ಇದೇ ಮೇ 10ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿದೆ. ಮೇ 13 ರಂದು ಕರ್ನಾಟಕ ರಾಜ್ಯದ ಚುಕ್ಕಾಣಿ ಯಾರ ಪರವಾಗಿ ಬರಲಿದೆ ಎನ್ನುವುದನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಲಿದೆ. ಇನ್ನು ಈಗಾಗಲೇ ಪ್ರಜಾಕೀಯದ ಮೂಲಕ ಕೂಡ ಸದ್ದು ಮಾಡುತ್ತಿರುವ ನಟ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರು ಸೋಶಿಯಲ್ ಮೀಡಿಯಾದಲ್ಲಿ ಎಲೆಕ್ಷನ್ ಕುರಿತಂತೆ ಸಾಕಷ್ಟು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ನೋಟ ವೋಟ್(Nota Vote) ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ನೋಟಾ ಓಟಿನ ಕುರಿತಂತೆ ಗೂಗಲ್ ಪ್ರಕಾರ ಸಿಕ್ಕಿರುವಂತಹ ಮಾಹಿತಿಯನ್ನು ಹಂಚಿಕೊಂಡು ಉಪೇಂದ್ರ ಅವರು ಈ ಕುರಿತಂತೆ ನೆಟ್ಟಿಗರಿಗೆ ವಿವರಣೆಯನ್ನು ನೀಡಿದ್ದಾರೆ. ” ಒಬ್ಬರು ನೋಟಾ ಓಟನ್ನು ಮಾಡುವುದು ಅಭ್ಯರ್ಥಿಯನ್ನು ಅವರು ತಿರಸ್ಕರಿಸಿದ್ದಾರೆ ಎಂದರ್ಥ. ಬಹು ಸಂಖ್ಯಾತರು ಇದನ್ನು ಮಾಡಿದರೆ ಎಲ್ಲರೂ ಕೂಡ ಆ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಇದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಉಪೇಂದ್ರ(Upendra) ಅವರು ಈ ಸಂದರ್ಭದಲ್ಲಿ ಆ ಚುನಾವಣೆಯನ್ನೇ ಅನೂರ್ಜಿತ ಎಂದು ಪರಿಷ್ಕರಿಸಿ ಹೊಸ ಚುನಾವಣೆಯನ್ನು ನಡೆಸಿ ಹಿಂದಿನ ಅಭ್ಯರ್ಥಿಗಳನ್ನು ತೆಗೆದು ಹೊಸ ಅಭ್ಯರ್ಥಿಗಳನ್ನು ಘೋಷಿಸಬೇಕು ಎನ್ನುವುದಾಗಿ ಹೇಳಿದ್ದಾರೆ.
ಇನ್ನು ಪ್ರಜಾಕಿಯದಿಂದ(Prajakeeya) ಉಪೇಂದ್ರ ಅವರು ಈಗಾಗಲೇ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಕೂಡ ನೀಡಿದ್ದು ಇದರ ಅನ್ವಯ ಏಪ್ರಿಲ್ 2ನೇ ವಾರದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಉಪೇಂದ್ರ ಅವರ ನಾಯಕತ್ವದ ಪ್ರಜಾಕೀಯ ಪಕ್ಷ ಯಾವ ರೀತಿಯಲ್ಲಿ ವಿಭಿನ್ನವಾದ ಪರಿಣಾಮವನ್ನು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಪ್ರಜಾಕೀಯ ಪಕ್ಷದ ಕುರಿತಂತೆ ಈ ಚುನಾವಣೆಯಲ್ಲಿ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.