Gruha Lakshmi: ಗೃಹಲಕ್ಷ್ಮಿ ಯೋಜನೆಯ 2000 ನಿಮ್ಮ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ತಿಳಿದುಕೊಳ್ಳುವುದು ಹೇಗೆ?

Advertisement
ಕಾಂಗ್ರೆಸ್(Congress) ಸರ್ಕಾರ ಅಂತೂ ತನ್ನ ನಾಲ್ಕನೇ ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಬಹು ನಿರೀಕ್ಷಿತ ಯೋಜನೆ ಇದಾಗಿದ್ದು ಮೊನ್ನೆ ಅಂದರೆ ಆಗಸ್ಟ್ 30ನೇ ತಾರೀಕಿನಂದು ಮೈಸೂರಿನ ಕಾಲೇಜು ಮೈದಾನದಲ್ಲಿ ಮಾನ್ಯ ಮುಖ್ಯಮಂತ್ರಿ ಅವರನ್ನು ಒಳಗೊಂಡ ತಂಡ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ, ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ 2,000 ರೂ. ಗಳನ್ನು ಜಮಾ ಮಾಡುತ್ತಿದೆ.
ಸಾಕಷ್ಟು ಜನರ ಖಾತೆಗೆ ಬಂದಿದೆ ಹಣ
ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ(Gruha Lakshmi Yojane) ಬಹುತೇಕ ಯಶಸ್ವಿಯಾಗಿದೆ ಈಗಾಗಲೇ ಕೋಟ್ಯಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿದ್ದು ಲಕ್ಷಾಂತರ ಜನರ ಖಾತೆಗೆ ಈಗಾಗಲೇ ಹಣ ಬಂದಿದೆ. ಇನ್ನು ಸೆಪ್ಟೆಂಬರ್ 5ರ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ 2000 ವರ್ಗಾವಣೆ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
ನೀವು ಕೂಡ ಫಲಾನುಭವಿಗಳಾಗಿದ್ದು ಅರ್ಜಿ ಹಾಕಿದ್ದೇನೆ ಆದರೆ ಇನ್ನೂ ಹಣ ಬಂದಿಲ್ಲ ಎಂದು ಯೋಚನೆ ಮಾಡುತ್ತಿದ್ದರೆ ಅದನ್ನು ಕೇವಲ ಕೆಲವೇ ಕೆಲವು ಕ್ಷಣಗಳಲ್ಲಿ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂ. ವರ್ಗಾವಣೆ ಆಗಿದ್ಯೋ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ನೋಡೋಣ.
ಮೊಬೈಲ್ ನಲ್ಲಿಯೇ ಪರಿಶೀಲಿಸುವುದು ಹೇಗೆ?
• ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಡಿಬಿಟಿ ಕರ್ನಾಟಕ (DBT Karnataka) ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
• ನಂತರ ಆಪ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.
• ಇನ್ಸ್ಟಾಲ್ ಆದ ನಂತರ ಮೊದಲಿಗೆ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ. ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಬರುತ್ತದೆ.
• ಓ ಟಿ ಪಿ ಬಂದ ನಂತರ ಅದನ್ನು ಆಪ್ ನಲ್ಲಿ ಹಾಕಿ ವೆರಿಫೈ ಮಾಡಬೇಕು.
• ಬಳಿಕ ನಿಮ್ಮ ಆಯ್ಕೆಯ ನಾಲ್ಕು ಸಂಖ್ಯೆಗಳನ್ನು ಹಾಕಿ ಪಾಸ್ವರ್ಡ್ ಸೆಟ್ ಮಾಡಿ.
• ಬಳಿಕ ಡಿಬಿಟಿ ಕರ್ನಾಟಕ ಆಪ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನ ಸಂಪೂರ್ಣ ವಿವರ ಬರುತ್ತದೆ.
• ಆಪ್ ತೆರೆದ ನಂತರ ಪೇಮೆಂಟ್ ಎನ್ನುವ ಆಯ್ಕೆಯನ್ನು ನೀವು ಕಾಣಬಹುದು. ಅಲ್ಲಿ ಕ್ಲಿಕ್ ಮಾಡಿದರೆ ಡಿ ಬಿ ಟಿ ಮೂಲಕ ಸರ್ಕಾರದ ಯಾವೆಲ್ಲ ಯೋಜನೆಯ ಹಣ ವರ್ಗಾವಣೆ ಆಗಿದೆ ಎಂಬುದು ತೋರಿಸುತ್ತದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ಕೂಡ ನೀವು ಸುಲಭವಾಗಿ ಚೆಕ್ ಮಾಡಬಹುದು.
ಸಪ್ಟೆಂಬರ್ 5ರ ಒಳಗೆ ಎಲ್ಲಾ ಗೃಹಿಣಿಯರ ಖಾತೆಗೆ ಹಣ ಜಮಾ ಆಗಲಿದ್ದು, ಈ ಬಗ್ಗೆ ಸರ್ಕಾರ ಕೂಡ ಮಾಹಿತಿ ಸಂದೇಶವನ್ನು ಕಳುಹಿಸುತ್ತಿದೆ. ನಿಮ್ಮ ಅರ್ಜಿ ಸಲ್ಲಿಕೆ ಸರಿಯಾಗಿದ್ದರೆ ತಕ್ಷಣವೇ ನಿಮ್ಮ ಖಾತೆಗೆ ನೇರವಾಗಿ 2000 ರೂ. ವರ್ಗಾವಣೆಯಾಗುತ್ತದೆ.