Areca Nut: ಕರ್ನಾಟಕದಲ್ಲಿ ಅಡಿಕೆ ಬೆಳೆದವರಿಗೆ ಆಘಾತ! ಕೇಂದ್ರದ ಹೊಸ ನಿರ್ಧಾರ

Advertisement
ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಅಡಿಕೆ (Areca Nut) ಧಾರಣೆ ಕುಸಿತ ಕಂಡಿದೆ. ಹೌದು ಅಡಿಕೆ ಬೆಳೆಗಾಗರು ಅಡಿಕೆ ತಾಗುತ್ತಿರುವ ರೋಗಗಳಿಂದ ಅಡಿಕೆ ಬೆಳೆ ಹಾಳಾಗುತ್ತಿದೆ ಎಂದು ಒಂದು ಕಡೆ ಆತಂಕದಲ್ಲಿ ಇದ್ದರೆ ಮತ್ತೊಂದು ಕಡೆ ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ಎದುರಾಗಿದೆ. ಹೌದು ಕೇಂದ್ರ ಸರ್ಕಾರ ಬುತಾತ್ನಿಂದ ಅಡಿಕೆ ಆಮದು ಮಾಡಿಕೊಂಡಿದ್ದು. ಇದರಿಂದ ಅಡಿಕೆ ತೋಟಗಳಲ್ಲಿ ಮೌನ ಅವರಿಸುತ್ತಿದೆ. ಕಾರಣ ಅಡಿಕೆ ದರ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅಡಿಕೆ ನಾಡು ಎಂದೇ ಪ್ರಸಿದ್ಧಿ ಪಡೆದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಇದೀಗ ಆತಂಕ ಮನೆ ಮಾಡಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಅಡಿಕೆ (Areca Nut) ಬೆಳೆಯುವ ತಾಲೂಕು ಚನ್ನಗಿರಿ. ಒಂದು ತಿಂಗಳಿಂದ ಸರಾಸರಿ ಪ್ರತಿ ಕ್ವಿಂಟಾಲ್ ಅಡಿಕೆ 50 ರಿಂದ 55 ಸಾವಿರ ರೂ. ದರ. ಕೇಂದ್ರ ಸರ್ಕಾರ ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಂಡಿದೆ. ಭೂತಾನ್ನಿಂದ ಅಡಿಕೆ ಬರುತ್ತಿದ್ದಂತೆ ಒಂದೇ ದಿನದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಎರಡು ಸಾವಿರ ರೂಪಾಯಿ ಕುಸಿತ ಕಂಡಿದೆ. ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಅಡಿಕೆ ಬೆಳೆಯಲಾಗುತ್ತಿದೆ. ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲಿ ಕೂಡ ಅಡಿಕೆ ಬೆಳೆಯಲಾಗುತ್ತಿದ್ದು, ಬೆಲೆ ಕುಸಿತವಾದ ಹಿನ್ನೆಲೆ ರೈತರು ಆತಂಕದಲ್ಲಿದ್ದಾರೆ.
ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದರ ಸರಾಸರಿ 50 ರಿಂದ 55 ಸಾವಿರ ಬದಲು ಅಡಿಕೆ ಕನಿಷ್ಟ 42,810 ರಿಂದ ಗರುಷ್ಠ 52,012ಕ್ಕೆ ಸರಾಸರಿ 49,627ಕ್ಕೆ ಕುಸಿತವಾಗಿದೆ. ಭೂತಾನ್ ಅಡಿಕೆ ಆಮದು ಹಿನ್ನೆಲೆ ಅಡಿಕೆ ದರ ಕುಸಿಯುತ್ತಿದ್ದು, ಇನ್ನಷ್ಟು ದರ ಕುಸಿಯುವ ಭೀತಿ ಎದುರಾಗಿದ್ದರಿಂದ ತುರ್ತಾಗಿ ಅಡಿಕೆ ಕೊಯ್ಲು ಆರಂಭಿಸಲಾಗಿದೆ. ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ರೈತರು ಈ ಮೊದಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಅಡಿಕೆ ಎನ್ನುವುದು ಬೆಳೆಗಾರರಿಂದ ಮೊದಲಾಗಿ ಕೂಲಿ ಕಾರ್ಮಿಕರು, ಸರಕು ಸಾಗಾಣೆ, ಮಾರಾಟ, ಉದ್ಯಮ ಸೇರಿದಂತೆ ಪ್ರತ್ಯಕ್ಷ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದೆ. ಸರ್ಕಾರ ಇದನ್ನು ಇದೆಲ್ಲವನ್ನು ಪರಿಗಣಿಸಬೇಕು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಸಾವಿರದ ಮೂರು ನೂರಾ ಎಂಬತ್ತೈದು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮರಗಳನ್ನ ರೈತರು ನೀರು ಇಲ್ಲದ ಕಾರಣಕ್ಕೆ ಕಡಿದು ಹಾಕಿದ್ದಾರೆ. ಇದರಿಂದ ಸುಮಾರು 14,562 ಟನ್ ನಷ್ಟು ಅಡಿಕೆ ಇಳುವರಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 38,989 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇತ್ತು. ಪ್ರತಿ ವರ್ಷ 62,568 ಟನ್ ಅಡಿಕೆ ಇಳುವರಿ ಬರುತ್ತಿತ್ತು. ನೀರಿನ ಕೊರೆತೆ ನಾನಾ ರೋಗಗಳ ಭೀತಿ ಕೂಡ ಎದುರಾಗಿದೆ. ಅಡಿಕೆ ಮರ ನಿರ್ವಹಣೆ ರೈತರಿಗೆ ಕಷ್ಟವಾಗಿತ್ತು. ವಿದೇಶಗಳಲ್ಲಿ ಅಡಿಕೆ ತರಿಸುವುದರಿಂದ ಯಾವುದೇ ತೊಂದರೆ ಸದ್ಯಕ್ಕಂತು ಇಲ್ಲವೇ ಇಲ್ಲಾ. ಕಾರಣ ಬೇಡಿಕೆ ಹಾಗೂ ಉತ್ಪಾದನೆಗೆ ತಕ್ಕಂತೆ ಇದೆ. ಜೊತೆಗೆ ವಿದೇಶದಿಂದ ಅಡಿಕೆ ತರಲು ಶುಲ್ಕ ಸಹ ಹೆಚ್ಚು ವಿಧಿಸಲಾಗಿದೆ.