Karnataka Times
Trending Stories, Viral News, Gossips & Everything in Kannada

Amritpal Singh: ಪಂಜಾಬ್ ಪೊಲೀಸ್ ಹುಡುಕುತ್ತಿರುವ ಅಮೃತ್ಪಾಲ್ ಸಿಂಗ್ ಯಾರು? ಇಲ್ಲಿದೆ ವರದಿ

ಒಂದು ಕಾಲದಲ್ಲಿ ಇಂದಿರಾಗಾಂಧಿ(Indira Gandhi) ಅವರು ಭಾರತದ ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಪಂಜಾಬ್ ನಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಿಂಡ್ರನ್ ವಾಲೆ ಎನ್ನುವ ಖಾಲಿ ಪ್ರತ್ಯೇಕವಾಗಿ ಹೋರಾಟಗಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ. ಈತನ ಹಾವಳಿ ಯಾವ ರೀತಿ ಇತ್ತು ಎಂದರೆ ಕೊನೆಗೆ ಈತನ ಕಾಟವನ್ನು ತಡೆಯಲಾರದೆ ಪ್ರಧಾನ ಮಂತ್ರಿ ಆಗಿರುವ ಇಂದಿರಾಗಾಂಧಿ ಅವರೇ ಆಪರೇಷನ್ ಬ್ಲೂ ಸ್ಟಾರ್(Operation Blue Star) ಮೂಲಕ ಆತನನ್ನು ಮುಗಿಸಬೇಕಾಗಿ ಬಂತು. ಆದರೆ ಕಲಿಸ್ತಾನ ಪ್ರತ್ಯೇಕವಾದ ಇನ್ನೂ ಕೂಡ ಮುಗಿದಿಲ್ಲ ಪಂಜಾಬಿನಲ್ಲಿ ಮತ್ತೊಬ್ಬ ಭಿಂಡ್ರನ್ ವಾಲೆ(Bhindran Wale) ಎದ್ದಿದ್ದಾನೆ.

Advertisement

ಹೌದು ನಾವ್ ಮಾತನಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಪಂಜಾಬ್ ನಲ್ಲಿ ವಾರೀಸ್ ಪಂಜಾಬ್ ದೇ (Varis Punjab De) ಸಂಘಟನೆಯ ಮೂಲಕ ಇಡೀ ಪಂಜಾಬ್ ಪ್ರಾಂತ್ಯದಲ್ಲಿ ಖಲಿಸ್ತಾನಿ ಪ್ರತ್ಯೇಕವಾದದ ಕಿ’ ಡಿಯನ್ನು ಹತ್ತಿಸಿರುವ ಅಮೃತ್ಪಾಲ್ ಸಿಂಗ್ (Amrithpal Singh) ಅವರ ಕುರಿತಂತೆ. ತನ್ನ ಸಹಚರನನ್ನು ಬಂಧಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಪೊಲೀಸ್ ಠಾಣೆಗೆ ನುಗ್ಗಿ ಅಲ್ಲಿನ ಪೊಲೀಸ್ ಸಿಬ್ಬಂದಿಗಳನ್ನು ಥಳಿಸಿ ಅಮೃತ್ಪಾಲ್ ಸಿಂಗ್ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದ. ಈತ ದುಬೈನಲ್ಲಿ ನೆಲೆಸಿದ್ದು ಇತ್ತೀಚಿಗಷ್ಟೇ ತನ್ನ ಕುಟುಂಬದ ಟ್ರಾನ್ಸ್ಪೋರ್ಟ್ ವ್ಯವಹಾರವನ್ನು ನೋಡಿಕೊಳ್ಳಲು ಭಾರತಕ್ಕೆ ಬಂದವನು ಅಚಾನಕ್ಕಾಗಿ ಖಲಿಸ್ತಾನಿ ಸಂಘಟನೆಯನ್ನು ವ್ಯಾಪಕವಾಗಿ ಬೆಳೆಸುತ್ತಿದ್ದಾನೆ.

Advertisement

ಪಂಜಾಬ್ ನ ಜಲ್ಲುಪಾರ್(Jallupar) ನಲ್ಲಿ ಜನಿಸಿರುವಂತಹ ಅಮೃತ್ಪಾಲ್ ಸಿಂಗ್ ಇತ್ತೀಚಿನ ದಿನಗಳಲ್ಲಿ ತನ್ನನ್ನು ತಾನು ಭಿಂಡ್ರನ್ ವಾಲೆ ಹಾದಿಯಲ್ಲಿ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದು ಮೂಲಗಳ ಪ್ರಕಾರ ಪಾಕಿಸ್ತಾನದ ಐಎಸ್ಐ ಈತನ ಖಲಿಸ್ತಾನಿ ಪ್ರತ್ಯೇಕವಾದದ ನೀತಿಗೆ ಬೆಂಬಲವನ್ನು ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಭಾರತದ ಬಹುತೇಕ ಎಲ್ಲಾ ಬೇಹುಗಾರಿಕಾ ಸಂಸ್ಥೆಗಳು ಕೂಡ ಈತನ ಚಲನ ವಲನಗಳ ಮೇಲೆ ದೃಷ್ಟಿಯನ್ನು ಇಟ್ಟಿವೆ.

Advertisement

ಈಗಾಗಲೇ ಪಂಜಾಬ್ ನಲ್ಲಿ ನಡೆಯುತ್ತಿರುವಂತಹ ಬಹುತೇಕ ಎಲ್ಲಾ ದಂಗೆಗಳಿಗೂ ಕೂಡ ಈತನ ಹೆಸರೇ ಪ್ರಮುಖ ಕಾರಣವಾಗಿ ಕೇಳಿ ಬರುತ್ತಿದೆ. ಪಂಜಾಬ್ ರಾಜ್ಯದ(Punjab State) ಗೃಹ ಮಂತ್ರಿಗಳ ವಿರುದ್ಧವಾಗಿ ಕೂಡ ಅಮೃತ್ಪಾಲ್ ಸಿಂಗ್ ನಿರ್ಭೀತಿಯಿಂದ ಬೆದರಿಕೆಯನ್ನು ಹಾಕಿದ್ದು ಈ ವಿವಾದಕ್ಕೆ ಇನ್ನಷ್ಟು ತುಪ್ಪವನ್ನು ಸುರಿದಂತಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ಕುರಿತಂತೆ ಅಮೃತ್ಪಾಲ್ ಸಿಂಗ್ ವಿಚಾರದಲ್ಲಿ ಭಾರತದ ಬೇಹುಗಾರಿಕಾ ಸಂಸ್ಥೆಗಳು ಯಾವ ರೀತಿಯ ಕಾರ್ಯಾಚರಣೆಯನ್ನು ಮಾಡಲಿ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.