Leaf Spot Disease: ಅಡಿಕೆ ಬೆಳೆಗಾರರಿಗೆ ಸವಾಲ್ ಆಗಿರುವ ಬ್ಯಾಕ್ಟೀರಿಯಾ ಎಲೆ ಚುಕ್ಕಿ ರೋಗದ ನಿಯಂತ್ರಣ ಹೇಗೆ?
ಮಲೆನಾಡು ಭಾಗದ ರೈತರು ಈ ಒಂದು ರೋಗದಿಂದ ತತ್ತರಿಸಿ ಹೋಗಿದ್ದಾರೆ. ಎಷ್ಟೋ ತೋಟಗಳು ಕೂಡ ಈ ರೋಗದಿಂದಾಗಿ ನಾಶವಾಗುತ್ತಿದೆ .ಅಡಿಕೆ ಬೆಳೆಗಾರರು ಇಷ್ಟು ವರ್ಷ ಬೆಳೆದುಕೊಂಡು ಬಂದ ಅಡಿಕೆ ಕೃಷಿ ಒಂದೇ ಸಲಕ್ಕೆ ಹಾಳಾಗುತ್ತಿದೆ ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಅಡಿಕೆ ಬೆಳೆಗಾರರಿಗೆ ದೊಡ್ಡ ಸವಾಲ್ ಆಗಿರುವ ರೋಗ ಬ್ಯಾಕ್ಟೀರಿಯಾ ಎಲೆ ಚುಕ್ಕೆ ರೋಗ.
ಏನಿದು ಬ್ಯಾಕ್ಟೀರಿಯಾ ಎಲೆ ಚುಕ್ಕೆ ರೋಗ?
ಈವರೆಗೆ ಅಡಿಕೆ ತೋಟದಲ್ಲಿ ನುಸಿ ರೋಗ ಅಥವಾ ಕೊಳೆ ರೋಗದ ಬಗ್ಗೆ ನೀವು ಕೇಳಿರಬಹುದು ಆದರೆ ಈಗ ಎಲೆ ಚುಕ್ಕೆ ರೋಗ ಎನ್ನುವುದು ಅಡಿಕೆ ತೋಟವನ್ನು ಬಹುವಾಗಿ ಬಾಧಿಸುತ್ತಿದೆ. ಇದನ್ನು ನಿಯಂತ್ರಣ ಮಾಡಲು ಕೂಡ ರೈತರಿಗೆ ಸರಿಯಾಗಿ ಆಗುತ್ತಿಲ್ಲ ಈ ರೋಗ ಬರಲು ಮುಖ್ಯವಾದ ಕಾರಣ ಮಣ್ಣಿನಲ್ಲಿ ಬ್ಯಾಕ್ಟೀರಿಯಾ ಗಳು ಬೆಳೆಯುತ್ತವೆ ಇಂದು ಹೆಚ್ಚುತ್ತಿರುವ ತಾಪಮಾನದಿಂದಾಗಿ ಹೆಚ್ಚು ಸಮಯ ಮಣ್ಣಿನಲ್ಲಿ ಉಳಿದುಕೊಳ್ಳುತ್ತದೆ ಇದರಿಂದಾಗಿ ಅಡಿಕೆ ಗಿಡವನ್ನು ನಾಶ ಮಾಡುತ್ತವೆ.
ಎಲೆ ಚುಕ್ಕೆ ರೋಗದ ಲಕ್ಷಣಗಳು:
ಮೊದಲನೆಯದಾಗಿ ಅಡಿಕೆ ಗಿಡದ ಅಥವಾ ಮರದ ಕೆಳಭಾಗದ ಎಲೆ ಅಂದರೆ ಕೊನೆಯ ಲೇಯರ್ ನಲ್ಲಿ ಇರುವ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ ಕ್ರಮೇಣ ಅದು ಕೆಂಪು ಬಣ್ಣಕ್ಕೆ ತಿರುಗಿ ಮರದಲ್ಲಿ ಇರುವ ಎಲ್ಲಾ ಎಲೆಗಳು ಕೂಡ ಹಸಿರು ಬಣ್ಣವನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಇದನ್ನು ನೋಡುವುದಕ್ಕೆ ಬಿಸಿಲಿನಿಂದ ಸುಟ್ಟು ಹೋಗಿರುವ ಎಲೆಗಳಂತೆ ಕಾಣುತ್ತವೆ. ಇರುವ ಕಾಣಿಸಿಕೊಂಡ ತಕ್ಷಣ ನಿರ್ವಹಣೆ ಮಾಡದೇ ಇದ್ದಲ್ಲಿ ಸುಳಿ ಎಲೆಗೂ ಕೂಡ ಈ ರೋಗ ಹರಡುತ್ತದೆ. ಹೀಗಾದರೆ ಸಂಪೂರ್ಣವಾಗಿ ಅಡಿಕೆ ಗಿಡ ಅಥವಾ ಮರ ನಾಶವಾಗಿ ಬಿಡುತ್ತದೆ ಇದರಿಂದ ಯಾವುದೇ ಫಸಲು ಕೂಡ ತೆಗೆಯಲು ಸಾಧ್ಯವಿಲ್ಲ.
ಎಲೆ ಚುಕ್ಕೆ ರೋಗದ ನಿಯಂತ್ರಣ:
ಮೊಟ್ಟಮೊದಲನೆಯದಾಗಿ ತೋಟದಲ್ಲಿ ಅದರಲ್ಲೂ ಅಡಿಕೆ ಗಿಡದ ಬುಡದಲ್ಲಿ ಹಸಿರು ಎಲೆಗಳಿಂದ ಮುಚ್ಚಬೇಕು. ನಮ್ಮ ತೋಟದಲ್ಲಿ ಹಸಿರು ಹೆಚ್ಚಾಗಿ ಇದ್ದಾಗ ವಾತಾವರಣದಲ್ಲಿ ಏರಿಕೆಯಾಗುವ ಬಿಸಿ ತೋಟಕ್ಕೆ ಅಷ್ಟು ಪರಿಣಾಮ ಬೀರದಂತೆ ಕಾಪಾಡಿಕೊಳ್ಳಬಹುದು.ಎಲೆ ಚುಕ್ಕೆ ರೋಗ ಕಾಣಿಸಿಕೊಂಡರೆ ಮೊದಲ ಹಂತದಲ್ಲಿಯೇ ಇದಕ್ಕೆ ಸಿಂಪಡನೆ ಮಾಡಬೇಕಾಗುತ್ತದೆ. ಅದಕ್ಕೆ ಉತ್ತಮವಾಗಿರುವ ಸಿಂಪಡಣೆ ಅಂದರೆ ಕಾಪರ್ ಆಕ್ಸಿ ಕ್ಲೋರೈಡ್ ಶಿಲೀಂದ್ರ ನಾಶಕವನ್ನು ಒಂದು ಲೀಟರ್ ನೀರಿಗೆ ಮೂರು ಗ್ರಾಂ ನಂತೆ ಮಿಶ್ರಣ ಮಾಡಿ ಅದರ ಜೊತೆಗೆ ಬ್ಯಾಕ್ಟೀರಿಯಾ ನಾಶಕವನ್ನು (ಅರ್ಧ ಗ್ರಾಂ) ಕೂಡ ಬಳಸಿ ಎಲೆ ಚುಕ್ಕೆ ರೋಗ ಬಂದು ಗಿಡಗಳಿಗೆ ಸಿಂಪಡಣೆ ಮಾಡಬೇಕು.
ಇನ್ನು ಈ ಸಿಂಪಡಣೆಯನ್ನು ಬೆಳಿಗ್ಗೆ 6 ಗಂಟೆಯಿಂದ ಬೆಳಗ್ಗೆ 11 ಗಂಟೆಯ ಒಳಗೆ ಮಾಡಿ ಮುಗಿಸಬೇಕು. ಅಂದರೆ ಸೂರ್ಯನ ಕಿರಣ ಗಿಡವನ್ನು ಸುಡುವುದಕ್ಕೂ ಮೊದಲು ಸಿಂಪಡಣೆ ಮಾಡಬೇಕು. ಎಲೆ ಚುಕ್ಕಿ ರೋಗ ಬಂದಿರುವ ಎಲೆಗಳಿಗೆ ಹಾಗೂ ಆ ಗಿಡದ ಸುಳಿಗಳಿಗೂ ಕೂಡ ಸಿಂಪಡಣೆ ಮಾಡಬೇಕು. ಎಲೆ ಚುಕ್ಕಿ ರೋಗ ಈ ರೀತಿ ಮಾಡಿದರೆ ನಿಯಂತ್ರಣಕ್ಕೆ ಬರುತ್ತದೆ ಅಥವಾ ಈ ರೋಗ ಇನ್ನು ಉಲ್ಬಣ ಗೊಂಡರೆ 20 ರಿಂದ 25 ದಿನಗಳ ನಂತರ ಮತ್ತೆ ಇದೇ ರೀತಿ ಸಿಂಪಡಣೆ ಮಾಡಬೇಕಾಗುತ್ತದೆ. ಎಲ್ಲಿ ಚುಕ್ಕೆ ರೋಗ ಗಂಭೀರವಾದ ಸಮಸ್ಯೆಯಾಗಿದ್ದು ಅದನ್ನು ಆರಂಭದಲ್ಲಿ ನಿರ್ವಹಣೆ ಮಾಡದೇ ಇದ್ದಲ್ಲಿ ಅಡಿಕೆ ತೋಟದ ಬೆಳೆಯನ್ನು ನಾಶಪಡಿಸಬಹುದು. ಹಾಗಾಗಿ ಅಡಿಕೆ ಬೆಳೆಗಾರರು ಬಹಳ ಮುತುವರ್ಜಿಯಿಂದ ಈ ರೋಗವನ್ನು ನಿಯಂತ್ರಣದಲ್ಲಿಡಬೇಕು.