Karnataka Times
Trending Stories, Viral News, Gossips & Everything in Kannada

Anant Ambani: ಅನಂತ್ ಅಂಬಾನಿ ಇಷ್ಟು ದಪ್ಪವಾಗಲು ನೈಜ ಕಾರಣ ತಿಳಿಸಿದ ಅಂಬಾನಿ ಕುಟುಂಬ

Advertisement

ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ ಮುಕೇಶ್ (Mukesh Ambani) ಮತ್ತು ನೀತಾ ಅಂಬಾನಿ (Nita Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯ ಅವರ ಅತಿಯಾದ ದೇಹದ ತೂಕವೇ ಎಲ್ಲೆಡೆ ಬಿಸಿ ಚರ್ಚೆಗೆ ಕಾರಣವಾದ ಸಂಗತಿಯಾಗಿದೆ.

ವೈಟ್ ಲಾಸ್ ನಿಂದ ಫ್ಯಾಟ್ ಆದದ್ದೇಕೆ?

ಇತ್ತೀಚೆಗಷ್ಟೇ ಅನಂತ್ ಅಂಬಾನಿ ಅವರು ಸಿಕ್ಕಾಪಟ್ಟೆ ದೇಹದಲ್ಲಿ ಕಸರತ್ತು ಮಾಡಿ ವೈಟ್ ಲಾಸ್ (Weight Loss) ಮಾಡಿದ್ದಾರೆ ಅನ್ನೊ ಸುದ್ದಿ ವೈರಲ್ ಆಗಿತ್ತು. ಈ ಮೂಲಕ 2016ರಲ್ಲಿ 19ತಿಂಗಳ ಕಾಲ ವರ್ಕೌಟ್ ಮಾಡಿ ತೆಳ್ಳಗಾಗಿದ್ದರು. ದಿನನಿತ್ಯ ದೇಹದ ಆರೋಗ್ಯಕ್ಕೆ ಅಗತ್ಯವಾಗುವ ಸೊಪ್ಪು, ಹಣ್ಣು, ತರಕಾರಿ, ಕೊಬ್ಬಿನಾಂಶ ಇಲ್ಲದ ಆಹಾರ ಸೇವನೆ ಮಾಡಿ, ಯೋಗ ದೈನಿಕ ವ್ಯಾಯಾಮಾ, ವಾಕಿಂಗ್ ಇವರ ದಿನಚರಿಯಾಗಿತ್ತು. ಆದರೆ ಒಮ್ಮಿಂದೊಮೆಲ್ಲೆ ನಿಶ್ಚಿತಾರ್ಥದ ವೇಳೆ ಅವರ ದೇಹದ ತೂಕ ಹೆಚ್ಚಾಗಿತ್ತು. ಅದಕ್ಕೆ ಮುಲ ಕಾರಣ ಅವರಿಗಿದ್ದ ಖಾಯಿಲೆ ಎಂದು ತಿಳಿದು ಬಂದಿದೆ.

ಔಷಧದ ಅಡ್ಡ ಪರಿಣಾಮ ಕಾರಣವಾಯಿತೆ?

ಅನಂತ್ ಅಂಬಾನಿ ಅವರಿಗೆ ಅಸ್ತಮ ಖಾಯಿಲೆ (Asthma) ಇದ್ದು ಅದಕ್ಕಾಗಿ ಅವರು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಖಾಯಿಲೆ ಶಮನ ಮಾಡಲೆಂದೆ ಸ್ಟೀರಾಯ್ಡ್ ಅನ್ನು ಬಳಸಲಾಗುತ್ತಿತ್ತು ಈ ಮೂಲಕ ಈ ಸ್ಟೀರಾಯ್ಡ್ ಸೇವನೆ ಅವರ ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ‌. ಅಷ್ಟು ಮಾತ್ರವಲ್ಲದೆ ಅಸ್ತಮ ಇರುವವರಿಗೆ ದೇಹದಲ್ಲಿ ಉಸಿರಾಟದ ತೊಂದರೆ ಇರುತ್ತದೆ , ಅನಂತ್ ಅಂಬಾನಿ ಅವರು ದೇಹದ ವ್ಯಾಯಾಮ, ಸಿಂಪಲ್ ವಾಕ್ ಮಾಡುವಂತೆ ವೈದ್ಯರು ಸಲಹೆ ನೀಡಿದ್ದರೂ ಈ ಮೂಲಕ ಅವರ ತೂಕ ಕಡಿಮೆ ಇದ್ದದ್ದು ಒಮ್ಮಿಂದೊಮ್ಮೆಲೆ ಅಧಿಕವಾಯಿತು. ಸ್ಟೀರಾಯ್ಡ್ (Stiroid) ನಲ್ಲಿ ಅತಿಯಾಗಿ ನೀರಿನ ದಾಹ ತರುವ, ಹಸಿವಾಗುವ ಅನೇಕ ಅಂಶಗಳಿದ್ದು ಇದು ದೇಹದ ತೂಕಕ್ಕೆ ಕಾರಣ ಸಹ ಆಗುತ್ತದೆ. ಈ ಬಗ್ಗೆ ಸ್ವತಃ ಅನಂತ್ ಅಂಬಾನಿ ಅವರ ತಾಯಿ ನೀತಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಒಟ್ಟಾರೆಯಾಗಿ ಶ್ರೀಮಂತಿಕೆ ಎಷ್ಟಿದ್ದರೂ ಆರೋಗ್ಯದಲ್ಲಿ ಶ್ರೀಮಂತರಾಗದಿದ್ದರೆ ಎಲ್ಲವೂ ವ್ಯರ್ಥವಿದ್ದಂತೆ. ಹಾಗಾಗಿ ಇದ್ದಾಗಲೇ ದೇಹ ಆರೋಗ್ಯದ ಕಡೆ ಗಮನಿಸಿ ಖಾಯಿಲೆ ಬರದಂತೆ ಎಚ್ಚರ ವಹಿಸುವುದು ಅತ್ಯಗತ್ಯ ಒಂದು ಸಲಹೆಯಾಗಿದೆ.

Leave A Reply

Your email address will not be published.