PPF Loan : ಬಂಪರ್ ಆಫರ್! ಇಲ್ಲಿ ಕೇವಲ 1% ಬಡ್ಡಿಗೆ ಸಿಗ್ತಾ ಇದೆ ಸಾಲ.

Advertisement
ಸಾಲ ಅನ್ನೋದು ಯಾರಿಗೆ ತಾನೇ ಬೇಕಿಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ಶೈಲಿಯನ್ನು ಇನ್ನಷ್ಟು ಉನ್ನತಕ್ಕೆ ಏರಿಸಲು ಹಾಗೂ ಜೀವನದಲ್ಲಿ ಒಂದು ಹೆಜ್ಜೆ ಮುಂದಿಡಲು ಸಾಲವನ್ನು ಮೊದಲ ಮೆಟ್ಟಿಲನ್ನಾಗಿ ಬಳಸಿಕೊಳ್ಳುತ್ತಾರೆ. ಇದೇ ವಿಚಾರದ ಕುರಿತಂತೆ ಮಾತನಾಡುತ್ತಾ ಸರ್ಕಾರದ ಒಂದು ಯೋಜನೆ ಜನರಿಗೆ ಕೇವಲ 1% ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಆ ಯೋಜನೆಯ ಕುರಿತಂತೆ ನೀವು ಕೂಡ ಕೇಳಿರಬಹುದು. ಹೌದು ನಾವು ಮಾತನಾಡುತ್ತಿರುವುದು ಪಿಪಿಎಫ್(PPF Loan ) ಬಗ್ಗೆ. Public Provident Fund.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಸರ್ಕಾರದಿಂದ ಪರಿಚಿತವಾಗಿರುವಂತಹ ಒಂದು ಯೋಜನೆ. ಇದು ರಿಟೈರ್ಮೆಂಟ್ ಪ್ಲಾನಿಂಗ್ ಗೆ ಒಂದೊಳ್ಳೆ ಯೋಜನೆಯಾಗಿದ್ದು ಒಂದು ವೇಳೆ ನೀವು ಈಗ ಹೂಡಿಕೆ ಮಾಡುತ್ತಾ ಹೋದರೆ, ಈ ಆರ್ಥಿಕ ವರ್ಷದ ಅಂತ್ಯದಲ್ಲಿ ನೀವು ಈ ಯೋಜನೆಯಿಂದಾಗಿ 1% ಬಡ್ಡಿ ದರದಲ್ಲಿ ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ. ಯಾವಾಗ ಬೇಕಾದರೂ ಕೂಡ ಈ ರೀತಿ ನಾನು ಲೋನ್ ಪಡೆದುಕೊಳ್ಳಬಹುದಾ ಎಂಬುದಾಗಿ ನೀವು ಕೇಳಬಹುದು ಆ ಪ್ರಶ್ನೆಗೆ ಇಲ್ಲ ಎನ್ನುವುದು ಉತ್ತರವಾಗಿದೆ. ನೀವು ಹೂಡಿಕೆ ಮಾಡಲು ಪ್ರಾರಂಭಿಸಿದ ವರ್ಷದಿಂದ ಐದು ವರ್ಷದ ಒಳಗೆ ಮಾತ್ರ ಲೋನ್ ತೆಗೆದುಕೊಳ್ಳುವಂತಹ ಅವಕಾಶ ಇರುತ್ತದೆ.
ಇನ್ನು ನೀವು ನಿಮ್ಮ PPF ಖಾತೆಯಲ್ಲಿರುವಂತಹ ಹಣದ 25% ಮಾತ್ರ ಲೋನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ನು ತಾಂತ್ರಿಕ ರೂಪದಲ್ಲಿ ನೀವು 1% ಬಡ್ಡಿಯನ್ನು ಕಟ್ಟುತ್ತೀರಿ. ಇಲ್ಲಿ ಪಡೆದಿರುವಂತಹ ಹಣವನ್ನು ಮೂರು ವರ್ಷಗಳ ಒಳಗಾಗಿ ವಾಪಸು ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಇದನ್ನು ದಾಟಿದರೆ ನೀವು ಎಕ್ಸ್ಟ್ರಾ 6% ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇನ್ನು ನಿಮಗೆ ಇನ್ನೊಂದು ಸಾಲ ಬೇಕು ಎನ್ನುವುದಾದರೆ ಈಗಾಗಲೇ ತೆಗೆದುಕೊಂಡಿರುವ ಸಾಲ ಕಂಪ್ಲೀಟ್ ಆಗಿ ಕಟ್ಟದೇ ನಿಮಗೆ ಇನ್ನೊಂದು ಸಾಲ ಸಿಗುವುದಿಲ್ಲ. ನೀವು ಎಷ್ಟು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡುತ್ತಾ ಹೋಗುತ್ತಿರೋ ಅದೇ ರೀತಿ ನಿಮಗೆ ಸಿಗುವಂತಹ ಸಾಲದ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ. ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.