Karnataka Times
Trending Stories, Viral News, Gossips & Everything in Kannada

SSLC Exam: SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್

Advertisement

ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಕಳೆದ ಎರಡು ವರುಷದ ಹಿಂದೆ ಜನರ ಜೀವನ (People’s Lives) ತೂತು ಮಡಿಕೆ (Pot) ಯಂತಾಗಿದ್ದು. ಇದರ ಜೊತೆಗೆ ವಿಧ್ಯಾರ್ಥಿಗಳ (Students) ವಿಧ್ಯಾಭ್ಯಾಸಕ್ಕೂ (Education) ಕೂಡ ಸಮಸ್ಯೆಯಾಗಿತ್ತು. ಇನ್ನು SSLC ವಿದ್ಯಾರ್ಥಿಗಳನ್ನು ಕರೋನಾ (Covid) ಕಾರಣದಿಂದ ಉತ್ತೀರ್ಣರಾದರು ಎನ್ನಲಾಗಿತ್ತು. ಅಲ್ಲದೇ PUC ವಿದ್ಯಾರ್ಥಿಗಳಂತು ಪರೀಕ್ಷೆ ಬರೆಯದೇ ಉತ್ತೀರ್ಣರಾದರು. ಸದ್ಯ ಇದೀಗ ಎಲ್ಲರ ಜೀವನ ಸಹಜ ಜೀವನಕ್ಕೆ ಜಾರಿದ್ದು ಶಾಲಾ ಕಾಲೇಜುಗಳು (School Colleges) ಕೂಡ ಎಂದಿನಂತೆ ನಡೆಯುತ್ತಿದೆ. ಹೌದು ಇದೀಗ ಕರೋನಾ ಹಾಗೂ ಒಮಿಕ್ರಾನ್ ಯಾವ ಕಾಯಿಲೆಗಳಿಲ್ಲ. ಈ ನಡುವೆ ರಾಜ್ಯಾದ್ಯಂತ SSLC ಪರೀಕ್ಷೆ (Exam) ಪ್ರಾರಂಭವಾಗಿದ್ದು ಇದೀಗ SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಒಂದು ಹೊರ ಬಂದಿದೆ.

ಏನಿದು SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:

ಹೌದು ಈ ಬಾರಿ ಕೂಡ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮಂಡಳಿ ಗುಡ್ ನ್ಯೂಸ್ ನೀಡಿದ್ದು ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಇದೀಗ ಶೇ.10% ರಷ್ಟು ಗ್ರೇಸ್ ಅಂಕ ನೀಡುವುದಾಗಿ ಬೋರ್ಡ್ ತಿಳಿಸಿದೆ. ಹೌದು ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್‌ ಅಂಕ ನೀಡಲು ಬೋರ್ಡ್ ‌ಮುಂದಾಗಿದ್ದು ಭಾಷಾ ಹಾಗೂ ಕೋರ್ ವಿಷಯಗಳಿಗೆ ಮಾತ್ರ ಗ್ರೇಸ್ ಅಂಕ ಕೊಡಲಾಗುತ್ತೆ. ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಇದೀಗ ನಿರ್ದೇಶಕರು ತಿಳಿಸಿದ್ದಾರೆ. ಹೌದು ಕಳೆದ ಎರಡು ವರುಷದಿಂದ ಕೊರೊನಾ ಕಾರಣಕ್ಕೆ ಶೇ.10ರಷ್ಟು ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಸದ್ಯ ಇದೀಗ ಅದನ್ನ ಈ ವರ್ಷವೂ ಮುಂದುವರಿಸಲಾಗಿದ್ದು ಆಲ್ಲದೆ ಕಳೆದ ಎರಡು ವರ್ಷಗಳಲ್ಲಿ 8, 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ತೇರ್ಗಡೆ ಹೊಂದಿದ ಕಾರಣ ಈ ವರ್ಷವೂ ಕೂಡ ಶೇ.10ರಷ್ಟು(26 ಮಾರ್ಕ್ಸ್) ಗ್ರೇಸ್ ಮಾರ್ಕ್ಸ್ ನೀಡಲು ಇದೀಗ ಬೋರ್ಡ್ ನಿರ್ಧಾರ ತೆಗೆದುಕೊಂಡಿದೆ.

ಇನ್ನು SSLC ಪರೀಕ್ಷಾ ಕಾರ್ಯ ಪೂರ್ಣ ಗೊಳಿಸಿದ ಬೋರ್ಡ್:

ಹೌದು ಮಾರ್ಚ್ 31 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam) ಪ್ರಾರಂಭವಾಗಿದ್ದು ಮಾ. 31ರಿಂದ ಏ. 15ರ ವರೆಗೆ ಕೂಡ ಈ ಭಾರಿ ಪರೀಕ್ಷೆ ನಡೆಯಲಿದೆ. ಇನ್ನು ಈ ಬಾರಿ ಒಟ್ಟು 8.42 ಲಕ್ಷ ವಿದ್ಯಾರ್ಥಿಗಳು ಬರೆಯಲಿದ್ದಾರೆ ಎಂದು ಇದೀಗ ಎಸ್.ಎಸ್.ಎಲ್.ಸಿ ಬೋರ್ಡ್ ನಿರ್ದೇಶಕರಾದ ರಾಮಚಂದ್ರ ರವರು ಹೇಳಿದ್ದಾರೆ. ಇನ್ಮು ರಾಜ್ಯಾದ್ಯಂತ ಸುಮಾರು 3305 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದ್ದು ಇನ್ನು ಈ ಬಾರಿ ಚುನಾವಣೆ ಇರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲು ಕೂಡ ಇದೀಗ ಜಿಲ್ಲಾಧಿಕಾರಿ ಜಿಲ್ಲಾ ಎಸ್ಪಿಗೆ ಮೊದಲೇ ಸೂಚನೆ ಕೊಡಲಾಗಿದೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ರಾಮಚಂದ್ರ ರವರು ಹೇಳಿದ್ದಾರೆ. ಆಲ್ಲದೆ ಪರೀಕ್ಷಾ ಅಕ್ರಮಗಳನ್ನ ತಡೆಯಲು ಕಟ್ಟುನಿಟ್ಟಾಗಿ ಕ್ರಮ‌ ಕೈಗೊಳ್ಳಲಾಗಿದ್ದು ಊಹಾ ಪೋಹಗಳಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಿವಿಕೊಡದಂತೆ ಬೋರ್ಡ್ ‌ಮನವಿ ಮಾಡಿಕೊಂಡಿದೆ..

Leave A Reply

Your email address will not be published.