Karnataka Times
Trending Stories, Viral News, Gossips & Everything in Kannada

Anant Nag: ರಾಜಕೀಯ ಪ್ರವೇಶದ ಬಗ್ಗೆ ಅನಂತ್ ನಾಗ್ ನಿರ್ಧಾರ ಪ್ರಕಟ, ಇಲ್ಲಿದೆ ಉತ್ತರ

ಗೌರಿ ಗಣೇಶ ಸಿನೆಮಾ ನಿಮಗೆಲ್ಲ ನೆನಪಿರಬಹುದು ಅದರಲ್ಲಿ ಲಂಭೋದರ ಅನ್ನೊ ಪಾತ್ರಧಾರಿಯೂ ಎಲ್ಲರಿಗೂ ಮೋಸ ಮಾಡಿ ಬಳಿಕ ಎಲ್ಲಿವರೆಗೂ ಸಮಾಜದಲ್ಲಿ ಮೋಸ ಹೋಗುವವರು ಇರ್ತಾರೋ ಅಲ್ಲಿವರೆಗೂ ಮೋಸ ಮಾಡುವವರು ಸಹ ಇದ್ದೇ ಇರುತ್ತಾರೆ ಅನ್ನೊ ಮೆಸೇಜ್ ನೀಡುತ್ತಾ ಹ್ಯಾಪಿ ಎಂಡಿಂಗ್ (Ending) ಕೊಟ್ಟ ಸಿನೆಮಾ ಇದು ಈ ಮೂಲಕ ಸಿನೆಮಾ ಪರದೆಯ ಮೇಲೆ ನಟ ಅನಂತ್ ನಾಗ್ (Anant Nag) ಕಂಪ್ಲೀಟ್ ಆಗಿ ಮಿಂಚಿದ್ದರು. ಈ ಮೂಲಕ ರಾಜಕೀಯ ರಂಗದಲ್ಲೂ ಜನರು ಮೋಸದ ಆಶ್ವಾಸನೆಗೆ ಬೆಂಬಲ ನೀಡೋ ವರೆಗೂ ಒಳ್ಳೆ ಆಡಳಿತ ಬರೊಲ್ಲ ಎಂದು ಖಾಸಗಿ ವಾಹಿನಿಯಲ್ಲಿ ಹೇಳಿಕೆಯನ್ನು ನೀಡುವ ಮೂಲಕ ಬಿಜೆಪಿ (BJP) ಪರವಾಗಿ ಕೆಲವೊಂದು ಮಾತನಾಡಿದ್ದ ವೀಡಿಯೋ (Video Viral) ವೈರಲ್ ಆದ ಬೆನ್ನಲ್ಲೆ ಈ ಹಿರಿಯ ನಟ ಬಿಜೆಪಿ ಸೇರಿಕೊಂಡಿದ್ದಾರೆ ಅನ್ನೊ ಮಾತು ಸಹ ಕೇಳಿ ಬರುತ್ತಿದೆ.

Advertisement

ಮೇರು ನಟ: 

Advertisement

ನಟ ಅನಂತ್ ನಾಗ್ ಅವರು ನಾಯಕನಾಗಿ ಬಳಿಕ ಪೋಷಕ ನಟರಾಗಿ ಅನೇಕ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಸುದೀಪ್, ದರ್ಶನ್, ಗಣೇಶ್, ಶಿವರಾಜ್ ಕುಮಾರ್, ವಿಜಯರಾಘವೇಂದ್ರ, ರಾಕಿಬಾಯ್ ಯಶ್ ಇನ್ನು ಅನೇಕರ ಪಟ್ಟಿ ಹೇಳುತ್ತಾ ಸಾಗಿದರೆ ಈ ವ್ಯಕ್ತಿ ಬಹುತೇಕ ಎಲ್ಲರೊಂದಿಗೂ ಸಿನೆಮಾ ಮಾಡಿದ್ದಾರೆ ಎಂದೇ ಹೇಳಬಹುದು. ತಂದೆಯಾಗಿ, ಮಾವನಾಗಿ, ಬಾಸ್ ಆಗಿ ಇನ್ನು ಅನೇಕ ವಿಧದ ಅಭಿನಯದ ಮೂಲಕ ಸಾಲು ಸಾಲು ಪ್ರಶಸ್ತಿಗೂ ಬಾಜಿನರಾಗಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾದಲ್ಲಂತೂ ಅಪ್ಪಟ ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ಇವರು ಒಬ್ಬ ನಟ ಮಾತ್ರವಲ್ಲದೆ ರಾಜಕೀಯ ಪ್ರವೀಣ ಎಂದು ಸಹ ಹೇಳಬಹುದು. ರಾಜಕೀಯದ ವಿಚಾರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರನ್ನು ಖಾಸಗಿ ವಾಹಿನಿಯೊಂದು ಸಂದರ್ಶನಕ್ಕೆ ಕರೆಸಿದ್ದಾಗ ಅವರು ಮೋದಿ ಅವರ ಪರವಾಗಿ ಸಾಕಷ್ಟು ಮಾತಾಡಿದ್ದರು. ಈ ಮೂಲಕ ಬಿಜೆಪಿ (BJP) ಬೆಂಬಲಿಗನೆಂದು ಪರೋಕ್ಷವಾಗಿ ಹೇಳಿದ್ದರು.

Advertisement

ರಾಜಕೀಯಕ್ಕೆ ಬಂದ್ರಾ?:

Advertisement

ನಟ ಅನಂತ್ ನಾಗ್ ಅವರು ರಾಜಕೀಯಕ್ಕೆ ಬರುತ್ತಾರೆ ಎಂದು ಕೆಲವರು ಹೇಳಿದರೆ ಅದರಲ್ಲೂ ಬಿಜೆಪಿಗೆ ಸೇರಿದ್ದಾರೆ ಎಂದು ಸಹ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಆ ವಿಚಾರ ಸತ್ಯಕ್ಕೆ ದೂರ ಎಂದೆ ಹೇಳಬಹುದು. ‌ ಅವರು ಯಾವುದೇ ಪಕ್ಷಕ್ಕೆ ಸೇರಿಲ್ಲ ಇದೆಲ್ಲ ಸುಳ್ಳು ಸುದ್ದಿ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ. ಈ ಮೂಲಕ ರಾಜಕೀಯದಲ್ಲಿ ಅನಂತ್ ನಾಗ್ ಬಂದರೆ ಉತ್ತಮ ಆಡಳಿತಕ್ಕೆ ಒಂದು ಬೆಂಬಲವಾಗಲೂ ಬಹುದೆಂಬ ಅಭಿಪ್ರಾಯ ಕೂಡ ಮೂಡುತ್ತಿದೆ‌.

Leave A Reply

Your email address will not be published.