BS Yediyurappa: ವರುಣಾ ಕ್ಷೇತ್ರದಲ್ಲಿ ನಿಮ್ಮ ಮಗ ನಿಲ್ಲುತ್ತಾನಾ ಎಂದಿದ್ದಕ್ಕೆ ಉತ್ತರ ಕೊಟ್ಟ ಯಡಿಯೂರಪ್ಪ.
ಸದ್ಯ ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೇ ಇದೀಗರಾಜ್ಯ ವಿಧಾನಸಭೆ ಚುನಾವಣೆಯ(Karnataka Assembly Election) ರಣರಂಗದಂತೆ ಗೋಚರಿಸುತ್ತಿದ್ದು ದಿನದಿಂದ ದಿನಕ್ಕೆ ಕಾವು ಕೂಡ ಹೆಚ್ಚಾಗುತ್ತಿದೆ ಎನ್ನಬಹುದು. ಇನ್ನು ಈಗಾಗಲೇ ವಿಧಾಸನಭೆ ಚುನಾವಣೆಯ ದಿನಾಂಕ ಕೂಡ ಘೋಷಣೆಯಾಗಿದ್ದು ಈ ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎನ್ನಬಹುದು. ಇನ್ನು ಬಿಜೆಪಿ (BJP) ಕ್ಷೇತ್ರಗಳಲ್ಲಿ ಇದೀಗ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸಿದ್ದುವ ಈ ನಡುವೆ ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷರಾದಂತಹ ಬಿವೈ ವಿಜಯೇಂದ್ರ (BY Vijayendra) ರವರ ಸ್ಪರ್ಧೆ ಮಾತ್ರ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ ಎನ್ನಬಹುದು.
ಗುರುವಾರವಷ್ಟೆ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ (BS Yediyurappa) ರವರು ತಮ್ಮ ಪುತ್ರ ವಿಜಯೇಂದ್ರ ರವರು ವರುಣಾದಿಂದ ಸ್ಪರ್ಧಿಸುವ ಸಾಧ್ಯೆತೆ ಇದೆ ನುಡಿದ್ದರು. ಆದರೆ ನಿನ್ನೆ (Friday) ವರುಣಾದಿಂದ ಸ್ಪರ್ಧಿಸುವುದಿಲ್ಲ ಬದಲಿಗೆ ಶಿಕಾರಿಪುರದಿಂದ (Shikaripura) ಸ್ಪರ್ಧಿಸುತ್ತಾರೆ ಎಂದಿದ್ದಾರೆ.
ಹೌದು ವರುಣಾ (Varuna) ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು ಎಂದಿರುವ ಬಿಎಸ್ ವೈ ಆದರೆ ನಾನೇ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಬೇಡ ಎಂದು ಹೇಳಿದ್ದೇನೆ ಎಂದಿದ್ದಾರೆ. ಮುಂದುವರೆದು ಮಾತನಾಡಿದ ಅವರು ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಈ ಕಾರಣದಿಂದಾಗಿ ಪುತ್ರ ವಿಜಯೇಂದ್ರ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಬೇಕಿದ್ದು ವರುಣಾ ಕ್ಷೇತ್ರದ ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಹೌದು ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ. ಆದರೆ ಮಾತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಿದ್ದು ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡದ ಕಾರಣ ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕಿದೆ. ಇದು ನನ್ನ ನಿರ್ಧಾರ ಎಂದು ಸೂಚನೆ ನೀಡಿದ್ದಾರೆ ಬಿಎಸ್ ವೈ.
ಸದ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರವಾಗಿ ಬಿವೈ ವಿಜಯೇಂದ್ರ ರವರು ಹೈಕಮಾಂಡ್ ಒಪ್ಪಿದರೇ ವರುಣಾದಿಂದ ಖಂಡಿತ ಸ್ಪರ್ಧಿಸಲು ನಾನು ಸಿದ್ದ ಎಂದಿದ್ದರು. ಆದರೆ ಇಂದು ತಂದೆ ಬಿಎಸ್ ಯಡಿಯೂರಪ್ಪ ನವರು ಪುತ್ರನ ಸ್ಪರ್ಧೆಗೆ ನಕಾರ ಅಂದಿದ್ದು ಮೈಸೂರಿನಲ್ಲಿ ವರುಣಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಿ ಅಧಿಕೃತವಾಗಿ ಹಿಂದೆ ಸರಿದು ಬಿಟ್ಟಿದ್ದಾರೆ.
ಇನ್ನು ಬಿವೈ ವಿಜಯೇಂದ್ರ ರವರಿಗೆ ಇದು ಮೊಟ್ಟ ಮೊದಲ ಚುನಾವಣೆಯಾಗಿದ್ದು ಮೊದಲ ಚುನಾವಣೆಯಲ್ಲಿಯೇ ವಿಜಯೇಂದ್ರ ರವರು ಸ್ಪರ್ಧೆ ಮಾಡಿ ಸೋತರೆ ಅವರ ರಾಜಕೀಯ ಭವಿಷ್ಯಕ್ಕೆ ಪೂರ್ಣ ವಿರಾಮ ಬೀಳುವ ಆತಂಕವಿದೆ ಎನ್ನಬಹುದು. ಇನ್ನು ಈ ಹಿನ್ನೆಲೆ ಎಸ್ ಯಡಿಯೂರಪ್ಪ ರವರು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು ಯಾವುದು ಬೇರೆ ಕ್ಷೇತ್ರ ಬೇಡ ಎಂದು ತಮ್ಮ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಣೆ ಮಾಡಿ ಪುತ್ರನ ರಕ್ಷಣೆಗೆ ಬಿಎಸ್ವೈ ಮುಂದಾಗಿದ್ದಾರೆ ಎನ್ನಬಹುದು.