಿಗೆ ಕೆಳ ಸೀಟಿಗೆ ಆದ್ಯತಾ ಮೀಸಲಾತಿ ನೀಡಲಾಗುತ್ತದೆ.
ಕೆಲವು ವಿಶೇಷ coaches ಮತ್ತು berths ಕೂಡ ಅಂಗವಿಕಲ (PwD) ಪ್ರಯಾಣಿಕರಿಗಾಗಿ ಮೀಸಲಿಡಲಾಗುತ್ತದೆ .
4. ಅಂಗವಿಕಲ (PwD) ಪ್ರಯಾಣಿಕರೊಂದಿಗೆ ಬರುತ್ತಿರುವ Escort

ದಿವ್ಯಾಂಗ ಪ್ರಯಾಣಿಕರೊಂದಿಗೆ ಪ್ರಯಾಣಿಸುವ escortಗೂ Lower Berth Quota ಅನ್ವಯಿಸಬಹುದು. ಇದು PwD ಪ್ರಯಾಣಿಕರ ಸುರಕ್ಷತೆ ಮತ್ತು ನೆರವಿಗಾಗಿ ನೀಡಲಾಗುವ ಸೌಲಭ್ಯ.
5. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆ + 2 ವರ್ಷಕ್ಕಿಂತ ಕಡಿಮೆ ಮಗು

45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರೆ ಮಾತ್ರ Lower Berth Quota ಅಡಿಯಲ್ಲಿ ಕೆಳ ಸೀಟು ಪಡೆಯುವ ಆಧ್ಯತೆ ಹೊಂದಿರುತ್ತಾರೆ .
ಇದು “ಎಲ್ಲ 45+ ಮಹಿಳೆಯರಿಗೆ” ಅಲ್ಲ, ಕೇವಲ 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜೊತೆಗೆ 2 ವರ್ಷಕ್ಕಿಂತ ಚಿಕ್ಕ ಮಗು ಹೊಂದಿರಿರುವ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ.
ಲೋವರ್ ಬರ್ತ್ “Automatic Assignment” ಹೇಗೆ ಕೆಲಸ ಮಾಡುತ್ತದೆ?
IRCTC automated seat allocation ವ್ಯವಸ್ಥೆ ಕೆಳಗಿನ ಶರತ್ತುಗಳು ಪೂರೈಸಿದಾಗ ಕೆಳ ಸೀಟನ್ನು ಕೊಡಲು ಪ್ರಯತ್ನಿಸುತ್ತದೆ:
- ಪ್ರಯಾಣಿಕರ ವಯಸ್ಸು ಸರಿಯಾಗಿ ನಮೂದಿಸಿರಬೇಕು.
- Senior Citizen / Divyang quota ಆಯ್ಕೆ ಮಾಡಿರಬೇಕು.
- Lower Berth Quota seats ಇನ್ನೂ ಖಾಲಿ ಇರಬೇಕು.
- ಆ ಕೋಚ್ ನ ವಿನ್ಯಾಸ ಕೆಳ ಸೀಟು ನೀಡಲು ಅನುಮತಿ ವ್ಯವಸ್ಥೆ ಅಥವಾ ಅವಕಾಶ ಹೊಂದಿರಬೇಕು .
ಈ ಸಂದರ್ಭಗಳಲ್ಲಿ ಸಿಸ್ಟಮ್ ಕೆಳ ಸೀಟನ್ನು ನೀಡಲು ಪ್ರಾಥಮಿಕ ಆದ್ಯತೆ ನೀಡುತ್ತದೆ. ಆದರೆ automatic lower berth assignment ಗ್ಯಾರಂಟಿ ಇರಲ್ಲ ; ಕೆಳ ಸೀಟುಗಳ ಲಭ್ಯತೆ ಮತ್ತು Quota ಎರಡರ ಮೇಲೂ ಇದು ಅವಲಂಬಿತವಾಗಿರುತ್ತದೆ.
ಲೋವರ್ ಬರ್ತ್ ಕೋಟಾ ಯಾವ ತರಗತಿಗಳಿಗೆ ಅನ್ವಯಿಸುತ್ತದೆ?
Lower Berth Quota ಕೆಳಗಿನ ಕೋಚ್ ಗಳಲ್ಲಿ ಮಾತ್ರ ಅನ್ವಯಿಸುತ್ತದೆ:
- Sleeper Class (SL)
- AC 3-Tier (3A)
- AC 2-Tier (2A)
ಕೆಳಗಿನ ರೈಲುಗಳಲ್ಲಿ ಸಾಮಾನ್ಯವಾಗಿ Lower Berth Quota ಅನ್ವಯಿಸುವುದಿಲ್ಲ:
- Shatabdi Express (Sleeper berths ಇಲ್ಲ)
- Vande Bharat Express
- Jan Shatabdi (ಅಧಿಕವಾಗಿ AC Chair Car coaches)
Rajdhani ರೈಲುಗಳಲ್ಲಿ LBQ ಸೀಮಿತ ಕೋಚ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಹಿರಿಯರಿಗೆ ಲಭ್ಯವಿರುವ ರಿಯಾಯಿತಿಗಳು
ಮಹಿಳೆಯರು (58 ವರ್ಷ ಮತ್ತು ಮೇಲ್ಪಟ್ಟವರು)
58 ವರ್ಷ ಮತ್ತು ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ನಾರ್ಮಲ್ ಬುಕಿಂಗ್ ನಲ್ಲಿ ರೈಲು ಟಿಕೆಟ್ ದರದ ಮೇಲೆ
ಸುಮಾರು 50% ರಿಯಾಯಿತಿ ನೀಡಲಾಗುತ್ತದೆ. ತತ್ಕಾಲ್ ಬುಕಿಂಗ್ ನಲ್ಲಿ ಈ ರಿಯಾಯಿತಿ ಲಭ್ಯವಿರುವುದಿಲ್ಲ.
ಪುರುಷರು (60 ವರ್ಷ ಮತ್ತು ಮೇಲ್ಪಟ್ಟವರು)
60 ವರ್ಷ ಮತ್ತು ಮೇಲ್ಪಟ್ಟ ಪುರುಷ ಪ್ರಯಾಣಿಕರಿಗೆ ನಾರ್ಮಲ್ ಬುಕಿಂಗ್ ಸಮಯದಲ್ಲಿ 40% concession ಲಭ್ಯ.
ಇದೂ ಸಹ ತತ್ಕಾಲ್ ಬುಕಿಂಗ್‌ಗಳಿಗೆ ಅನ್ವಯಿಸುವುದಿಲ್ಲ.
ಬುಕಿಂಗ್ ಮಾಡುವಾಗ ಗಮನಿಸಬೇಕಾದ ವಿಚಾರಗಳು
- IRCTC app ಅಥವಾ website ನಲ್ಲಿ ಪ್ರಯಾಣಿಕರ ವಯಸ್ಸು ಸರಿಯಾಗಿ ನಮೂದಿಸಬೇಕು.
- Senior Citizen / Divyang quota ಆಯ್ಕೆ ಮಾಡಿದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
- ಪ್ರಯಾಣದ ಸಮಯದಲ್ಲಿ ಮಾನ್ಯ Identity Proof ಜೊತೆಯಲ್ಲಿ ಇರಬೇಕು.
- Lower Berth Quota Seats ತುಂಬಿಕೊಂಡಿದ್ದರೆ ಸಿಸ್ಟಮ್ ಬೇರೆ berth assign ಮಾಡಬಹುದು.
ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ಸರಿಯಾದ ಮಾಹಿತಿ
| ತಪ್ಪು ಮಾಹಿತಿ | ಸರಿಯಾದ ಮಾಹಿತಿ |
|---|---|
| 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ automatic lower berth ಸಿಗುತ್ತದೆ. | ತಪ್ಪು. ಕೇವಲ 45+ ಮಹಿಳೆ + 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಇದ್ದಾಗ ಮಾತ್ರ ಈ Quota ಅನ್ವಯಿಸುತ್ತದೆ. |
| Lower Berth Quota ಎಲ್ಲಾ ರೈಲುಗಳಲ್ಲಿ ಅನ್ವಯಿಸುತ್ತದೆ. | ತಪ್ಪು. SL, 3A, 2A ಕೋಚ್ ಗಳಿಗೆ ಮಾತ್ರ ಮುಖ್ಯವಾಗಿ ಅನ್ವಯಿಸುತ್ತದೆ; Shatabdi, Vande Bharat ಹೀಗೆಲ್ಲಾದಲ್ಲಿ ಸಾಮಾನ್ಯವಾಗಿ ಇರುವುದಿಲ್ಲ . |
| ಕರ್ನಾಟಕ ಅಥವಾ ನಿರ್ದಿಷ್ಟ ರಾಜ್ಯ ಮಾರ್ಗಗಳಿಗೆ ವಿಶೇಷ lower berth ನಿಯಮ ಇದೆ. | ತಪ್ಪು. Lower Berth Quota ಒಂದು Pan-India Railway Policy ಆಗಿದ್ದು, ರಾಜ್ಯ ಮಟ್ಟದಲ್ಲಿ ಬೇರೆ ನಿಯಮ ಇರುವುದಿಲ್ಲ. |
| Lower berth ಯಾವ Senior Citizen ಗೂ ಯಾವಾಗಲೂ ಸಿಗುತ್ತದೆ. | ತಪ್ಪು. ಇದು Availability, Quota selection ಮತ್ತು Coach Configuration ಮೇಲೂ ಅವಲಂಬಿತವಾಗಿರುತ್ತದೆ . |
ಸಾರಾಂಶ
ಭಾರತೀಯ ರೈಲ್ವೆಯ Lower Berth Quota ಹಿರಿಯರು, ದಿವ್ಯಾಂಗರು ಮತ್ತು ವಿಶೇಷ ಅಗತ್ಯವಿರುವ ಪ್ರಯಾಣಿಕರಿಗೆ ಕೆಳ ಸೀಟಿನ ಸೌಲಭ್ಯ ಒದಗಿಸಲು ರೂಪಿಸಲಾದ ವ್ಯವಸ್ಥೆಯಾಗಿದೆ. ಆದರೆ ಇದು ಎಲ್ಲರಿಗೂ ಸ್ವಯಂಚಾಲಿತವಾಗಿ ಸೀಟು ಕೊಡುತ್ತದೆ ಎಂಬುದು ತಪ್ಪು ಕಲ್ಪನೆ.
ಯಾರು ಅರ್ಹರು, ಯಾವ ತರಗತಿಯಲ್ಲಿ LBQ ಇದೆ, ಹೇಗೆ Seat Assign ಆಗುತ್ತದೆ ಎಂಬ ಸ್ಪಷ್ಟ ಅರಿವು ಇದ್ದರೆ, ಹಿರಿಯರು ಮತ್ತು ಕುಟುಂಬ ಸದಸ್ಯರು ಈ ಸೌಲಭ್ಯವನ್ನು ಸುಲಭವಾಗಿ ಬಳಸಿಕೊಂಡು
ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣ ಮಾಡಬಹುದು.







