Karnataka Times
Trending Stories, Viral News, Gossips & Everything in Kannada

Areca Nut Farming: ಕೇವಲ 160-200ರೂ. ಖರ್ಚಿನಲ್ಲಿ ಒಂದು ಎಕರೆ ಅಡಿಕೆ ತೋಟದ ಕಳೆ ತೆಗೆಯಬಹುದು ಹೇಗೆ ಗೊತ್ತಾ?

Advertisement

ಯಾವುದೇ ಕೃಷಿಯನ್ನು ಮಾಡುದಿದ್ದರು ಅದರಲ್ಲಿ ಕೃಷಿಯ ನಿರ್ವಹಣೆ ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವ ಹಾಗೂ ಮುಖ್ಯವಾಗಿರುವ ವಿಷಯ. ನೀವು ಬೆಳೆದ ಬೆಳೆಯ ನಿರ್ವಹಣೆ ನಿಮಗೆ ಮಾಡಲು ಗೊತ್ತಿಲ್ಲದೆ ಇದ್ದಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ ಜೊತೆಗೆ ಅಧಿಕ ಇಳುವರಿ ಪಡೆದುಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಅಡಿಕೆ ಕೃಷಿಯಲ್ಲಿಯೇ ನೋಡುವುದಾದರೆ ಅತಿ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಮಾಡುವುದನ್ನು ತಿಳಿದುಕೊಂಡಿರಬೇಕು ಇಲ್ಲವಾದರೆ ವಾರ್ಷಿಕ ಬೆಳೆಗಿಂತಲೂ ಖರ್ಚೆ ಹೆಚ್ಚಾಗಿ ಬಿಡುತ್ತದೆ.

ಕಡಿಮೆ ಖರ್ಚಿನಲ್ಲಿ ಕಳೆ ತೆಗೆಯುವುದು:

ಭೂಮಿಗೆ ಮೊದಲ ಮಳೆ ಬಿದ್ದಾಗ ಅಡಿಕೆ ತೋಟಕ್ಕೆ ಗೊಬ್ಬರವನ್ನು ಹಾಕಿಸಬೇಕು. ಅಡಿಕೆ ತೋಟಕ್ಕೆ ಗೊಬ್ಬರವನ್ನು ಹಾಕಿಸಲು ಬಹಳ ಮುಖ್ಯವಾಗಿರುವ ವಿಚಾರ ಅಂದ್ರೆ ತೋಟದಲ್ಲಿ ಇರುವ ಕಳೆಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅಡಿಕೆ ಮರ ಅಥವಾ ಗಿಡದ ಬುಡದಲ್ಲಿ ಗೊಬ್ಬರವನ್ನು ಹಾಕುವಾಗ ಬಹಳ ಹತ್ತಿರದಲ್ಲಿ ಹಾಕುವುದಿಲ್ಲ ಬುಡಕ್ಕಿಂತ ಸ್ವಲ್ಪ ದೂರದಲ್ಲಿ ಗೊಬ್ಬರವನ್ನು ಹಾಕಿ ನಂತರ ಮಣ್ಣಿನಿಂದ ಅದನ್ನ ಮುಚ್ಚಲಾಗುತ್ತದೆ. ಹಾಗಾಗಿ ಅಡಿಕೆ ಬುಡವನ್ನು ಯಾವುದೇ ಕಳೆ ಇಲ್ಲದಂತೆ ಸ್ವಚ್ಛಗೊಳಿಸಿಕೊಳ್ಳುವುದು ಬಹಳ ಮುಖ್ಯ.

ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ಇದು ದುಬಾರಿ ದುನಿಯಾ, ಒಂದು ಎಕರೆ ಜಮೀನಿನಲ್ಲಿ ಕಳೆ ಕೀಳಿಸಲು ಟ್ಯಾಕ್ಟರ್ ಓಡಿಸಬೇಕು ಅಥವಾ ಆಳುಗಳನ್ನು ಕರೆಸಿ ಕಳೆ ಕೀಳಿಸಬೇಕು. ಇದಕ್ಕೆ ಬಹಳ ವೆಚ್ಚ ತಗಲುತ್ತದೆ ಒಂದು ಆಳಿಗೆ ದಿನಕ್ಕೆ 200 ರಿಂದ 500 ರೂಪಾಯಿಗಳವರೆಗೆ ಸಂಬಳ ಕೊಡಬೇಕಾಗುತ್ತದೆ. ಹಾಗಾಗಿ ಒಂದು ಎಕರೆ ಜಮೀನಿನಲ್ಲಿ ಇರುವ ಕಳೆ ಕೀಳಿಸುವುದಾದರೆ ನೀವು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಕೇವಲ ನೂರರಿಂದ 150 ರೂಪಾಯಿಗಳಲ್ಲಿ ಒಂದು ಎಕರೆ ತೋಟದ ಕಡೆ ಯನ್ನು ಸುಲಭವಾಗಿ ಕೇಳಬಹುದು ಹೇಗೆ ಗೊತ್ತಾ?

ವೀಡ್ ಕಟರ್

ಕೆಲಸದವರಿಗೆ ಸಂಬಳ ಕೊಟ್ಟು ಕಳೆ ಕೀಳಿಸುವುದು ಅಷ್ಟು ಸುಲಭವಲ್ಲ. ಒಮ್ಮೊಮ್ಮೆ ಕಳೆ ಸ್ವಚ್ಛವಾಗುವುದು ಇಲ್ಲ ಅದಕ್ಕಾಗಿ ನೀವು ವೀಡ್ ಕಟರ್ ಬಳಸುವುದು ಉತ್ತಮ. ಇದಕ್ಕೆ ಹೆಚ್ಚು ಜನರ ಅಗತ್ಯವಿಲ್ಲ. ಒಬ್ಬನೇ ಒಬ್ಬ ವ್ಯಕ್ತಿ ವಿಡ್ ಕಟರ್ ನಿಂದ ಕಳೆ ತೆಗೆಯಬಹುದು. ನಿಮಗೆ ಸ್ವಂತವಾಗಿ ವೀಡ್ ಕಟರ್ ಬಳಸುವುದು ಗೊತ್ತಿದ್ದರೆ ನಿಮ್ಮ ಇಡೀ ತೋಟದಲ್ಲಿ ಇರುವ ಕಳೆಯಲು ಒಂದೇ ಒಂದು ರೂಪಾಯಿ ಹೆಚ್ಚುವರಿ ಖರ್ಚು ಇಲ್ಲದೆ ಕಳೆ ಕತ್ತರಿಸಬಹುದು.

ವೀಡ್ ಕಟರ್ ಯಂತ್ರ ನಿಮ್ಮದೇ ಆಗಿದ್ದರೆ ಆಗ ಖರ್ಚು ಬಹಳ ಕಡಿಮೆ ಇದನ್ನ ಬಾಡಿಗೆ ತೆಗೆದುಕೊಂಡು ಬಂದರೆ ವೆಚ್ಚ ತುಸು ಅಧಿಕವಾಗಬಹುದು. ವಿಡ್ ಕಟರ್ ಪೆಟ್ರೋಲ್ ಹಾಕಿ (ಇಲೆಕ್ಟ್ರಿಕ್ ಕೂಡ ಇದೆ) ಕೈಯಲ್ಲಿಯೇ ಓಡಿಸಬಹುದಾದ ಯಂತ್ರವಾಗಿದ್ದು, ಸುಲಭವಾಗಿ ಕಳೆಯನ್ನು ಕತ್ತರಿಸಿಬಿಡುತ್ತದೆ.

ಗಮನಿಸಿ

ವಿಡ್ ಕಟರ್ ನ ಬ್ಲೇಡ್ ಗಳು ಬಹಳ ಶಾರ್ಪ್ ಆಗಿರುತ್ತದೆ ಹಾಗಾಗಿ ಗಿಡದ ಹತ್ತಿರ ಹೋಗಿ ಕಳೆ ಕೀಳುವಾಗ ಕಟರ್ ಅನ್ನು ಸ್ವಲ್ಪ ಅಡ್ಡವಾಗಿ ಇಟ್ಟು ಕತ್ತರಿಸಬೇಕು. ಗಿಡದ ಸಮಾನವಾಗಿ ಕಟರ್ ಅನ್ನು ಬಳಸಿದರೆ ಗಿಡಕ್ಕೆ ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ವಿಡ್ ಕಟರ್ ಯಂತ್ರವನ್ನು ಬಳಸಲು ಕಲಿತರೆ ನಿಮಗೆ ಇಡೀ ತೋಟದ ಕಲೆಯನ್ನು ನೀವು ಒಬ್ಬರೇ ತೆಗೆಯಲು ಸಾಧ್ಯವಾಗುತ್ತದೆ ಅಥವಾ ಒಬ್ಬನೇ ಒಬ್ಬ ಆಳನ್ನು ಕರೆಯಿಸಿ ಕೂಡ ತೋಟದ ಕಳೆ ತೆಗೆಯಬಹುದು.

ತೋಟದಲ್ಲಿ ಸ್ವಲ್ಪವೇ ಸ್ವಲ್ಪ ಕಳೆ ಬೆಳೆಯುತ್ತಿದ್ದ ಹಾಗೆ ವೀಡ್ ಕಟರ್ ನಿಂದ ಆಗಾಗ ಕಳೆಯ ಸ್ವಚ್ಛಗೊಳಿಸುತ್ತಿದ್ದರೆ ತೋಟದಲ್ಲಿ ಕಳೆ ಇರುವುದಿಲ್ಲ ನಿಮಗೆ ಗೊಬ್ಬರ ಹಾಕುವ ಸಂದರ್ಭದಲ್ಲಿ ಸಮಸ್ಯೆಯೂ ಆಗುವುದಿಲ್ಲ.

1 Comment
  1. John says

    ಕೀತೋಗಿದ್ದು ಐಡಿಯಾ

Leave A Reply

Your email address will not be published.