Karnataka Election 2023: ಏನಿದು ಚುನಾವಣಾ ಸಂಹಿತೆ? ಯಾಕೆ ರಾಜಕಾರಣಿಗಳಿಗೇಕೆ ಭಯ

Advertisement
ಈಗಾಗಲೇ ಕರ್ನಾಟಕ ರಾಜ್ಯಸಭಾ ಚುನಾವಣೆಯ(Karnataka Assembly Election) ದಿನಾಂಕ ಘೋಷಿತವಾಗಿದ್ದು ಇದೇ ಮೇ 10ರಂದು ಚುನಾವಣೆ ಹಾಗೂ 13 ರಂದು ಫಲಿತಾಂಶ ಹೊರಬರಲಿದೆ. ಇನ್ನು ಚುನಾವಣಾ ಸಂಹಿತೆಯ ಕುರಿತಂತೆ ಕೆಲವರಿಗೆ ವಿವರಗಳು ಕಡಿಮೆಯಾಗಿ ತಿಳಿದಿರಬಹುದು ಅಂತವರಿಗೆ ಈ ಲೇಖನಿಯಲ್ಲಿ ಸಂಪೂರ್ಣ ವಿವರವನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.
ನೀತಿ ಸಂಹಿತೆ ಎಲ್ಲಾ ಪಕ್ಷಗಳು ಹಾಗೂ ಸರ್ಕಾರದಿಂದ ಅನುದಾನವನ್ನು ಪಡೆಯುವಂತಹ ಎಲ್ಲಾ ಸಂಸ್ಥೆಗಳು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತಹ ಎಲ್ಲ ವರ್ಗದ ಜನರಿಗೂ ಕೂಡ ಅನ್ವಯಿಸುತ್ತದೆ. ಚುನಾವಣೆ ಸಂಹಿತೆ ಜಾರಿಗೆ ಬಂದ ನಂತರ ಯಾವುದೇ ಶಂಕು ಸ್ಥಾಪನೆ ಅಥವಾ ಯೋಜನೆಗಳಿಗೆ ಚಾಲನೆ ನೀಡುವಂತಿಲ್ಲ. ಹೊಸ ಟೆಂಡರ್ ಕರೆಯುವಂತೆ ಹಾಗೂ ಚುನಾವಣೆ ಸಂಹಿತೆ ಜಾರಿಗೆ ಬಂದ ಮೇಲೆ ಯಾವುದೇ ಸರಕಾರಿ ವಾಹನಗಳಲ್ಲಿ ಶಾಸಕರು ಹಾಗೂ ಸಚಿವರು ಪ್ರಯಾಣ ಮಾಡುವಂತಿಲ್ಲ. ಚುನಾವಣಾ ಪ್ರಚಾರಕ್ಕೆ ಯಾವುದೇ ಸ್ಥಳವನ್ನು ಬಳಸಿಕೊಳ್ಳುವಂತಿಲ್ಲ ಹಾಗೂ ಸರ್ಕಾರಿ ಗೃಹಗಳನ್ನು ಕೂಡ ಸಚಿವರು ಬಳಸುವಂತಿಲ್ಲ.
ಚುನಾವಣೆ ಸಂಹಿತೆ(Election Code) ಜಾರಿಗೆ ಬಂದ ನಂತರ ಸರ್ಕಾರಿ ಸಚಿವರ ಬಹುತೇಕ ಎಲ್ಲಾ ಅಧಿಕಾರಿಗಳು ಕೂಡ ಮೊಟಕುಗೊಳ್ಳುತ್ತವೆ. ಹೀಗಿದ್ದರೂ ಕೂಡ ಕೆಲವೊಂದು ಸೇವೆಗಳು ಜಾರಿಯಲ್ಲಿರುತ್ತವೆ. ಕೆಲವು ಲೋಕೋಪಯೋಗಿ ಕಾರ್ಯ ಮತ್ತು ನೀರಾವರಿ ಕಾರ್ಯಗಳ ಕೆಲಸ ಮುಂದುವರಿಯುತ್ತದೆ. ಸಂಪುಟ ಸಭೆ ಕೈಗೊಳ್ಳಬಹುದು ಆದರೆ ಯಾವುದೇ ನಿರ್ಣಯವನ್ನು ಕೈಗೊಳ್ಳುವಂತಿಲ್ಲ. ಈಗಾಗಲೇ ಜಾರಿಯಾಗಿರುವಂತಹ ಯೋಜನೆಗಳನ್ನು ಮುಂದುವರಿಸಬಹುದು ಆದರೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವ ಹಾಗಿಲ್ಲ.
ಸಚಿವರು ರಾಜ್ಯದಿಂದ ಹೊರ ಹೋಗಲು ಚುನಾವಣಾ ಆಯೋಗದ ಅಧಿಕಾರಿಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ. ಯಾವುದೇ ಜನರಿಗೆ ಅತ್ಯಂತ ಪ್ರಮುಖವಾದ ಯೋಜನೆಗಳನ್ನು ಮುಂದುವರೆಸಲು ಅಡ್ಡಿ ಇರುವುದಿಲ್ಲ ಆದರೆ ಚುನಾವಣಾ ಆಯೋಗದ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿ ಇರಲೇಬೇಕು. ರಾಜಕಾರಣಿಗಳು(Politicians) ಇನ್ನೊಬ್ಬ ನಾಯಕರ ಕೆಲಸದ ಮೇಲೆ ಟೀಕೆ ಟಿಪ್ಪಣಿ ಮಾಡಬಹುದು ಆದರೆ ಅವರ ವೈಯಕ್ತಿಕ ಹಾಗೂ ಕೋಮು ನಿಂದನೆ ಮಾಡುವುದು ನಿಶಿದ್ಧವಾಗಿದೆ. ಇನ್ನು ಯಾವುದೇ ಫ್ರೀ ಕುಕ್ಕರ್ ಹಾಗೂ ಸೀರೆಯನ್ನು ಈ ಸಂದರ್ಭದಲ್ಲಿ ಹಚ್ಚುವಂತಿಲ್ಲ. ಬಿಟ್ಟಿ ಭಾಗ್ಯಗಳನ್ನು ಕೂಡ ರಾಜಕೀಯ ಪಕ್ಷಗಳು ಆಶ್ವಾಸನೆ ರೂಪದಲ್ಲಿ ನೀಡುತ್ತಿದ್ದು ಇದಕ್ಕೆ ಕೂಡ ಲಗಾಮ್ ಹಾಕಬೇಕಾಗಿದೆ.