Karnataka Times
Trending Stories, Viral News, Gossips & Everything in Kannada

Google: ಗೂಗಲ್ ನಲ್ಲಿ ಇದನ್ನು ಸರ್ಚ್ ಮಾಡಲೇಬೇಡಿ, ಲಕ್ಷ ಲಕ್ಷ ಕಳೆದುಕೊಳ್ತೀರಾ!

ಇಂದು ನಮ್ಮ ಜೀವನದಲ್ಲಿ ಗೂಗಲ್ (Google) ಅನ್ನೋದು ಹಾಸುಹೊಕ್ಕಾಗಿದೆ. ನಮಗೆ ಯಾವುದೇ ಮಾಹಿತಿ ಬೇಕು ಅಂದ್ರು ಏನೇ ವಿಷಯದ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರು ಗೂಗಲ್ ನ್ನೇ ಅವಲಂಬಿಸಿದ್ದೇವೆ. ಸಾಕಷ್ಟು ಬಾರಿ ಜನರು ಗೂಗಲ್ ಸರ್ಚ್ ಎಂಜಿನ್ ಮೂಲಕ ಕಸ್ಟಮರ್ ಕೇರ್ ನಂಬರ್ ಗಳನ್ನು ಕೂಡ ಹುಡುಕುತ್ತಾರೆ. ಹಾಗೇನಾದ್ರೂ ನೀವು ಯಾವುದಾದರೂ ಕಂಪನಿಯ ಗ್ರಾಹಕ ಸೇವೆ ಸಂಖ್ಯೆಯನ್ನು ಹುಡುಕುವ ಮೊದಲು ಈ ಲೇಖನವನ್ನು ಒಮ್ಮೆ ಓದಿ. ಯಾಕೆಂದರೆ ಗೂಗಲ್ ನಲ್ಲಿ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕುತ್ತಿದ್ದರೆ ನಿಮ್ಮ ಖಾತೆಯಲ್ಲಿ ಇರುವ ಹಣವನ್ನೇ ಕಳೆದುಕೊಳ್ಳುವಂತಹ ಸಮಸ್ಯೆ ಎದುರಾಗಬಹುದು. ಇದೊಂದು ದೊಡ್ಡ ಮೋಸದ ಜಾಲವಾಗಿದ್ದು ಜನರು ಜಾಗರೂಕತೆಯಿಂದ ಇರಲೇಬೇಕು.

Advertisement

ಬೆಳಕಿಗೆ ಬಂದ ಹಗರಣಗಳು:

Advertisement

ದೆಹಲಿಯ ಒಬ್ಬ ವ್ಯಕ್ತಿ ಹೀಗೆ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ (Google) ನಲ್ಲಿ ಹುಡುಕಿ, ಕಸ್ಟಮರ್ ಕೇರ್ ಗೆ ಕರೆ ಮಾಡಿದ. ಆದರೆ ಇದರಿಂದ ಆತನ ಬ್ಯಾಂಕ್ ಖಾತೆಯಿಂದ 34,000 ರೂಪಾಯಿಗಳು ಥಟ್ ಅಂತ ಹಾರಿಹೋಗಿತ್ತು. ಆ ವ್ಯಕ್ತಿ ಥರ್ಡ್ ಪಾರ್ಟಿ (Third Party )ಕೊರಿಯರ್ ಕಂಪನಿಯಿಂದ ಒಂದು ಹೊಸ ಡೆಬಿಟ್ ಕಾರ್ಡ್ ನಿರೀಕ್ಷೆ ಮಾಡುತ್ತಿದ್ದ ಅದು ಸಿಗದೇ ಇದ್ದಿದ್ದಕ್ಕೆ ಕಸ್ಟಮರ್ ಕೇರ್ ನಂಬರ್ ಕರೆ ಮಾಡಿದ್ದ. ಆದರೆ ಯಾರೂ ಆತನ ಕಾಲ್ ರಿಸೀವ್ ಮಾಡಿರಲಿಲ್ಲ.

Advertisement

ಸ್ವಲ್ಪ ಸಮಯದ ನಂತರ ಕಸ್ಟಮರ್ ಕೇರ್ ನಿಂದ ಕರೆ ಬಂದಿದ್ದು, ಕರೆ ಮಾಡಿರುವ ವ್ಯಕ್ತಿ ತಾನು ಕೋರಿಯರ್ ಸರ್ವಿಸ್ನ ಎಕ್ಸಿಕ್ಯೂಟಿವ್(Service Exicative) ಎಂದು ಹೇಳಿಕೊಂಡಿದ್ದಾನೆ. ಸ್ವಲ್ಪ ತನಿಖೆಯನ್ನು ನಡೆಸಿ ನಂತರ ಒಂದು ಒಟಿಪಿಯನ್ನು ಕಳುಹಿಸಿ ಆ ಓಟಿಪಿ ನಂಬರ್ ಪಡೆದು, ಕರೆ ಮಾಡಿದ ವ್ಯಕ್ತಿಯ ಖಾತೆಯಿಂದ ಹಣವನ್ನು ಎಗರಿಸಿದ್ದಾನೆ.

Advertisement

ನಕಲಿ ಕಸ್ಟಮರ್ ಕೇರ್:

ಹೀಗೆ ಡೆಬಿಟ್ ಕಾರ್ಡ್(Debit Card) ನಿರೀಕ್ಷೆಯಲ್ಲಿದ್ದ ವ್ಯಕ್ತಿಯ ಖಾತೆಯಿಂದ ಹಣವನ್ನೇ ಕದಿಯಲಾಗಿದೆ. ಇಂತಹ ನಕಲಿ ಕಸ್ಟಮರ್ ಕೇರ್ ಮೂಲಕ ಚಂಚನೆ ಮಾಡುವಂತಹ ಪ್ರಕರಣಗಳು ಸಾಕಷ್ಟು ನಡೆಯುತ್ತವೆ. ಈ ಮೋಸದ ಜಾಲ ಹೇಗೆ ವಿಸ್ತರಿಸಿಕೊಳ್ಳುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಸಾಕಷ್ಟು ಬಾರಿ ಗೂಗಲ್ನಲ್ಲಿ ನಡೆಸುವ ಹುಡುಕಾಟದ ಮೂಲಕ ಗ್ರಾಹಕರ ಸಂಖ್ಯೆಯನ್ನು ನೋಟ್ (Note) ಮಾಡಿಕೊಂಡು ಅವರಿಗೆ ಮೋಸ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಸ್ಕ್ಯಾನರ್ ಗಳಿಂದ ಗೂಗಲ್ ನಲ್ಲಿ ವಂಚನೆ:

ಸಾಮಾನ್ಯವಾಗಿ ಜನರು ಬ್ಯಾಂಕ್, ಆನ್ಲೈನ್ ಶಾಪಿಂಗ್ ಹಾಗೂ ಇತರ ಕಂಪನಿಗಳ ಬಳಿ ಮಾತನಾಡಲು ಅಥವಾ ಇನ್ನಿತರ ಕಾರಣಗಳಿಗೆ ಕಸ್ಟಮರ್ ಕೇರ್ ಸಂಖ್ಯೆಯನ್ನು ಹುಡುಕುತ್ತಾರೆ. ಸಹಜವಾಗಿ ಎಲ್ಲಾ ಕಂಪನಿಗಳು ತಮ್ಮ ನಂಬರ್ ಅನ್ನು ವೆಬ್ಸೈಟ್ನಲ್ಲಿ ಹಾಕಿರುತ್ತೇವೆ. ಹಾಗಾಗಿ ಸರ್ಚ್ (Search) ಎಂಜಿನ್ ನಲ್ಲಿ ನೀವು ಹುಡುಕಿದರೆ ಸಾಕಷ್ಟು ಕಸ್ಟಮರ್ ನಂಬರ್ ಗಳು ಸಿಗುತ್ತವೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಸ್ಕ್ಯಾನರ್ ಗಳು ನಕಲಿ ವೆಬ್ಸೈಟ್ ತಯಾರಿಸುತ್ತಾರೆ. ಇದು ಪಕ್ಕ ಅಸಲಿ ವೆಬ್ಸೈಟ್ನಂತೆ ಕಾಣಿಸುತ್ತದೆ ಇದರಲ್ಲಿ ನಕಲಿ ಫೋನ್ ನಂಬರ್ ಹಾಕಿರುತ್ತಾರೆ. ನೀವು ಯಾವುದಾದರೂ ಕಸ್ಟಮರ್ ಕೇರ್ ನಂಬರ್ ಹುಡುಕುತ್ತಿರುವಾಗ ಈ ನಂಬರ್ ಕೂಡ ನಿಮಗೆ ಕಾಣಿಸುತ್ತೆ. ನೀವು ಇಂತಹ ನಕಲಿ ನಂಬರ್ ಗೆ ಕರೆ ಮಾಡಿದರೆ ಮುಗೀತು ನಿಮ್ಮ ಖಾತೆಯಲ್ಲಿ ಇರುವ ಹಣವೆಲ್ಲ ಅವರ ಖಾತೆಗೆ ತಕ್ಷಣ ಟ್ರಾನ್ಸ್ಫರ್ (Transfer) ಆಗುತ್ತದೆ.

ಎಸ್ ಬಿ ಐ ನಿಂದ ಎಚ್ಚರಿಕೆ:

ಈಗಾಗಲೇ ಸರ್ಕಾರದಿಂದಲೂ ಈ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದು ಸಲಹೆ ನೀಡಲಾಗಿದ ಅದೇ ರೀತಿ SBI ಬ್ಯಾಂಕ್ ಕೂಡ ಇಂತಹ ಜಾಲಕ್ಕೆ ಬಲಿಯಾಗಬೇಡಿ ಎಂದು ತನ್ನ ಗ್ರಾಹಕರಿಗೆ ತಿಳಿಸಿದೆ. “ಎಸ್ ಬಿ ಐ (SBI) ನಿಂದ ಏನೇ ಸಹಾಯ ಬೇಕಿದ್ದರೂ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ನಕಲಿ ಕಸ್ಟಮರ್ ಸಂಖ್ಯೆಗಳ ಬಗ್ಗೆ ಎಚ್ಚರ ಇರಲಿ. ಗೌಪ್ಯ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಸ್ ಬಿ ಐ ಮನವಿ ಮಾಡಿದೆ.

ಈ ವಿಷಯಗಳ ಬಗ್ಗೆ ಇರಲಿ ಗಮನ:

ನೀವು ಗೂಗಲ್ ನಲ್ಲಿ ಯಾವುದೇ ನಂಬರ್ ಹುಡುಕಾಡಿದ ನಂತರ ಅದನ್ನು ಕಣ್ಣು ಮುಚ್ಚಿಕೊಂಡು ನಂಬಬೇಡಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಪರಿಶೀಲಿಸಿ. ಯಾವುದೇ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ (Website)ಕಸ್ಟಮರ್(Customer care) ಕೇರ್ ನಂಬರ್ ಇರುತ್ತದೆ ಅದನ್ನ ನೀವು ಬಳಸಿಕೊಳ್ಳಿ.

ಇಂದು ಯಾವುದೇ ಬ್ಯಾಂಕಿಂಗ್ ವ್ಯವಹಾರ ಮಾಡುವುದಿದ್ದರು ಓಟಿಪಿ (OTP) ನಮ್ಮ ಮೊಬೈಲ್ ಗೆ ಬಂದೇ ಬರುತ್ತದೆ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರಾದ್ರೂ ಫೋನ್ ಮೂಲಕ ಓಟಿಪಿಯನ್ನು ಕೇಳಿದರೆ ನೀವು ತಕ್ಷಣವೇ ಅವರ ಕರೆಯನ್ನು ರಿಪೋರ್ಟ್ (Report) ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ. ಇಷ್ಟು ಎಚ್ಚರಿಕೆಯಿಂದ ಇದ್ದಾಗ ಮಾತ್ರ ನೀವು ಈ ವಂಚಕರ ಜಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯ.

Leave A Reply

Your email address will not be published.