Arecanut Plant: ಅಡಿಕೆ ತೋಟದಲ್ಲಿ ಉಳುಮೆ ಮಾಡುವ ಅಗತ್ಯ ಇದೆಯಾ? ಇಲ್ಲವಾದರೆ ಪಸಲು ಬರೋಲ್ವಾ? ಇಲ್ಲಿದೆ ಅಸಲಿ ಸತ್ಯ!
ಬಹುತೇಕ ಅಡಿಕೆ ಬೆಳೆಗಾರರಲ್ಲಿ ಇರುವ ಗೊಂದಲ ಅಥವಾ ದ್ವಂದ್ವ ಇದು. ಅಡಿಕೆ ತೋಟದಲ್ಲಿ ಉಳುಮೆ ಮಾಡಬೇಕಾ ಎನ್ನುವುದು. ಸಾಮಾನ್ಯವಾಗಿ ಗದ್ದೆಗಳಲ್ಲಿ ಭತ್ತ, ರಾಗಿ. ಜೋಳ ಮೊದಲಾದ ಬೆಳೆಗಳನ್ನು ಬೆಳೆಯುವಾಗ ಗದ್ದೆಯನ್ನು ಉಳುಮೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಫಲವತ್ತಾದ ಮಣ್ಣು ಹೊರಗಡೆ ಬರುವುದಿಲ್ಲ ಇದರಿಂದ ಬೆಳೆ ಕೂಡ ಉತ್ತಮವಾಗಿ ಬರುವುದಿಲ್ಲ ಹಾಗಾಗಿ ಗದ್ದೆಗಳಲ್ಲಿ ಉಳುಮೆ ಮಾಡುವುದು ಸಹಜ ಆದರೆ ತೋಟಗಳಲ್ಲಿಯೂ ಕೂಡ ಉಳುಮೆ ಮಾಡುವ ಅಗತ್ಯ ಇದೆಯಾ ಎನ್ನುವುದು ಹಲವರ ಪ್ರಶ್ನೆ ಈ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಅಡಿಕೆ ತೋಟದಲ್ಲಿ ಉಳುಮೆ:
ಅಡಿಕೆ ತೋಟದಲ್ಲಿ ಉಳುಮೆ ಮಾಡಬೇಕಾ ಬೇಡವಾ ಎನ್ನುವ ಬಗ್ಗೆ ಹಲವರಲ್ಲಿ ಗೊಂದಲ ಇರುತ್ತದೆ ಸಾಮಾನ್ಯವಾಗಿ ನೀವು ಅತಿ ಹಳೆಯ ಅಡಿಕೆ ತೋಟಗಳನ್ನು ನೋಡಿದರೆ ಅದರಲ್ಲಿ ಉಳುಮೆ ಮಾಡಿರುವ ಉದಾಹರಣೆಗಳು ಕಡಿಮೆ. ಬಹಳ ಸಾಂಪ್ರದಾಯಿಕವಾಗಿ ಸುಲಭವಾಗಿ ಅಡಿಕೆ ತೋಟವನ್ನು ನಿರ್ವಹಣೆ ಮಾಡಿಕೊಂಡು ಬಂದಿರುವ ರೈತರೇ ಹೆಚ್ಚು. ಆದರೆ ಭೂಮಿಯಲ್ಲಿ ಫಲವತ್ತತೆ ಕಡಿಮೆ ಇದ್ದಾಗ ಅಥವಾ ಮೇಲ್ಮಣ್ಣಿನಲ್ಲಿ ಫಲವತ್ತತೆ ಇಲ್ಲದೆ ಕೆಳಮಣ್ಣಿನಲ್ಲಿ ಮಾತ್ರ ಫಲವತ್ತತೆ ಹೆಚ್ಚಾಗಿ ಇದ್ದಾಗ ಅಡಿಕೆ ಮರಕ್ಕೆ ಬೇಕಾಗಿರುವ ಫಲವತ್ತತೆಯನ್ನು ಒದಗಿಸುವ ಸಲುವಾಗಿ ಕೆಲವೊಮ್ಮೆ ಉಳುಮೆ ಮಾಡಬೇಕಾಗುತ್ತದೆ.
ಇನ್ನು ಉಳುಮೆ ಮಾಡುವುದು ಎಂದರೆ ಕೈಯಲ್ಲಿ ಅಥವಾ ಇತರ ಉಪಕರಣಗಳಿಂದ ಉಳುಮೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಟ್ರಾಕ್ಟರ್ ಗಳನ್ನು ಬಳಸಬೇಕು. ಉಳುಮೆ ಮಾಡಲು ಬಳಸುವ ಟ್ಯಾಕ್ಟರ್ ಗಳಲ್ಲಿ ಸಾಕಷ್ಟು ವೈವಿಧ್ಯತೆಗಳು ಇರುತ್ತವೆ. ರೋಟರಿ ಟ್ರ್ಯಾಕ್ಟರ್ ಓಡಿಸುವುದು ಅಥವಾ ಬಾಂಡ್ಲಿ ಹೊಡೆಸುವುದು, ಬಲರಾಮ್ ಹೊಡೆಸುವುದು ಮೊದಲ ರೀತಿಯ ಯಂತ್ರಗಳಲ್ಲಿ ಉಳುಮೆ ಮಾಡುತ್ತಾರೆ.
ಇನ್ನು ಉಳುಮೆ ಮಾಡುವಾಗ ಅಡಿಕೆ ಗಿಡದ ಬೇರುಗಳಿಗೆ ತೊಂದರೆಯಾಗುತ್ತದೆ ಎನ್ನುವುದು ಹಲವು ರೈತರನ್ನು ಇರುವ ಗೊಂದಲ. ಮೊದಲನೆಯದಾಗಿ ಅಡಿಕೆ ಗಿಡದ ಬೇರುಗಳು ಭೂಮಿಯ ಮೇಲೆ ಸಮಾನಾಂತರವಾಗಿ ಹರಡಿಕೊಳ್ಳುತ್ತದೆ. ಇದು ಹೆಚ್ಚು ಆಳವಾಗಿ ಹೋಗುವುದಿಲ್ಲ ಸುಮಾರು ಎರಡರಿಂದ ನಾಲ್ಕು ಅಡಿಗಳ ಒಳಗೆ ಮಾತ್ರ ಬೇರುಗಳು ಬಿಡುತ್ತವೆ ಅದಕ್ಕಿಂತ ಹೆಚ್ಚಾಗಿ ಅಡಿಕೆ ಮರದ ಬೇರುಗಳು ಇರುವುದಿಲ್ಲ. ಹಾಗಾಗಿ ಉಳಿಮೆ ಮಾಡುವಾಗ ಉಪಕರಣಗಳ ಸಹಾಯದಿಂದ ಮಣ್ಣನ್ನು ಮೇಲೆ ಕೆಳಗೆ ಮಾಡುವುದರಿಂದ ಅಡಿಕೆ ಗಿಡದ ಬೇರುಗಳಿಗೆ ತೊಂದರೆ ಆಗುವುದಿಲ್ಲ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಷಯ ಏನೆಂದರೆ, ಅಡಿಕೆ ಗಿಡದ ಹತ್ತಿರದಲ್ಲಿ ಉಳುಮೆ ಮಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ಯಾಕೆಂದರೆ ಅಂತಹ ಸಂದರ್ಭದಲ್ಲಿ ಗಿಡದ ಮೇಲೆ ಬಂದಿದ್ದ ಬೇರುಗಳು ಹಾನಿಗೊಳಗಾಗುವ ಸಂದರ್ಭ ಇರುತ್ತದೆ. ಇನ್ನು ಉಳುಮೆ ಮಾಡುವ ಟ್ಯಾಕ್ಟರ್ ಗಳಲ್ಲಿ ಈಗ ಇನ್ನೂ ನೂತನ ಮಾದರಿಯ ಟ್ಯಾಕ್ಟರ್ ಗಳು ಕೂಡ ಬಂದಿತು ಇದರ ಸಹಾಯದಿಂದ ಉಳುಮೆ ಮಾಡಿದರೆ ಕೇವಲ ಮಣ್ಣುಗಳು ಮಾತ್ರ ಮೇಲೆ ಕೆಳಗೆ ಮಿಶ್ರಣ ಕೊಡುತ್ತದೆ ಹೊರತು ಅಡಿಕೆ ಮರದ ಬೇರುಗಳಿಗೆ ತೊಂದರೆ ಆಗುವುದಿಲ್ಲ.
ಉಳುಮೆ ಯಾವಾಗ ಮಾಡಬೇಕು?
ಗದ್ದೆಗಳಲ್ಲಿ ಮಾಡಿದಂತೆ ಅಡಿಕೆ ತೋಟಗಳಲ್ಲಿ ಉಳುಮೆ ಮಾಡಲೇಬೇಕು ಎನ್ನುವ ನಿಯಮ ಇಲ್ಲ ಒಂದು ವೇಳೆ ನಿಮ್ಮ ಜಮೀನಿನಲ್ಲಿ ಕಪ್ಪು ಮಣ್ಣು ಇದ್ದರೆ ಅದು ಹೆಚ್ಚು ಸಮಯ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ ಹಾಗಾಗಿ ಗಿಡಗಳಿಗೆ ಬೇಕಾಗುವ ನೀರು ಪೋಷಕಾಂಶ ಅದರಿಂದಲೇ ದೊರೆಯುತ್ತದೆ. ಆದರೆ ಕೆಲವು ಮಣ್ಣುಗಳು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಮಳೆಗಾಲದ ಬಳಿಕ ಶುಷ್ಕ ವಾತಾವರಣ ಆರಂಭವಾದಾಗ ಭೂಮಿಯಲ್ಲಿ ಶುಷ್ಕತೆ ಉಂಟಾಗುತ್ತದೆ ಜೊತೆಗೆ ಭೂಮಿ ಬಿರುಕು ಬಿಡಲು ಆರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ ಗಿಡಕ್ಕೆ ಬೇಕಾದ ಪೋಷಕಾಂಶ ದೊರೆಯುವುದಿಲ್ಲ ಹಾಗಾಗಿ ಕೆಲವೊಂದು ಮೇಲಕ್ಕೆ ಎತ್ತುವಂತಹ ಉಳುಮೆ ಮಾಡುವ ಕೆಲಸ ಅನಿವಾರ್ಯವಾಗುತ್ತದೆ.
ಸಾವಯವ ಗೊಬ್ಬರ ಅಥವಾ ಸಾವಯವ ಕೃಷಿಯ ಮೂಲಕ ನೀವು ಗಿಡಗಳ ನಿರ್ವಹಣೆ ಮಾಡುತ್ತಿದ್ದರೆ ಉಳುಮೆ ಮಾಡುವ ಅಗತ್ಯ ಇರುವುದಿಲ್ಲ ಗಿಡಗಳಿಗೆ ಬೇಕಾದ ಪೋಷಕಾಂಶಗಳು ಅದರಿಂದಲೇ ಸಿಗುತ್ತವೆ. ಇನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಅಡಿಕೆ ತೋಟದಲ್ಲಿ, ಕಾಳುಗಳನ್ನು ಕರೆಸಿ ನೇಗಿಲು ಹೊಡಿಸುವ ಅಭ್ಯಾಸವಿದೆ. ಇದು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವುದಕ್ಕಿಂತ ಒಳ್ಳೆಯದು ಆದರೆ ಈಗ ಈ ಖರ್ಚನ್ನು ನಿಭಾಯಿಸುವುದು ಕಷ್ಟ ಅದರಲ್ಲೂ ದೊಡ್ಡ ಮಟ್ಟದಲ್ಲಿ ಅಡಿಕೆ ಕೃಷಿ ಮಾಡಿದರೆ ಇಂತಹ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವುದು ಬೆಸ್ಟ್. ಆದಾಗಿಯೂ ತಜ್ಞರ ಸಲಹೆಯ ಪ್ರಕಾರ ಅಡಿಕೆ ತೋಟದಲ್ಲಿ ಉಳುಮೆ ಮಾಡಲೇಬೇಕು ಎನ್ನುವ ಅನಿವಾರ್ಯತೆ ಇರುವುದಿಲ್ಲ ಹಾಗಾಗಿ ಅಡಿಕೆ ತೋಟದ ಮಣ್ಣಿನ ಲಕ್ಷಣವನ್ನು ನೋಡಿಕೊಂಡು ಉಳುಮೆ ಮಾಡುವ ಬಗ್ಗೆ ರೈತರು ನಿರ್ಧಾರ ಕೈಗೊಳ್ಳಬಹುದು.