Warning For Whatsapp Admin: ಚುನಾವಣೆಗೂ ಮುನ್ನವೇ ವಾಟ್ಸಾಪ್ ಅಡ್ಮಿನ್ ಗಳಿಗೆ ಎಚ್ಚರಿಕೆ! ಈ ಕೆಲಸ ಮಾಡಲೇಬೇಡಿ

Advertisement
ಈಗಾಗಲೇ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ(Vidhanasabha Election) ದಿನಾಂಕ ಅನೌನ್ಸ್ ಆಗಿದ್ದು ಅದರ ಜೊತೆಗೇನೆ ಚುನಾವಣಾ ಸಂಹಿತೆ ಕೂಡ ಜಾರಿಯಾಗಿದೆ. ಈ ಬಾರಿ ಚುನಾವಣೆ ಮೇ 10ರಂದು ನಡೆದು ಫಲಿತಾಂಶ ಮೂರು ದಿನಗಳ ನಂತರ ಅಂದರೆ ಮೇ 13 ರಂದು ಹೊರಬರಲಿದೆ. ಹೀಗಾಗಿ ಈ ಬಾರಿ ರಾಜ್ಯದ ಚುಕ್ಕಾಣಿ ಯಾರ ತೆಕ್ಕೆಗೆ ಸಿಗಲಿದೆ ಎನ್ನುವ ಮಾಹಿತಿ ನಾಲ್ಕು ದಿನಗಳ ಒಳಗೆ ತಿಳಿದು ಬರಲಿದೆ. ಇದರ ಬೆನ್ನಲ್ಲೇ ಚುನಾವಣೆ ಸಂಹಿತೆ ಉಲ್ಲಂಘನೆ ಆಗದಂತೆ ಹಲವಾರು ನಿಯಮಗಳನ್ನು ಕೂಡ ಜಾರಿಗೆ ತರಲಾಗಿದೆ.
ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಕ್ಕೆ ಕೂಡ ಒಳಗಾಗಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಅದರಲ್ಲಿಯೂ ವಿಶೇಷವಾಗಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್(Social Media Platform) ಗಳಲ್ಲಿ ಕೆಲವೊಂದು ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಾಕುವ ಮೂಲಕ ಚುನಾವಣೆ ಪ್ರಚಾರ ಮಾಡುವಂತಹ ಗುಂಪು ಕೂಡ ಇದೆ. ಹೀಗಾಗಿ ಆಯೋಗ ಇದರ ಕುರಿತಂತೆ ಹದ್ದಿನ ಕಣ್ಣನ್ನು ನೆಟ್ಟಿದೆ. ಯಾವುದೇ ಒಂದು ಅಹಿತಕರ ಘಟನೆಗಳನ್ನು ಸೃಷ್ಟಿಸುವಂತಹ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ವಾಟ್ಸಾಪ್ನಲ್ಲಿ ಕೂಡ ಹರಿದು ಬಂದರೆ ಅದರ ವಿರುದ್ಧವಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಳ್ಳಲಾಗುತ್ತದೆ.
ಅನುಮತಿ ಪಡೆಯದೆ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ವಾಟ್ಸಾಪ್ನಲ್ಲಿ ಮೆಸೇಜ್ ರೂಪದಲ್ಲಿ ಕಳುಹಿಸಲು ಕೂಡ ಆಯೋಗದ ಅನುಮತಿ ಇರಲೇಬೇಕು ಇಲ್ಲದಿದ್ದಲ್ಲಿ ಗ್ರೂಪಿನ ಅಡ್ಮಿನ್ಗೆ ನೋಟಿಸ್ ಅನ್ನು ಚುನಾವಣೆ ಆಯೋಗ ಕಳುಹಿಸುತ್ತದೆ. ಈಗಾಗಲೇ ಇದಕ್ಕೆ ಮೊದಲ ಬೇಟೆಯಾಗಿ ಕೊಡಗು(Kodagu) ಮೂಲದ ವಿಪಿ ಶಶಿಧರ್ ಅವರಿಗೆ ನೋಟಿಸ್ ನೀಡಲಾಗಿದ್ದು, ಅವರು ಚುನಾವಣೆ ಪ್ರೇರಿತ ಸಂಹಿತೆ ಉಲ್ಲಂಘನೆ ಆಗುವಂತಹ ವಿಡಿಯೋ ತುಣುಕನ್ನು ಹಂಚಿಕೊಂಡಿರುತ್ತಾರೆ. ಚುನಾವಣಾ ಕಾಯ್ದೆ 1951ರ ಅಡಿ ಅವರ ಮೇಲೆ ಯಾಕೆ ಕಾನೂನು ಕ್ರಮವನ್ನು ಜರುಗಿಸಬಾರದು ಎನ್ನುವುದಕ್ಕಾಗಿ ಲಿಖಿತ ಸಮಜಾಯಿಸಿಯನ್ನು ನೀಡಬೇಕು ಎಂಬುದಾಗಿ ಆಯೋಗ ಕೋರಿದೆ.
ಒಂದು ವೇಳೆ ವಿಪಿ ಶಶಿಧರ್ ರವರು ಈ ಕುರಿತಂತೆ ಯಾವುದೇ ಲಿಖಿತ ಸಮಜಾಯಿಶಿಯನ್ನು 24 ಗಂಟೆಗಳ ಒಳಗಾಗಿ ನೀಡದಿದ್ದಲ್ಲಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಳ್ಳಲು ಚುನಾವಣಾ ಆಯೋಗ(Election Committee) ಸಿದ್ದವಾಗಿ ನಿಂತಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ಇಂತಹ ಕಾರ್ಯಕ್ಕೆ ಮುಂದಾಗುವ ಮುನ್ನ ಈ ವಿಚಾರದ ಕುರಿತಂತೆ ಯೋಚಿಸುವುದು ಒಳ್ಳೆಯದು.